ನಮ್ಮ ದೇಶದ ವಿಚಾರಗಳನ್ನು ಬೇರೆ ರಾಷ್ಟ್ರಗಳು ಹೇಳಿದಾಗ ನಾವು ಚಪ್ಪಾಳೆ ತಟ್ಟಿ ಒಪ್ಪುತ್ತೇವೆ ಯಾಕೆಂದರೆ ಅವರು ವೈಜ್ಞಾನಿಕ ಹಿನ್ನಲೆಯಲ್ಲಿ ಮಾತನಾಡುತ್ತಾರೆ. ನಾವು ಹೇಳುವಾಗ ವೈಜ್ಞಾನಿಕ ಪುರಾವೆಗಳಿರುದಿಲ್ಲ ಎಂಬುದು ಇದಕ್ಕೆ ಕಾರಣ. ಹೀಗಾಗಿ ನಾವು ನಮ್ಮ ಸ್ವಂತಿಕೆ ನಮ್ಮ ದೇಶಿಯ ಚಿಂತನೆಯ, ಪುರಾತನ ಜ್ಞಾನವನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ.
ಈ ಹಿಂದೆಯೇ ನಮ್ಮ ಜ್ಯೋತಿಷ್ಯ ಶಾಸ್ತ್ರವು ನವಗ್ರಹಗಳ ಚಿಂತನೆಯನ್ನು , ಗ್ರಹಣಗಳ ಬಗ್ಗೆ ಮತ್ತು ಇನ್ನಿತರ ವಿಷಯಗಳ ಬಗ್ಗೆ ಹೇಳಿದೆ. ಆದರೆ ಹಿತ್ತಲ ಗಿಡ ಮದ್ದಲ ಎಂಬಂತೆ ನಮಗೆ ಅದು ಕೇವಲ ಮೂಢನಂಬಿಕೆ ಎಂದು ಹೇಳುತ್ತಾ ಸುಮ್ಮನಾದೆವು. ಆದರೆ ನಾಸಾ ಕೆಲವೇ ದಿನಗಳ ಹಿಂದೆ ಪ್ಲೂಟೋ ಬಗ್ಗೆ ಮಾತನಾಡುವಾಗ ಸೌರ ಮಂಡಲದ ನವಗ್ರಹಗಳ ಕಲ್ಪನೆಯನ್ನು ಒಪ್ಪಿಕೊಳ್ಳುವ ಸಂದರ್ಭ ಬಂದಿದೆ. ಯಾಕೆಂದರೆ ಅದು ವೈಜ್ಞಾನಿಕವಾಗಿದೆ. ಇದರಿಂದ ನಮ್ಮ ಹಿರಿಯರಿಗೆ ಮೊದಲೇ ನವಗ್ರಹಗಳ ಕಲ್ಪನೆ ಇತ್ತು ಎಂಬುದು ಸಾಬೀತಾಯಿತು. ಅದನ್ನು ಅವರು ಶಾಸ್ತ್ರಗಳಲ್ಲಿ ಅಳವಡಿಸಿ ನಮ್ಮ ಜೀವನಕ್ಕೆ ಸಹಾಯವಾಗುವಂತೆ ಶಾಸ್ತ್ರಗಳನ್ನು ರೂಪಿಸಿದರು. ಭಾರತ ಈ ಹಿಂದೆಯೇ ಇಂತಹ ವಿಷಯಗಳಲ್ಲಿ ತನ್ನ ಸಂಶೋಧನೆಯನ್ನು ಈ ಶಾಸ್ತ್ರಗಳ ಆಧಾರದಲ್ಲಿ ಬರೆದಿತ್ತು. ಇಡಿಯ ಬ್ರಹ್ಮಾಂಡವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು. ಭೂಮಿ, ಆಕಾಶ ಮತ್ತು ಸ್ವರ್ಗಗಳಾಗಿ ವಿಂಗಡಿಸಲಾಗಿದೆ. ತದ ನಂತರ ಭೂಮಿಯ ಕೆಳಗೆ ಏಳು ಮತ್ತು ಮೇಲೆ ಏಳು ಲೋಕವಿದೆ ಎಂದೂ ಹೇಳಲಾಗಿದೆ. ಅಲ್ಲದೆ ಭೂಮಿಯನ್ನು 7 ದ್ವೀಪಗಳಾಗಿ ವಿಂಗಡಿಸಿದ್ದಾರೆ ಆ ದ್ವೀಪಗಳನ್ನು 9 ವರ್ಷಗಳಾಗಿ ವಿಂಗಡಿಸಿದ್ದಾರೆ . ಪ್ರತೀ ವರ್ಷಗಳನ್ನು 9 ಖಂಡಗಳಾಗಿ ವಿಂಗಡಿಸಿದೆ. ಭಾರತ ಭರತ ವರ್ಷ ಜಂಬೂದ್ವೀಪದಲ್ಲಿದೆ. ಅಲ್ಲದೇ ಇದರಲ್ಲಿ 10 ಅರಣ್ಯ,35 ನದಿಗಳು ಮತ್ತು ಹಲವು ಪವರ್ತಗಳ ಉಲ್ಲೇಖವೂ ಇದೆ.
ಮಹಾಭಾರತದ ರಾಮಾಯಣಗಳಲ್ಲಿ ಪುಷ್ಪಕ ವಿಮಾನದ ಉಲ್ಲೇಖವಿತ್ತು. ಮಹರ್ಷಿ ಭಾರದ್ವಜರು 10000 ವರ್ಷಗಳ ಹಿಂದೆ ವಿಮಾನದ ಸೂತ್ರದ ಬಗ್ಗೆ ಬರೆದಿದ್ದರು. ಆದರೆ ನಾವದನ್ನು ಅಸುಸರಿಸಲು ತಯಾರಿಲ್ಲ. ಇದನ್ನು ಆಧರಿಸಿ ರೈಟ್ ಬ್ರದರ್ಸ್ಗೂ ಮುನ್ನ ಶಿವಕರ್ ಬಾಪೂಜಿ ತಾಲ್ಪಡೆಯವರು 1895 ರಲ್ಲಿ ಮಾರುತಸಖ ಎಂಬ ಹೆಸರಿನಲ್ಲಿ ವಿಮಾನ ಮಾಡಿದ್ದರು.
ಪ್ರಪಂಚಕ್ಕೆ ಭಾರತದ ಕೊಡುಗೆ ಶೂನ್ಯ ಎಂದು ಹೇಳಿ ನಗುವವರಿದ್ದಾರೆ. ಆದರೆ ಭಾರತ ಪ್ರಪಂಚಕ್ಕೆ`0` ದಯಪಾಲಿಸದಿದ್ದರೆ ಲೆಕ್ಕಾಚಾರವೇ ಸರಿಯಾಗುತ್ತಿರಲಿಲ್ಲ.
ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ಸ್ಟೀನ್ ಪ್ರಕಾರ : ನಾವು ಭಾರತೀಯರಿಂದ ಸಾಕಷ್ಟನ್ನು ಪಡೆದು ಕೊಂದಿದ್ದೇವೆ ಭಾರತ ನಮಗೆ ಹೇಗೆ ಲೆಕ್ಕಮಾಡಬೇಕು ಎಂದು ತಿಳಿಸಿಕೊಟ್ಟಿದೆ. ಇದಿಲ್ಲದೆ ಯಾವುದೇ ವೈಜ್ಞಾನಿಕ ಅನ್ವೇಷನೇಗಳು ನಡೆಯಲು ಸಾಧ್ಯವಿರುತ್ತಿರಲಿಲ್ಲ ಎಂದು ಹೇಳಿದ್ದಾರೆ.( “We owe a lot to the Indians, who taught us how to count, without which no worthwhile scientific discovery could have been made”)
ಈ ಹಿಂದೆ ಸರಸ್ವತಿ ನದಿಯ ಹರಿವಿನ ಬಗ್ಗೆ ಪ್ರತಿಪಾದಿಸಿದಾಗ ಹಲವರು ವಿರೋಧಿಸಿದರು ಕೆಲವು ವರ್ಷಗಳ ಹಿಂದೆ ನಾಸ ತನ್ನ ಉಪಗ್ರಹದ ಮೂಲಕ ಸರಸ್ವತಿಇರುವಿಕೆಯನ್ನು ಕಂಡುಹಿಡಿದಿತ್ತು. ಇಸ್ರೋ ವಿಜ್ಞಾನಿಗಳು, ಇತಿಹಾಸ ಶಾಸ್ತ್ರಜ್ಞರುಗಳ ತಂಡ ಸರಸ್ವತಿ ನದಿಯನ್ನು ಅದರ ಕೆಲವು ಕವಲುಗಳ ಬಗ್ಗೆ ಇತ್ತೀಚಿಗೆ ರಾಜಸ್ಥಾನದಲ್ಲಿ ಅನ್ವೇಷಣೆಗಿಳಿದಾಗ ಅವರಿಗೆ ಸಿಕ್ಕಿದೆ.
ಹಾಗೆಯೇ, ರಾಮಸೇತು ಬಗ್ಗೆ ಹೇಳಿದ್ದಾಗ ಅದನ್ನು ವಿರೋಧಿಸಿದ್ದರು. ಆದರೆ ಹಿಂದೆ ನಾಸ ತನ್ನ ಉಪಗ್ರಹದ ಮೂಲಕ ಇದರ ಚಿತ್ರಣ ದೊರಕಿದ್ದಾಗ ಅದನ್ನು ಆಡೆಮ್ ಬ್ರ್ರಿಡ್ಜ್ ಎಂದು ಕರೆಯಿತು.ಆಗಲೇ ಹಲವರಿಗೆ ರಾಮಯಣ ನೈಜ ಫಟನೆ ಮತ್ತು ರಾಮಸೇತು ಬಗ್ಗೆ ನಂಬಿಕೆ ಬಂದದ್ದು
ಇವೆಲ್ಲವನ್ನು ನೋಡುವಾಗ ನಮಗೆ ನಮ್ಮ ವೈಜ್ಞಾನಿಕತೆ ಬಗ್ಗೆ ಅರಿವಿಲ್ಲ ತಿಳಿಯುತ್ತದೆ. ನಾವು ನಮ್ಮದೇ ಜ್ಞಾನಿಗಳ ಬಗ್ಗೆ ಮೊದಲು ನಂಬಿಕೆಯಿರಿಸಬೇಕು.
ಈಗ ನಮಗೆ ಕಾಡುವ ಮೂಲಭೂತ ಪ್ರಶ್ನೆ ನಮ್ಮ ಹಿರಿಯರು ನಮಗಿಂತ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದರೇ? ನಾವದನ್ನು ಅರಿಯುವಲ್ಲಿ ವಿಫಲರಾಗಿದ್ದೇವೆಯೇ? ನಾವದನ್ನು ಸಂಶೋಧನೆಗೆ ಒಳಪಡಿಸಬೇಕು. ಅದಕ್ಕಿಂತ ಹೆಚ್ಚು ನಾವು ಅದನ್ನು ತಿಳಿದು ಕೊಳ್ಳುವಷ್ಟು ಜ್ಞಾನವನ್ನು ಬೆಳಸಬೇಕು .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.