ನಮ್ಮ ದೇಶದ ಡಿಜಿಟಲೀಕರಣದತ್ತ ದಾಪುಗಾಲಿಡುತ್ತಿದೆ, ನಮ್ಮ ನಗರಗಳು ಸ್ಮಾರ್ಟ್ ಸಿಟಿಗಳಾಗುತ್ತಿವೆ. ಹೀಗಾಗಿ ನಮ್ಮ ಎಲ್ಲಾ ಸೌಲಭ್ಯಗಳು ಕೂಡ ಸ್ಮಾರ್ಟ್ ಆಗುತ್ತಾ ಸಾಗುತ್ತಿದೆ. ಇದರ ಒಂದು ಭಾಗವಾಗಿ ಕೇಂದ್ರ ಸರ್ಕಾರ ದೇಶವ್ಯಾಪಿಯಾಗಿ ಸ್ಮಾರ್ಟ್ ಮೀಟರ್ ಅಳವಡಿಸುವ ಕಾರ್ಯವನ್ನು ಈಗ ಚುರುಕುಗೊಳಿಸುತ್ತಿದೆ. ವಿದ್ಯುತ್ ಉಳಿತಾಯವನ್ನು ಉತ್ತೇಜಿಸುವತ್ತ ಸ್ಮಾರ್ಟ್ ಮೀಟರ್ ಒಂದು ಸ್ಮಾರ್ಟ್ ಚಿಂತನೆ. ಯಾಕೆಂದರೆ, ಸ್ಮಾರ್ಟ್ ಮೀಟರ್ ಅಳವಡಿಕೆಯ ಬಳಿಕ ಮಿತಿಗಿಂತ ಜಾಸ್ತಿ ವಿದ್ಯುತ್ ಬಳಕೆ ಮಾಡಿದರೆ ಸ್ವಯಂಚಾಲಿತವಾಗಿದೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಶೀಘ್ರದಲ್ಲೇ, ನಮ್ಮ ಮನೆಗಳಲ್ಲಿಯೂ ಸ್ಮಾರ್ಟ್ ಮೀಟರ್ ವಿದ್ಯುತ್ ಅಳವಡಿಸುವ ಕಾರ್ಯ ನಡೆಯಲಿದೆ. ಇದಕ್ಕಾಗಿ ಸರ್ಕಾರ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹೊಸ ಮೀಟರ್ ಅಳವಡಿಸಿದ ನಂತರ, ಮಿತಿಗಿಂತ ಜಾಸ್ತಿ ವಿದ್ಯುತ್ ಬಳಕೆ ಮಾಡಿದರೆ ಸ್ವಯಂಚಾಲಿತವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವುದು ಮಾತ್ರವಲ್ಲ, ನಿಗದಿತ ಅವಧಿಗೆ ವಿದ್ಯುತ್ ಬಿಲ್ ಠೇವಣಿ ಮಾಡದಿದ್ದರೆ ಕೂಡ ಪೂರೈಕೆ ಸ್ವಯಂಚಾಲಿತವಾಗಿ ನಿಲ್ಲುತ್ತದೆ. ಬಿಲ್ ಠೇವಣಿ ಮಾಡಿದ ನಂತರ ಅದನ್ನು ಪುನರಾರಂಭಿಸಲಾಗುತ್ತದೆ. ಇದಕ್ಕಾಗಿ ಯಾವುದೇ ಸಿಬ್ಬಂದಿಯ ಅವಶ್ಯಕತೆ ಇರುವುದಿಲ್ಲ, ಎಲ್ಲವೂ ಆಟೊಮ್ಯಾಟಿಕ್ ಆಗಿ ಆಗಲಿದೆ.
ಭಾರತ ಸರ್ಕಾರದ ಸ್ಮಾರ್ಟ್ ಮೀಟರ್ ರಾಷ್ಟ್ರೀಯ ಕಾರ್ಯಕ್ರಮದಡಿ ಭಾರತದಾದ್ಯಂತ 10 ಲಕ್ಷ ಸ್ಮಾರ್ಟ್ ಮೀಟರ್ ಅಳವಡಿಸುವುದಾಗಿ ಕೇಂದ್ರ ವಿದ್ಯುತ್ ಖಾತೆ ರಾಜ್ಯ ಸಚಿವ ಆರ್.ಕೆ.ಸಿಂಗ್ ಘೋಷಿಸಿದ್ದಾರೆ. ಈಗಾಗಲೇ ಉತ್ತರ ಪ್ರದೇಶ, ದೆಹಲಿ, ಹರಿಯಾಣ ಮತ್ತು ಬಿಹಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸ್ಮಾರ್ಟ್ ಮೀಟರ್ಗಳು ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಹೆಚ್ಚು ಪಾರದರ್ಶಕತೆಯನ್ನು ತರುವ ಗುರಿಯನ್ನು ಹೊಂದಿವೆ. ಆದ್ದರಿಂದ ವಿದ್ಯುತ್ ಸೇವೆಗಳನ್ನು ಸುಧಾರಿಸಲು ಸಾಕಷ್ಟು ಅವಕಾಶಗಳು ಸಿಗುತ್ತವೆ. ವಿದ್ಯುತ್ ಸಚಿವರು ಸ್ಮಾರ್ಟ್ ಮೀಟರ್ ರಾಷ್ಟ್ರೀಯ ಕಾರ್ಯಕ್ರಮ, ರಾಷ್ಟ್ರೀಯ ವಿದ್ಯುತ್ ಚಲನಶೀಲತೆ ಕಾರ್ಯಕ್ರಮದ ಉಪಕ್ರಮಗಳ ಡ್ಯಾಶ್ಬೋರ್ಡ್ ಅನ್ನು ಸಹ ಪ್ರಾರಂಭಿಸಿದ್ದಾರೆ. ಈ ಡ್ಯಾಶ್ ಬೋರ್ಡ್ ಮೂಲಕ, ಕಾರ್ಯಕ್ರಮಗಳ ಪ್ರಗತಿ ಮತ್ತು ಅದರ ಪ್ರಭಾವವನ್ನು ಮೇಲ್ವಿಚಾರಣೆ ಮಾಡಬಹುದಾಗಿದೆ.
ಮೊಬೈಲ್ನಂತೆ, ಪೋಸ್ಟ್ಪೇಯ್ಡ್ ಮತ್ತು ಪ್ರಿಪೇಯ್ಡ್ ಸೌಲಭ್ಯಗಳಂತೆ ಈ ಸ್ಮಾರ್ಟ್ ಮೀಟರ್ಗಳು ಕಾರ್ಯನಿರ್ವಹಣೆ ಮಾಡಲಿವೆ. ಗ್ರಾಹಕರು ರೀಚಾರ್ಜ್ ಮಾಡಿ ವಿದ್ಯುತ್ ಪಡೆಯಬಹುದಾಗಿದೆ. ನಾವು ಹೆಚ್ಚು ರೀಚಾರ್ಜ್ ಮಾಡಿದರೆ ಹೆಚ್ಚು ವಿದ್ಯುತ್ ಸಿಗುತ್ತದೆ. ಮುಂದಿನ ರಿಜಾರ್ಜ್ ವೇಳೆ ಹಿಂದಿನ ರಿಜಾರ್ಜ್ ನಲ್ಲಿ ಉಳಿದ ವಿದ್ಯುತ್ ಅನ್ನು ಸೇರಿಸಲಾಗುತ್ತದೆ. ಅಗತ್ಯವಿಲ್ಲದಿದ್ದರೆ ಮೀಟರ್ ಅನ್ನು ಸ್ವಿಚ್ ಆಫ್ ಸಹ ಮಾಡಬಹುದು. ನಿಗದಿತ ಶುಲ್ಕದ ಪ್ರಕಾರ ಒಟ್ಟು ಮೊತ್ತ ಅಥವಾ ಕಂತಿನಲ್ಲಿ ಪಾವತಿ ಮಾಡಬೇಕಾಗುತ್ತದೆ. ಈ ಕಾರಣದಿಂದಾಗಿ, ವಿದ್ಯುತ್ ಕಳ್ಳತನ, ಲೋಡ್ ವ್ಯವಸ್ಥೆ, ಬಿಲ್ ಭರ್ತಿ ಇತ್ಯಾದಿಗಳ ಜಂಜಾಟಗಳಿಂದ ನಮಗೆ ಮುಕ್ತಿ ಸಿಗುತ್ತದೆ.
ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಬಗ್ಗೆ ಮಾತನಾಡಿರುವ ಸಚಿವರು, ಇಇಎಸ್ಎಲ್ ಪ್ರಾರಂಭಿಸಿದ ಎಲೆಕ್ಟ್ರಿಕ್ ವಾಹನಗಳು 20 ಮಿಲಿಯನ್ ಕಿಲೋಮೀಟರ್ ಓಡಿದೆ ಎಂದಿದ್ದಾರೆ. ಇಇಎಸ್ಎಲ್ ಸುಮಾರು 12 ತಿಂಗಳಲ್ಲಿ 10.6 ಮಿಲಿಯನ್ ಬೀದಿ ದೀಪಗಳನ್ನು ಬದಲಾಯಿಸಿದೆ. ಇದರ ಮೂಲಕ 36 ಕೋಟಿ ಎಲ್ಇಡಿ ಬಲ್ಬ್ಗಳನ್ನು ವಿತರಿಸಲಾಗಿದೆಎಲ್ಲರಿಗೂ ಕೈಗೆಟುಕುವ ಎಲ್ಇಡಿ ಬಲ್ಬ್ಗಳು ಮತ್ತು ಬೀದಿ ದೀಪಗಳ ಲಭ್ಯತೆಯ ಮೂಲಕ ಸರ್ಕಾರದ ಪ್ರಕಾಶಮಾನವಾದ ಮತ್ತು ಸುಧಾರಿತ ಬೆಳಕಿನ ಕಾರ್ಯಕ್ರಮವನ್ನು ಇಇಎಸ್ಎಲ್ ಮುನ್ನಡೆಸಿದೆ.
ಸ್ಮಾರ್ಟ್ ಮೀಟರ್ನಿಂದಾಗಿ ಮನೆಯಲ್ಲಿ ನಿಗದಿತ ಮಿತಿಗಿಂತ ವಿದ್ಯುತ್ ಹೆಚ್ಚು ಬಳಸಿದರೆ ವಿದ್ಯುತ್ ಸರಬರಾಜು ತಕ್ಷಣ ನಿಲ್ಲುತ್ತದೆ. ಲೋಡ್ ಅನ್ನು ಮತ್ತೆ ನಿಯಂತ್ರಿಸಿದಾಗ, ಪೂರೈಕೆ ಮತ್ತೆ ಪ್ರಾರಂಭವಾಗುತ್ತದೆ. ಓವರ್ಲೋಡ್ ಆಗುವುದಿಲ್ಲ. – ಯಾವ ಟ್ರಾನ್ಸ್ಫಾರ್ಮರ್ನಿಂದ ಎಷ್ಟು ವಿದ್ಯುತ್ ಕಳುಹಿಸಲಾಗಿದೆ. ಅದನ್ನು ಎಲ್ಲಿ ವ್ಯಯವಾಗಿದೆ? ಈ ಎಲ್ಲ ವಿಷಯಗಳ ಎನರ್ಜಿ ಆಡಿಟ್ ಇರುತ್ತದೆ. ನಿಗದಿತ ಅವಧಿಯೊಳಗೆ ಬಿಲ್ ಠೇವಣಿ ಮಾಡದಿದ್ದರೆ, ಪೂರೈಕೆ ಸ್ವಯಂಚಾಲಿತವಾಗಿ ನಿಲ್ಲುತ್ತದೆ. ಬಿಲ್ ಠೇವಣಿ ಮಾಡಿದ ನಂತರ ಅದನ್ನು ಪುನರಾರಂಭಿಸಲಾಗುತ್ತದೆ. ಇದಕ್ಕಾಗಿ ಯಾವುದೇ ಲೈನ್ ಸಿಬ್ಬಂದಿಯ ಹೆಚ್ಚುವರಿ ಸಮಯವನ್ನು ನೀಡಬೇಕಾಗಿಲ್ಲ.
ಸ್ಮಾರ್ಟ್ ಮೀಟರ್ ಅಳವಡಿಕೆಯಿಂದಾಗಿ ರೀಡಿಂಗ್ಗಾಗಿ ಯಾರೂ ಮನೆಬಾಗಿಲಿಗೆ ಬರಬೇಕಾಗಿಲ್ಲ. ಪ್ರತಿ ಕ್ಷಣದ ರೀಡಿಂಗ್ ರಿಯಲ್ ಟೈಮ್ ಅನ್ನು ವಿದ್ಯುತ್ ಕಂಪನಿ ಕಚೇರಿಯಿಂದಲೇ ನೋಡಲು ಸಾಧ್ಯವಾಗುತ್ತದೆ. ಅದರ ಆಧಾರದ ಮೇಲೆ ಬಿಲ್ ಅನ್ನು ಸಿದ್ಧಪಡಿಸಲಾಗುತ್ತದೆ.
ವಿದ್ಯುತ್ ಬಿಲ್ ಮುಂಗಡವನ್ನು ಠೇವಣಿ ಇಡುವವರಿಗೆ, ಪೂರ್ವ-ಪಾವತಿಸುವ ಸೌಲಭ್ಯವೂ ಮೀಟರ್ನಲ್ಲಿರುತ್ತದೆ. ಮನೆಯಲ್ಲಿ ಕೆಲವು ತಿಂಗಳುಗಳ ಕಾಲ ಇಲ್ಲದೇ ಇದ್ದ ಸಂದರ್ಭದಲ್ಲೂ ಅನಗತ್ಯ ವಿದ್ಯುತ್ ಬಿಲ್ ಪಾವತಿಸಬೇಕಾದ ಸಂದರ್ಭ ಎದುರಾಗುವುದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.