ಶ್ರೀನಗರ: ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಸನ್ಮಾನಿಸುವ ಸಲುವಾಗಿ ಭಾರತೀಯ ಸೇನೆಯು ಕಾಶ್ಮೀರದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ ಪ್ರಸಿದ್ಧ ನೂರನ್ ಸಹೋದರಿಯರು ನೀಡಿದ ಪ್ರದರ್ಶನಗಳು ಮತ್ತು ಇತರ ತಂಡಗಳ ಸ್ಮರಣೀಯ ಪ್ರದರ್ಶನಗಳು ಪ್ರೇಕ್ಷಕರನ್ನು ಮೋಡಿ ಮಾಡಿದವು.
ವರದಿಗಳ ಪ್ರಕಾರ, ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ‘ಚಿನಾರ್ ಯೂತ್ ಕಮ್ ಸೂಫಿ ಫೆಸ್ಟಿವಲ್ 2020’ ಅನ್ನು ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಫೆಬ್ರವರಿ 27 ರಂದು ದಾಲ್ ಸರೋವರದ ಬಳಿ ಆಯೋಜಿಸಿತ್ತು. ಸೂಫಿ ಸಂಗೀತ, ಕಾಶ್ಮೀರಿ ಸಂಸ್ಕೃತಿ ಮತ್ತು ಕಾಶ್ಮೀರಿಯತ್ ಅನ್ನು ಸಂಭ್ರಮಿಸುವ ಉದ್ದೇಶದೊಂದಿಗೆ ಇದನ್ನು ಆಯೋಜನೆಗೊಳಿಸಲಾಗಿದೆ.
ಎರಡು ದಿನಗಳ ಕಾಲ ಕಾಶ್ಮೀರದ ಯುವ ಬ್ಯಾಂಡ್ಗಳು ಅನೇಕ ಸುಮಧುರ ಮತ್ತು ಹೃದಯ ಸ್ಪರ್ಶಿಸುವ ಹಾಡುಗಳನ್ನು ಹಾಡಿ ಸಂಭ್ರಮಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲನ್ ಅವರು, ಕಾಶ್ಮೀರಿ ಯುವಕರಿಗೆ ಕಷ್ಟಪಟ್ಟು ಕೆಲಸ ಮಾಡುವಂತೆ, ಕಷ್ಟಪಟ್ಟು ಆಟವಾಡುವಂತೆ, ತಮ್ಮ ಹಿರಿಯರನ್ನು, ಶಿಕ್ಷಕರನ್ನು ಮತ್ತು ಪೋಷಕರನ್ನು ಗೌರವಿಸುವಂತೆ ಸಲಹೆಯನ್ನು ನೀಡಿದರು.
“ಇದು ಕಾಶ್ಮೀರಿ ಸಂಸ್ಕೃತಿ, ಸೂಫಿಯತ್ ಮತ್ತು ಕಾಶ್ಮೀರಿಯತ್ನ ಸಂಜೆಯಾಗಿದೆ. ಪ್ರತಿ ಕಾಶ್ಮೀರಿ ಹೊರಬಂದು ಕಾಶ್ಮೀರದ ಸೌಂದರ್ಯ ಮತ್ತು ಅದರ ಭಾವಪೂರ್ಣ ಸಂಗೀತವನ್ನು ಆನಂದಿಸಬೇಕೆಂದು ನಾನು ಬಯಸುತ್ತೇನೆ. ನೂರನ್ ಸಹೋದರಿಯರು ಇಲ್ಲಿ ಪ್ರದರ್ಶನ ನೀಡುತ್ತಿದ್ದರೂ, ನನ್ನ ಹೃದಯವು ಭಾವಪೂರ್ಣ ಮಧುರ ಗೀತೆಗಳನ್ನು ರಚಿಸಿ ಹೃದಯದಿಂದ ಹಾಡುತ್ತಿರುವ ಕಾಶ್ಮೀರದ ಯುವಕ-ಯುವತಿಯರತ್ತ ತಿರುಗುತ್ತಿದೆ ”ಎಂದು ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲಾನ್ ಹೇಳಿದರು.
ಈ ಸಂದರ್ಭದಲ್ಲಿ, ಕಲೆ, ಸಂಸ್ಕೃತಿ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಕಾಶ್ಮೀರದ ಯುವ ಸಾಧಕರನ್ನು ಸನ್ಮಾನಿಸಲಾಯಿತು. ನೂರನ್ ಸಹೋದರಿಯರ ಮೋಡಿ ಮಾಡುವ ಸೂಫಿ ಪ್ರದರ್ಶನಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.