ನವದೆಹಲಿ: ಇಂಡಿಯಾ ಪೋಸ್ಟ್ ಪೇಮೆಂಟ್ ಪೇಮೆಂಟ್ಸ್ ಬ್ಯಾಂಕ್ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಎರಡು ಕೋಟಿ ಗ್ರಾಹಕರನ್ನು ಅದು ಪಡೆದುಕೊಂಡಿದೆ. ದೇಶದಾದ್ಯಂತದ ಬ್ಯಾಂಕಿಂಗ್ ಕ್ಷೇತ್ರಕ್ಕೆ ತೆರೆದುಕೊಳ್ಳದ ಪ್ರದೇಶಗಳ ಜನರನ್ನು ಹಣಕಾಸಿಗೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರ ಮಹತ್ವದ ಪ್ರಯತ್ನಕ್ಕೆ ಇದು ಸಾಕಷ್ಟು ಉತ್ತೇಜನವನ್ನು ನೀಡಿದೆ.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) 2 ಕೋಟಿ ಗ್ರಾಹಕರ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ ಎಂದು ಕೇಂದ್ರ ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಇಂದು ಘೋಷಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಐಪಿಪಿಬಿ ತನ್ನ ಮೊದಲ ವರ್ಷದ ವೇಳೆಗೆ 1 ಕೋಟಿ ಗ್ರಾಹಕರ ಹೆಗ್ಗುರುತನ್ನು ತಲುಪಿತ್ತು. ಮುಂದಿನ 1 ಕೋಟಿ ಗ್ರಾಹಕರನ್ನು ಕೇವಲ 5 ತಿಂಗಳಲ್ಲಿ ಅದು ಪಡೆದುಕೊಂಡಿದೆ ಎಂಬುದು ಮಹತ್ವದ ಸಂಗತಿ. ಐಪಿಪಿಬಿ ಪ್ರತಿ ತ್ರೈಮಾಸಿಕಕ್ಕೆ ಸರಾಸರಿ 33 ಲಕ್ಷ ಖಾತೆಗಳನ್ನು ತೆರೆಯುತ್ತಿದೆ.
”ಐಪಿಪಿಬಿಯ ವ್ಯವಹಾರ ಮಾದರಿಯ ಯಶಸ್ಸು ಭಾರತದ ಆರ್ಥಿಕ ಸೇರ್ಪಡೆ ದಿಕ್ಕನ್ನೇ ಬದಲಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸಾರ್ವಜನಿಕರ ಉತ್ತಮ ಕೊಡುಗೆಯಿಂದಾಗಿ ಬ್ಯಾಂಕಿಂಗ್ ಮೂಲಸೌಕರ್ಯವನ್ನು ರಚಿಸುವ ಸರ್ಕಾರದ ಉದ್ದೇಶಕ್ಕೆ ಪ್ರೋತ್ಸಾಹ ಸಿಗುತ್ತಿದೆ” ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
2018ರ ಸೆಪ್ಟಂಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಐಪಿಪಿಬಿಗೆ ಚಾಲನೆ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.