ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಪೌರತ್ವ ಕಾನೂನಿನ ವಿರುದ್ಧ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ರೂಪವನ್ನು ಪಡೆದುಕೊಂಡು ಹಲವು ಜನರನ್ನು ಬಲಿ ಪಡೆದುಕೊಂಡಿದೆ. ದೆಹಲಿಯಲ್ಲಿ ದಂಗೆ ಎಬ್ಬಿಸಲು ಕೆಲವರು ಪಿತೂರಿ ನಡೆಸಿದ್ದರು ಎಂಬುದು ಈಗ ತಿಳಿದು ಬರುತ್ತಿದೆ. ಎಎಪಿ ಪಕ್ಷದ ಕಾರ್ಪೋರೇಟರ್ ಆಗಿರುವ ಹಾಜಿ ತಾಹೀರ್ ಹುಸೇನ್ ಎಂಬಾತ ದಂಗೆ ಮತ್ತು ಗುಪ್ತಚರ ಅಧಿಕಾರಿಯ ಸಾವಿನ ಹಿಂದೆ ಇದ್ದಾನೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿವೆ.
ದೆಹಲಿ ಗಲಭೆಯ ಕಿಂಗ್ಪಿನ್ ಇದೇ ತಾಹೀರ್ ಎಂಬ ಬಲವಾದ ಶಂಕೆಗಳು ವ್ಯಕ್ತವಾಗುತ್ತಿವೆ.
ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮುಸ್ತಫಾಬಾದ್ ವಿಧಾನಸಭಾ ಕ್ಷೇತ್ರದ ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ನ ನೆಹರೂ ವಿಹಾರ್ನ 59 ನೇ ವಾರ್ಡ್ನ ಕಾರ್ಪೋರೇಟರ್ ಈ ತಾಹೀರ್. ಆಮ್ ಆದ್ಮಿ ಪಕ್ಷದವನಾಗಿದ್ದಾನೆ.
ತಾಹೀರ್ ಹುಸೇನ್ ಮನೆಯಲ್ಲಿ ಸಾಕಷ್ಟು ಶಸ್ತ್ರಾಸ್ತ್ರಗಳು ಮತ್ತು ಇತರ ಹಿಂಸಾತ್ಮಕ ವಸ್ತುಗಳನ್ನು ಇಡಲಾಗಿತ್ತು. ನೂರಾರು ಗಲಭೆಕೋರರು ಆತನ ಮನೆಯ ಟೆರೇಸ್ನಲ್ಲಿ ನಿಂತು ಕಲ್ಲುಗಳು, ಪೆಟ್ರೋಲ್ ಬಾಂಬುಗಳನ್ನು ಇತರ ಜನರ ಮನೆಗಳಿಗೆ ಎಸೆದಿದ್ದಾರೆ. ಈ ಬಗ್ಗೆ ಜನರೇ ಮಾಹಿತಿಯನ್ನು ನೀಡಿದ್ದಾರೆ. ವಿಡಿಯೋದಲ್ಲೂ ದೃಶ್ಯಗಳು ಸೆರೆಯಾಗಿವೆ.
ಕಾರ್ಪೊರೇಟರ್ ಮನೆಯ ಮೇಚ್ಛಾವಣಿಯಿಂದ ಹಲವಾರು ಸುತ್ತಿನ ಗುಂಡುಗಳನ್ನು ಸಹ ಹಾರಿಸಲಾಗಿದೆ ಎಂದು ಕೆಲವರು ಹೇಳಿದ್ದಾರೆ.
ಗಲಭೆಯಲ್ಲಿ ಕೊಲ್ಲಲ್ಪಟ್ಟ ಐಬಿ ಅಧಿಕಾರಿ ಅಂಕಿತ್ ಶರ್ಮಾ ಅವರ ಸಹೋದರ, ತನ್ನ ಸಹೋದರನ ಹತ್ಯೆಯ ಹಿಂದೆ ತಾಹೀರ್ ಹುಸೇನ್ ಇದ್ದಾನೆ ಎಂಬುದಾಗಿ ಆರೋಪಿಸಿದ್ದಾರೆ. ನೂರಾರು ಗಲಭೆಕೋರರು ತಾಹಿರ್ ಹುಸೇನ್ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು ಮತ್ತು ಅಲ್ಲಿಂದಲೇ ಕಲ್ಲುಗಳನ್ನು ಎಸೆಯುತ್ತಿದ್ದರು, ಗುಂಡುಗಳನ್ನು ಹಾರಿಸುತ್ತಿದ್ದರು ಮತ್ತು ಪೆಟ್ರೋಲ್ ಬಾಂಬುಗಳನ್ನು ಎಸೆಯುತ್ತಿದ್ದರು ಎಂದಿದ್ದಾರೆ.
Locals continue to send video evidence of AAP corporator Mohammed Tahir Hussain’ role in unleashing violence against Hindus…
This explains Kejriwal’s studied silence. He neither called his MLAs for a meeting nor did he ask maulvis, who his govt pays, to appeal for peace… pic.twitter.com/gB157ioriX
— Amit Malviya (@amitmalviya) February 26, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.