
ನವದೆಹಲಿ: ದೇಶವ್ಯಾಪಿಯಾಗಿ 10 ಲಕ್ಷ ಸ್ಮಾರ್ಟ್ ಮೀಟರ್ಗಳನ್ನು ಅಳವಡಿಕೆ ಮಾಡಲಾಗುವುದು ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಆರ್ ಕೆ ಸಿಂಗ್ ಅವರು ಮಂಗಳವಾರ ಘೋಷಣೆ ಮಾಡಿದ್ದಾರೆ.
ಸ್ಮಾರ್ಟ್ ಮೀಟರ್ ನ್ಯಾಷನಲ್ ಪ್ರೋಗ್ರಾಮ್ ಅಡಿಯಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಾರ್ಯ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಉತ್ತರಪ್ರದೇಶ, ದೆಹಲಿ, ಹರಿಯಾಣ ಮತ್ತು ಬಿಹಾರಗಳಲ್ಲಿ ಈಗಾಗಲೇ ಸ್ಮಾರ್ಟ್ ಮೀಟರ್ಗಳು ಕಾರ್ಯಾಚರಿಸುತ್ತಿದೆ. ವಿತರಣಾ ವ್ಯವಸ್ಥೆಯಲ್ಲಿ ದಕ್ಷತೆಯನ್ನು ತರುವ ಸಲುವಾಗಿ ಮತ್ತು ಆ ಮೂಲಕ ಉತ್ತಮ ಸೇವಾ ಪೂರೈಕೆಯನ್ನು ಮಾಡುವ ಸಲುವಾಗಿ ಸ್ಮಾರ್ಟ್ ಮೀಟರ್ ಅಳವಡಿಕೆಗಳನ್ನು ಮಾಡಲಾಗುತ್ತದೆ. ಎನರ್ಜಿ ಎಫೀಶಿಯನ್ಸಿ ಸರ್ವಿಸ್ ಲಿಮಿಟೆಡ್ ಮೂಲಕ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುತ್ತಿದೆ.
ಎನರ್ಜಿ ಎಫೀಶಿಯನ್ಸಿ ಸರ್ವಿಸ್ ಲಿಮಿಟೆಡ್ ಇಂಧನ ಸಚಿವಾಲಯದ ಅಧೀನದಲ್ಲಿರುವ ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ನ ಜಂಟಿ ಉದ್ಯಮವಾಗಿದೆ. ಇಂಧನ ದಕ್ಷತೆ ಕಾರ್ಯಕ್ರಮಗಳ ಅನುಷ್ಠಾನವನ್ನು ಇದು ನೋಡಿಕೊಳ್ಳುತ್ತದೆ ಮತ್ತು ಇಂಧನ ಸೇವಾ ಕಂಪನಿಯಾಗಿ ಕಾರ್ಯನಿರ್ವಹಿಸುತ್ತದೆ.
ಎನರ್ಜಿ ಎಫೀಶಿಯನ್ಸಿ ಸರ್ವಿಸ್ ಲಿಮಿಟೆಡ್ ಹತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಚಿವರು 10 ಮೆಗಾವಾಟ್ ಸಾಮರ್ಥ್ಯದ ವಿಕೇಂದ್ರೀಕೃತ ಸೋಲಾರ್ ವಿದ್ಯುತ್ ಘಟಕಗಳನ್ನು ಕೃಷಿ ಉತ್ಪಾದಕರಿಗೆ ಸಂಪರ್ಕಿತಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ.
ಎನರ್ಜಿ ಎಫೀಶಿಯನ್ಸಿ ಸರ್ವಿಸ್ ಲಿಮಿಟೆಡ್ ಮುಂದಿನ ಮೂರು ವರ್ಷಗಳ ಒಳಗೆ 10,000 ಕೋಟಿ ರೂಪಾಯಿ ಕಂಪನಿಯಾಗಿ ಪ್ರಗತಿಯನ್ನು ಹೊಂದುವ ಗುರಿಯನ್ನು ಇಟ್ಟುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


