
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮಾರ್ಚ್ 5 ರಂದು ಜಿಯೋ ಇಮೇಜಿಂಗ್ ಸ್ಯಾಟಲೈಟ್ GISAT-1 ಅನ್ನು ಉಡಾವಣೆಗೊಳಿಸಲು ಸಜ್ಜಾಗಿದೆ.
ಮಾರ್ಚ್ 5 ರಂದು ಸಂಜೆ 5:43 ಕ್ಕೆ ಸ್ಯಾಟಲೈಟ್ ಉಡಾವಣೆಗೊಳ್ಳಲು ಸಮಯ ನಿಗದಿಯಾಗಿದೆ.
“ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GISAT-1) ವಾಹಕವು ಜಿಯೋ ಇಮೇಜಿಂಗ್ ಸ್ಯಾಟಲೈಟ್ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೆಯ ಲಾಂಚ್ ಪ್ಯಾಡ್ ಮೂಲಕ ಉಡಾವಣೆಗೊಳಿಸಲಿದೆ. ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ 2020 ಮಾರ್ಚ್ 5 ರಂದು 5.43 ಗಂಟೆ ISTಗೆ ಉಡಾವಣೆಗೊಳ್ಳಲಿದೆ” ಎಂದು ಇಸ್ರೋ ಹೇಳಿದೆ.
2275 ಕೆಜಿ ತೂಕದ ಈ ಜೀವ ಇಮೇಜಿಂಗ್ ಸ್ಯಾಟಲೈಟ್, ಅತ್ಯಾಧುನಿಕ ಭೂ ಪರಿವೀಕ್ಷಣಾ ಉಪಗ್ರಹವಾಗಿದೆ. ತನ್ನ ಆನ್ ಬೋರ್ಡ್ ಪ್ರೊಪಲ್ಶನ್ ಸಿಸ್ಟಮ್ ಅನ್ನು ಬಳಸಿಕೊಂಡು ಇದು ಅಂತಿಮ ಜಿಯೋ ಸ್ಟೇಷನರಿಯನ್ನು ತಲುಪಲಿದೆ ಎಂದು ಇಸ್ರೋ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



