ಐಜ್ವಾಲ್: ಪುಸಕ್ತ ಮನುಷ್ಯನ ಅತ್ಯುತ್ತಮ ಸ್ನೇಹಿತ ಎನ್ನುವ ಮಾತಿದೆ. ಪುಸ್ತಕ ನಮಗೆ ಪ್ರೇರಣೆಯಾಗಬಲ್ಲದು, ನಮ್ಮ ನೋವನ್ನು ಮರೆ ಮಾಡಬಲ್ಲದು, ನಮ್ಮನ್ನು ಚೇತರಿಸುವಂತೆ ಮಾಡಬಲ್ಲದು. ಪುಸ್ತಕಕ್ಕೆ ಒಂದು ಅದಮ್ಯ ಪ್ರೇರಣಾ ಶಕ್ತಿ ಇದೆ ಎಂದರೆ ತಪ್ಪಲ್ಲ.
ಮಿಜೋರಾಂನ ರಾಜಧಾನಿ ಐಜ್ವಾಲ್ನ ರಸ್ತೆ ಬದಿಯಲ್ಲಿರುವ ಗ್ರಂಥಾಲಯವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲೇ ಸುದ್ದಿ ಮಾಡುತ್ತಿದೆ. ಹಲವಾರು ಮಂದಿ ಟ್ವಿಟರ್ ಬಳಕೆದಾರರು ಈಗ ಈ ಗ್ರಂಥಾಲಯದ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಪ್ರಶಂಸೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಜನರಲ್ಲಿ ಓದುವ ಹವ್ಯಾಸವನ್ನು ವೃದ್ಧಿಸುವ ನಿಟ್ಟಿನಲ್ಲಿ ಇಂತಹ ಗ್ರಂಥಾಲಯಗಳು ಹೆಚ್ಚು ಉತ್ತೇಜನಕಾರಿಯಾಗಿವೆ ಎಂದು ಜನರು ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಬೇರೆ ನಗರದಲ್ಲೂ ಇಂತಹ ಗ್ರಂಥಾಲಯ ತೆರೆಯಬೇಕೆಂದು ಹಲವಾರು ಮಂದಿ ಮನವಿ ಮಾಡಿಕೊಂಡಿದ್ದಾರೆ.
ರಸ್ತೆಯ ಪಕ್ಕದಲ್ಲೇ ಈ ಮಿನಿ ಗ್ರಂಥಾಲಯವಿದ್ದು, ಇಲ್ಲಿ ಜನರು ಪುಸ್ತಕವನ್ನು ತೆಗೆದು ಓದಬಹುದಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ಗ್ರಂಥಾಲಯವನ್ನು ಬಳಸಬಹುದಾಗಿದೆ. ಇಲ್ಲಿ ಜನರು ಪುಸ್ತಕವನ್ನು ತಂದು ಇಡಬಹುದು ಮತ್ತು ಪುಸ್ತಕವನ್ನು ಕೊಂಡೊಯ್ಯಬಹುದಾಗಿದೆ.
Now this is what every city must copy. #Mizoram‘s capital #Aizawl has a couple of these tiny roadside libraries. Libraries are the best investment for nation building. North East showing the way. Via @asomputra pic.twitter.com/mFmFspuSyg
— Parveen Kaswan, IFS (@ParveenKaswan) February 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.