ಚೆನ್ನೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಾಂಕೇತಿಕ ಸ್ವಾಗತ ಕೋರುವ ಸಲುವಾಗಿ ತಮಿಳುನಾಡಿನ ಬಾಣಸಿಗರೊಬ್ಬರು ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಚಿತ್ರ ಹೊಂದಿರುವ 100 ಕಿಲೋ ಇಡ್ಲಿಯನ್ನು ತಯಾರಿಸಿದ್ದಾರೆ. ತಲಾ 50 ಕಿಲೋ ತೂಕದ ಎರಡು ಇಡ್ಲಿಗಳಲ್ಲಿ ಮೋದಿ, ಟ್ರಂಪ್ ಮುಖವನ್ನು ಬಿಡಿಸಲಾಗಿದೆ.
ಭಾರೀ ಗಾತ್ರದ ಎರಡು ಇಡ್ಲಿಗಳ ಜೊತೆಗೆ ಭಾರತ ಮತ್ತು ಯುಎಸ್ ಎರಡೂ ರಾಷ್ಟ್ರಗಳ ಧ್ವಜಗಳ ಚಿತ್ರವನ್ನು ಹೊಂದಿರುವ ಏಳು ಕಿಲೋದ ಒಂದು ಇಡ್ಲಿಯನ್ನು ಕಲಾವಿದ ಬಾಣಸಿಗ ಪ್ರತ್ಯೇಕವಾಗಿ ತಯಾರಿಸಿದ್ದಾರೆ.
ಇನಿಯವನ್ ಅವರು ತಮಿಳುನಾಡಿನ ಖ್ಯಾತ ಆಹಾರ ಕಲಾವಿದನಾಗಿದ್ದು, ಇವರು ಒಟ್ಟು 107 ಕಿಲೋಗ್ರಾಂಗಳಷ್ಟು ತೂಕವಿರುವ ಮೂರು ಬೃಹತ್ ಇಡ್ಲಿಗಳನ್ನು ತಯಾರಿಸಲು 36 ಗಂಟೆಗಳನ್ನು ವ್ಯಯಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಎರಡು ದಿನಗಳ ಚೊಚ್ಚಲ ಭಾರತ ಭೇಟಿಗಾಗಿ ಫೆಬ್ರವರಿ 24 ರಂದು ಅಹ್ಮದಾಬಾದಿಗೆ ಆಗಮಿಸಿದರು. ಅಹ್ಮದಾಬಾದಿನ ಸರ್ದಾರ್ ವಲ್ಲಭಾಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಳಿಯುತ್ತಿದ್ದಂತೆ ಟ್ರಂಪ್ ಅವರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು, ನಂತರ ಇಬ್ಬರೂ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ‘ನಮಸ್ತೆ ಟ್ರಂಪ್’ ಎಂಬ ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇಂದು ಟ್ರಂಪ್ ಅವರು ದೆಹಲಿಯಲ್ಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.