ನವದೆಹಲಿ: ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಭಾರತ ಸ್ಥಾನ ಪಡೆಯಲು ಸಜ್ಜಾಗಿದೆ ಮತ್ತು ಈ ಪ್ರಯಾಣದಲ್ಲಿ ತಂತ್ರಜ್ಞಾನವು ದೊಡ್ಡ ಪಾತ್ರ ವಹಿಸಲಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ.
“ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂಬ ಬಗ್ಗೆ ಯಾರ ಮನಸ್ಸಿನಲ್ಲಿಯೂ ಯಾವುದೇ ಸಂದೇಹವಿಲ್ಲ. ಆದರೆ ಇದು ಐದು ವರ್ಷದಲ್ಲಿ ಆಗುತ್ತದೆಯೇ ಅಥವಾ 10 ವರ್ಷಗಳಲ್ಲಿ ಆಗುತ್ತದೆಯೇ ಎಂಬ ಬಗ್ಗೆ ಅಷ್ಟೇ ನಾವು ಚರ್ಚಿಸಬಹುದು” ಎಂದು ಅವರು ಮುಂಬೈನಲ್ಲಿ ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಡೆಲ್ಲಾ ಅವರೊಂದಿಗಿನ ಸಂವಾದದ ಸಂದರ್ಭದಲ್ಲಿ ಹೇಳಿದ್ದಾರೆ.
ವಿಶ್ವದ ಅತ್ಯಂತ ಪ್ರೀಮಿಯಂ ಡಿಜಿಟಲ್ ಸೊಸೈಟಿಯಾಗಿ ಭಾರತದ ಹೊರಹೊಮ್ಮುವಿಕೆಯಿಂದ ಆರ್ಥಿಕತೆಯ ಬೆಳವಣಿಗೆಯನ್ನು ಗುರುತಿಸಲಾಗುವುದು ಎಂದಿದ್ದಾರೆ.
“ಪ್ರಪಂಚದ ಪ್ರೀಮಿಯಂ ಡಿಜಿಟಲ್ ಸೊಸೈಟಿ ಆಗುವ ಅವಕಾಶ ಭಾರತದಲ್ಲಿ ನಮಗೆ ಸಿಕ್ಕಿರುವ ಮಹತ್ವದ ಅವಕಾಶ, ಎಲ್ಲಾ ಅಂಶಗಳೊಂದಿಗೆ ಇದು ಜಾರಿಗೆ ಬರುತ್ತಿದೆ. ನಾವು ಹೆಚ್ಚು ತಾಂತ್ರಿಕವಾಗಿ ಶಕ್ತಗೊಂಡ ಸಮಾಜವಾಗುತ್ತಿದ್ದೇವೆ” ಎಂದು ಮೈಕ್ರೋಸಾಫ್ಟ್ನ ಫ್ಯೂಚರ್ ಡಿಕೋಡೆಡ್ ಸಿಇಒ ಶೃಂಗಸಭೆಯಲ್ಲಿ ಅವರು ಹೇಳಿದರು.
”1992ರಲ್ಲಿ 300 ಬಿಲಿಯನ್ ಡಾಲರ್ ಆರ್ಥಿಕತೆಯಿಂದ ಮೂರು ಟ್ರಿಲಿಯನ್ ಡಾಲರ್ಗೆ ಭಾರತದ ಪ್ರಯಾಣವು ಟೆಕ್ ಕಂಪನಿಗಳ ಉದಯದಿಂದ ಸಾಧ್ಯವಾಗಿದೆ. ಹೊಸ ಅಲೆಯನ್ನು ದೇಶದೊಳಗಿನ ದೊಡ್ಡ ಪ್ರಮಾಣದ ಟೆಕ್ ಅಳವಡಿಕೆಯಿಂದ ಮುನ್ನಡೆಸಲಾಗುವುದು” ಎಂದು ಅಂಬಾನಿ ಹೇಳಿದ್ದಾರೆ.
“ಟಿಸಿಎಸ್ ಮತ್ತು ಇನ್ಫೋಸಿಸ್ ಹೊಸ ಅಲೆಯನ್ನು ಪ್ರಾರಂಭಿಸಿತು, ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಇಂಡಿಯಾದ ದೃಷ್ಟಿಯು ಇದನ್ನು ಸೂಪರ್ ಜಾರ್ಜ್ ಮಾಡಿತು. ಈಗ ನಮ್ಮಲ್ಲಿ ಮೂಲಸೌಕರ್ಯವಿದೆ ಮತ್ತು ನಾವು ವೇಗವನ್ನು ಹೆಚ್ಚಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಸತ್ಯ ನಡೆಲ್ಲಾ ಅವರು, ಪ್ರಕೃತಿಯಲ್ಲಿ ಅಂತರ್ಗತವಾಗಿರುವ ತಂತ್ರಜ್ಞಾನ ಸಾಮರ್ಥ್ಯಗಳನ್ನು ನಿರ್ಮಿಸಲು ಭಾರತೀಯ ವ್ಯಾಪಾರ ಮುಖಂಡರನ್ನು ಒತ್ತಾಯಿಸಿದರು. “ಭಾರತೀಯ ಸಿಇಒಗಳು ತಮ್ಮದೇ ಆದ ತಾಂತ್ರಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಮತ್ತು ಪರಿಹಾರಗಳನ್ನು ಒಳಗೊಳ್ಳುವಂತೆ ನೋಡಿಕೊಳ್ಳಬೇಕು” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.