ತಿರುವನಂತಪುರಂ : ಫೆಬ್ರವರಿ 22ರ ಶನಿವಾರ ಕೇರಳದ ಇಬ್ಬರು ವ್ಯಕ್ತಿಗಳಿಗೆ ಒಂದು ವಾರಸುದಾರರಿಲ್ಲದ ಪ್ಯಾಕೇಜ್ ಸಿಕ್ಕಿದ್ದು, ಇದರಲ್ಲಿ ಗುಂಡುಗಳು ಪತ್ತೆಯಾಗಿವೆ. ಕೇರಳ ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ ತಕ್ಷಣ ಪೊಲೀಸರು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ವಶಪಡಿಸಿಕೊಂಡ ಗುಂಡುಗಳು “ಪಿಒಎಫ್” ನ ಗುರುತುಗಳನ್ನು ಹೊಂದಿದ್ದವು, ಅಂದರೆ ಅವುಗಳು ಪಾಕಿಸ್ಥಾನ ಆರ್ಡಿನೆನ್ಸ್ ಫ್ಯಾಕ್ಟರಿಯಲ್ಲಿ ತಯಾರಿಸಲ್ಪಟ್ಟವು.
ವರದಿಗಳ ಪ್ರಕಾರ, ಈ ಪ್ಯಾಕೇಜ್ ಕೇರಳದ ಕೊಲ್ಲಂನ ಕುಲತುಫುಝಾದಲ್ಲಿ ಪತ್ತೆಯಾಗಿದೆ. ಈ ಪ್ಯಾಕೇಜ್ಗೆ ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆಯೊಂದರ ಸಂಪರ್ಕವಿದೆ ಎಂದು ಶಂಕಿಸಿರುವ ಡಿಜಿಪಿ ಲೋಕನಾಥ್ ಬೆಹೆರಾ ಅವರು, ಗುಂಡುಗಳ ಪಾಕಿಸ್ಥಾನದ ಮೂಲದ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಕೇಂದ್ರ ಗುಪ್ತಚರ ಸಂಸ್ಥೆಗಳ ಸಹಾಯವನ್ನು ಕೋರಿದ್ದಾರೆ.
ಕೇರಳ ರಾಜ್ಯ ಎಟಿಎಸ್ ಈ ಬಗ್ಗೆ ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದೆ. ಎಟಿಎಸ್ನಿಂದ ಮಾಹಿತಿ ಪಡೆದ ಮಿಲಿಟರಿ ಗುಪ್ತಚರ ದಳವೂ ತನಿಖೆಗೆ ಸಹಾಯ ಮಾಡಲು ಸ್ಥಳಕ್ಕೆ ಆಗಮಿಸಿದೆ. ವರದಿಗಳ ಪ್ರಕಾರ, ಎನ್ಐಎ ಮತ್ತು ಮಿಲಿಟರಿ ಗುಪ್ತಚರ ಅಧಿಕಾರಿಗಳು ಸಹ ತನಿಖೆಗೆ ಸಹಾಯ ಮಾಡುತ್ತಿದ್ದಾರೆ.
ವರದಿಗಳ ಪ್ರಕಾರ ಒಟ್ಟು 14 ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಂಡುಗಳು 7.62 ಎಂಎಂ ಗಾತ್ರದ್ದಾಗಿದ್ದು, ಅವುಗಳನ್ನು ಪಿಒಎಫ್ ಎಂದು ಗುರುತಿಸಲಾಗಿದೆ. ಇದನ್ನು ‘ಪಾಕಿಸ್ಥಾನ ಆರ್ಡಿನೆನ್ಸ್ ಫ್ಯಾಕ್ಟರಿ’ ಎಂದು ಶಂಕಿಸಲಾಗಿದೆ. 1981-82ರಲ್ಲಿ ಗುಂಡುಗಳನ್ನು ತಯಾರಿಸಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಗುಂಡುಗಳನ್ನು ಮೆಷಿನ್ಗನ್ಗಳಲ್ಲಿ ಬಳಸಲಾಗುತ್ತದೆ. ಈ ಬಗ್ಗೆ ವಿಧಿವಿಜ್ಞಾನ ಮತ್ತು ಬ್ಯಾಲಿಸ್ಟಿಕ್ ತನಿಖೆಗಳೂ ಪ್ರಾರಂಭವಾಗಿವೆ.
Kerala Anti-Terrorism Squad (ATS) investigating the site in Kulathupuzha, Kollam where 14 live bullets with Pakistan Ordnance Factory (POF) markings, were found yesterday. pic.twitter.com/Bfq6siMfQO
— ANI (@ANI) February 23, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.