ಅಹ್ಮದಾಬಾದ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಾಗಿ ಗುಜರಾತಿನ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, “ಒಂದು ರಾಷ್ಟ್ರ ಸ್ಟ್ಯಾಚು ಆಫ್ ಲಿಬರ್ಟಿ ಬಗ್ಗೆ ಹೆಮ್ಮೆ ಹೊಂದಿದ್ದರೆ, ಇನ್ನೊಂದು ರಾಷ್ಟ್ರ ಸ್ಟ್ಯಾಚು ಆಫ್ ಯುನಿಟಿ ಬಗ್ಗೆ ಹೆಮ್ಮೆ ಹೊಂದಿದೆ” ಎಂದಿದ್ದಾರೆ.
ಕ್ರೀಡಾಂಗಣಕ್ಕೆ ಪ್ರವೇಶಿಸುತ್ತಿದ್ದಂತೆ ಟ್ರಂಪ್ ಮತ್ತು ಅವರ ನಿಯೋಗವನ್ನು ಗೃಹ ಸಚಿವ ಅಮಿತ್ ಶಾ ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಮೋದಿ, “ಭಾರತ-ಯುಎಸ್ ಸಂಬಂಧಗಳು ಕೇವಲ ಪಾಲುದಾರಿಕೆಗೆ ಸೀಮಿತವಾಗಿಲ್ಲ. ಇದು ತುಂಬಾ ದೊಡ್ಡದಾದ ಮತ್ತು ಹತ್ತಿರವಾದ ಸಂಬಂಧವಾಗಿದೆ. ನಾವು ಹಂಚಿಕೊಳ್ಳುವಂತಹದ್ದು ಸಾಕಷ್ಟಿವೆ. ಮೌಲ್ಯಗಳು ಮತ್ತು ಆದರ್ಶಗಳು, ಉದ್ಯಮ ಮತ್ತು ನಾವೀನ್ಯತೆಯ ಮನೋಭಾವವನ್ನು ನಾವು ಹಂಚಿಕೊಂಡಿದ್ದೇವೆ. ಅವಕಾಶಗಳು ಮತ್ತು ಸವಾಲುಗಳು, ಭರವಸೆಗಳು ಮತ್ತು ಆಕಾಂಕ್ಷೆಗಳನ್ನು ಹಂಚಿಕೊಂಡಿದ್ದೇವೆ” ಎಂದಿದ್ದಾರೆ.
“ಅಮೆರಿಕಾ ಭಾರತದ ಅತೀ ದೊಡ್ಡ ವ್ಯಾಪಾರ ಪಾಲುದಾರ. ನಮ್ಮ ದ್ವಿಪಕ್ಷೀಯ ಸಂಬಂಧ ಆಳವಾಗಲಿದೆ, ನಮ್ಮ ಕಾರ್ಯತಾಂತ್ರಿಕ ಸಂಬಂಧ ವೃದ್ಧಿಯಾಗಲಿದೆ. ನಮ್ಮ ಸ್ನೇಹ ಚಿರಾಯುವಾಗಲಿದೆ” ಎಂದಿದ್ದಾರೆ.
ಹೊಸ ದಶಕದ ಆರಂಭದಲ್ಲಿ ಭಾರತಕ್ಕೆ ಟ್ರಂಪ್ ಅವರು ನೀಡುತ್ತಿರುವ ಭೇಟಿಯನ್ನು ನಾನು ದೊಡ್ಡ ಅವಕಾಶವಾಗಿ ನೋಡುತ್ತಿದ್ದೇನೆ ಎಂದಿದ್ದಾರೆ.
130 ಭಾರತೀಯರು ನವ ಭಾರತದ ನಿರ್ಮಾಣ ಕಾರ್ಯದಲ್ಲಿ ಒಂದಾಗಿದ್ದಾರೆ ಎಂದಿರುವ ಪ್ರಧಾನಿ, “ನಮ್ಮ ಯುವ ಜನರು ಹೊಸ ಆಕಾಂಕ್ಷೆಗಳನ್ನು ಹೊಂದಿದ್ದಾರೆ. ಹೊಸ ಗುರಿಗಳನ್ನು ಇಡುವುದನ್ನು ಮತ್ತು ಅವುಗಳನ್ನು ಸಾಧಿಸುವುದು ಭಾರತದ ಹಾಲ್ ಮಾರ್ಕ್ ಆಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.