ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಭಾರತದ ರಾಷ್ಟ್ರಪತಿಗಳು ಅಂಗೀಕರಿಸಿದ ನಂತರ ಅಥವಾ ಅದು ಜಾರಿಯಾದ ಬಳಿಕ ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಬಗ್ಗೆಯೂ ಕಪೋಲಕಲ್ಪಿತ ಸುಳ್ಳು ಪ್ರಚಾರಗಳನ್ನು ಹರಡುತ್ತಿವೆ. ಸಿಎಎ ಬಗೆಗಿನ ಸತ್ಯಗಳು ಈಗಾಗಲೇ ಜನರಿಗೆ ತಿಳಿದಿದೆ. ಆದರೆ ಭಾರತ ವಿರೋಧಿ ಪಡೆಗಳು ಇದನ್ನು ಎನ್ಪಿಆರ್ ಮತ್ತು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್ಆರ್ಸಿ) ನೊಂದಿಗೆ ಜೋಡಿಸುತ್ತಿವೆ ಮತ್ತು ದೇಶದ ಒಂದು ವರ್ಗದ ಜನರಲ್ಲಿ ಈ ವಿಷಯವಾಗಿ ಭಯವನ್ನು ಉಂಟುಮಾಡಲು ಪ್ರಯತ್ನಿಸುತ್ತಿವೆ.
ಜನಗಣತಿ ಮತ್ತು ಎನ್ಪಿಆರ್ ನವೀಕರಣಕ್ಕಾಗಿ ನರೇಂದ್ರ ಮೋದಿ ಸಂಪುಟ ಈಗಾಗಲೇ ಹಣವನ್ನು ಅನುಮೋದಿಸಿದೆ. ಎನ್ಪಿಆರ್ ಪ್ರಕ್ರಿಯೆ ಏಪ್ರಿಲ್ 2021 ರಿಂದ ಪ್ರಾರಂಭವಾಗಲಿದೆ. ಪ್ರಕ್ರಿಯೆಗಾಗಿ ಸರ್ಕಾರ, ರೂ.3,900 ಕೋಟಿ ನಿಗದಿಪಡಿಸಿದೆ. ಜನಸಂಖ್ಯಾ ನೋಂದಣಿಯಾಗಿರುವ ಎನ್ಪಿಆರ್ ಕುರಿತು ಕೆಲವು ಸಂಗತಿಗಳನ್ನು ಕೆಳಗೆ ನೀಡಲಾಗಿದೆ:
ಎನ್ಪಿಆರ್ ಎಂದರೇನು?
ದೇಶದ ಎಲ್ಲಾ ‘ಸಾಮಾನ್ಯ ನಿವಾಸಿಗಳ’ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಅನ್ನು 2010 ರಲ್ಲಿ ರಚಿಸಲಾಗಿದೆ. ಮನೆ ಪಟ್ಟಿ ಮತ್ತು ವಸತಿ ಗಣತಿ 2010 ರೊಂದಿಗೆ ಎನ್ಪಿಆರ್ ದತ್ತಾಂಶ ಸಂಗ್ರಹಕ್ಕಾಗಿ ಫೀಲ್ಡ್ ವರ್ಕ್ ಅನ್ನು ಕೈಗೊಳ್ಳಲಾಯಿತು. ಎಲ್ಲಾ ಸಾಮಾನ್ಯ ನಿವಾಸಿಗಳ ನಿರ್ದಿಷ್ಟ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಎನ್ಪಿಆರ್ ಅಡಿಯಲ್ಲಿ ದೇಶದ 119 ಕೋಟಿಗೂ ಹೆಚ್ಚು ಸಾಮಾನ್ಯ ನಿವಾಸಿಗಳ ಎಲೆಕ್ಟ್ರಾನಿಕ್ ಡೇಟಾಬೇಸ್ ಅನ್ನು ಸಿದ್ಧಪಡಿಸಲಾಗಿತ್ತು.
ಭಾರತ ಸರ್ಕಾರದ ಮಾಹಿತಿಯ ಪ್ರಕಾರ, ಸಮಗ್ರ ವಸತಿ ಡಾಟಾಬೇಸ್ ಅನ್ನು ರಚನೆ ಮಾಡಲು ಎನ್ಪಿಆರ್ ಡೇಟಾಬೇಸ್ ಅನ್ನು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ (ಅಸ್ಸಾಂ ಮತ್ತು ಮೇಘಾಲಯ ಹೊರತುಪಡಿಸಿ) 2015-16ರಲ್ಲಿ ನವೀಕರಿಸಲಾಗಿದೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ರಚಿಸುವ ಯೋಜನೆಯನ್ನು ಪೌರತ್ವ ಕಾಯ್ದೆ, 1955 ಮತ್ತು ಪೌರತ್ವ ನಿಯಮಗಳು, 2003 ರ ನಿಬಂಧನೆಗಳ ಅಡಿಯಲ್ಲಿ ಕೈಗೊಳ್ಳಲಾಗುತ್ತಿದೆ. ಅವರು ಭಾರತದ ನಾಗರಿಕರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ದೇಶದ ಎಲ್ಲಾ ‘ಸಾಮಾನ್ಯ ನಿವಾಸಿಗಳ’ ವಿವರಗಳನ್ನು ಎನ್ಪಿಆರ್ ಒಳಗೊಂಡಿರುತ್ತದೆ.
2003ರ ಪೌರತ್ವ ನಿಯಮಗಳು, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು ಅಥವಾ ಇವುಗಳ ಇತರ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಮನೆಯ ಮುಖ್ಯಸ್ಥರ ಎನ್ಪಿಆರ್ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ವ್ಯಾಖ್ಯಾನಿಸುತ್ತದೆ.
ಎನ್ ಪಿಆರ್ ಪೌರತ್ವ ಅಥವಾ ನಿವಾಸಿಯ ಸ್ಥಾನಮಾನವನ್ನು ನಿರ್ಧರಿಸುವುದಿಲ್ಲ.
NPR ಅನ್ನು ನವೀಕರಿಸುವುದರ ಅರ್ಥವೇನು?
ಏಪ್ರಿಲ್-ಸೆಪ್ಟೆಂಬರ್ 2020ರ ಅವಧಿಯಲ್ಲಿ ಭಾರತದ ಜನಗಣತಿ 2021ರ ಮನೆ ಪಟ್ಟಿ ಮತ್ತು ವಸತಿ ಗಣತಿ ಹಂತದ ಜೊತೆಗೆ ಎನ್ಪಿಆರ್ ಡೇಟಾಬೇಸ್ ಅನ್ನು ನವೀಕರಿಸಲು ಸರ್ಕಾರ ನಿರ್ಧರಿಸಿದೆ. ಎನ್ಪಿಆರ್ ಅನ್ನು ನವೀಕರಿಸುವುದು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
🔹 ಎಣಿಕೆದಾರರಿಂದ (ಗೊತ್ತುಪಡಿಸಿದ ಸರ್ಕಾರಿ ಅಧಿಕಾರಿ) ಮನೆ ಮನೆ ಎಣಿಕೆಯನ್ನು ನಡೆಸುವ ಮೂಲಕ ಮತ್ತು ಜನಸಂಖ್ಯಾ ದತ್ತಾಂಶಗಳನ್ನು ತಿದ್ದುಪಡಿ/ ಸರಿಪಡಿಸುವ ಮೂಲಕ ಎಲ್ಲಾ ನಿವಾಸಿಗಳ ವಿವರಗಳನ್ನು ಪರಿಶೀಲಿಸುವ ಮೂಲಕ ಅಸ್ತಿತ್ವದಲ್ಲಿರುವ ಎನ್ಪಿಆರ್ ಡೇಟಾಬೇಸ್ ಅನ್ನು ನವೀಕರಿಸುವುದು.
🔹 ಪ್ರತಿ ನಿವಾಸಿಯಿಂದ ಸ್ವಯಂಪ್ರೇರಣೆಯಿಂದ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವುದು.
🔹 ನಿವಾಸಿಗಳಿಂದ ಲಭ್ಯವಿದ್ದರೆ ಮೊಬೈಲ್ ಸಂಖ್ಯೆ, ಚುನಾವಣಾ ಗುರುತಿನ ಚೀಟಿಗಳು (ಇಪಿಐಸಿ) ಅಥವಾ ಮತದಾರರ ಗುರುತಿನ ಚೀಟಿ ಸಂಖ್ಯೆ, ಭಾರತೀಯ ಪಾಸ್ಪೋರ್ಟ್ ಸಂಖ್ಯೆ ಮತ್ತು ಚಾಲನಾ ಪರವಾನಗಿ ಸಂಖ್ಯೆಯನ್ನು ಸಂಗ್ರಹಿಸುವುದು.
🔹 ಕ್ಷೇತ್ರಕಾರ್ಯದ ಸಮಯದಲ್ಲಿ ಸ್ಥಳೀಯ ಪ್ರದೇಶದಲ್ಲಿ (ಎಚ್ಎಲ್ಬಿ) ಕಂಡುಬರುವ ಎಲ್ಲಾ ಹೊಸ ನಿವಾಸಿಗಳ / ಹೊಸ ಮನೆಗಳ ಸೇರ್ಪಡೆ.
ಎನ್ಪಿಆರ್ಗಾಗಿ ಯಾವ ವಿವರಗಳನ್ನು ಒದಗಿಸಬೇಕು?
ಮನೆಯ ಲೆಕ್ಕಾಚಾರಕ್ಕಾಗಿ ಈ ಕೆಳಗಿನ ವಿವರಗಳನ್ನು ಒದಗಿಸಬೇಕಾಗಿದೆ:
– ಸೆನ್ಸೆಸ್ ಹೌಸ್ ನಂಬರ್ ಮತ್ತು ಮನೆಯ ಸಂಖ್ಯೆ
– ಈಗಿನ ವಿಳಾಸ
– ಪಿನ್ ಕೋಡ್
– ಮನೆಯ ಸ್ಥಿತಿ
– ಸದಸ್ಯರ ಸಂಖ್ಯೆ
ಎಣಿಕೆದಾರರಿಗೆ ಈ ಕೆಳಗಿನ ವಿವರಗಳನ್ನು ಒದಗಿಸಬೇಕಾಗಿದೆ:
– ವ್ಯಕ್ತಿಯ ಪೂರ್ಣ ಹೆಸರು
– ಮನೆಯ ಸದಸ್ಯರ ಲಭ್ಯತೆ
– ಮುಖ್ಯಸ್ಥನೊಂದಿಗಿನ ಸಂಬಂಧ
– ಲಿಂಗ
– ವೈವಾಹಿಕ ಸ್ಥಿತಿ
– ಹುಟ್ಟಿದ ದಿನ
– ಹುಟ್ಟಿದ ಸ್ಥಳ
– ಘೋಷಿಸಿದಂತೆ ರಾಷ್ಟ್ರೀಯತೆ
– ಶೈಕ್ಷಣಿಕ ಅರ್ಹತೆ
– ಉದ್ಯೋಗ / ಚಟುವಟಿಕೆ
– ಮಾತೃ ಭಾಷೆ
– ಶಾಶ್ವತ ವಸತಿ ವಿಳಾಸ
– ಕೊನೆಯ ನಿವಾಸದ ವಾಸ್ತವ್ಯ ಮತ್ತು ಸ್ಥಳದ ಅವಧಿ
– ತಂದೆ, ತಾಯಿ ಮತ್ತು ಸಂಗಾತಿಯ ಮತ್ತು ಮಕ್ಕಳ ವಿವರಗಳು
(ಯಾವುದು ಲಭ್ಯವಿದೆ)
– ಆಧಾರ್ ಸಂಖ್ಯೆ
– ಮೊಬೈಲ್ ನಂಬರ್
– ಮತದಾರರ ಗುರುತಿನ ಚೀಟಿ ಸಂಖ್ಯೆ
– ಚಾಲನಾ ಪರವಾನಗಿ ಸಂಖ್ಯೆ
– ಪಾಸ್ಪೋರ್ಟ್ ಸಂಖ್ಯೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.