ಅಹ್ಮದಾಬಾದ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಪತ್ನಿಕರಾಗಿ ಗುಜರಾತಿನ ಅಹ್ಮದಾಬಾದಿಗೆ ಆಗಮಿಸಿದ್ದಾರೆ. ವಿಮಾನನಿಲ್ದಾಣದಲ್ಲಿ ಅವರಿಗೆ ಭವ್ಯ ಸ್ವಾಗತವನ್ನು ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯ ಅಪ್ಪುಗೆಯ ಮೂಲಕ ಬರಮಾಡಿಕೊಂಡರು.
ವಿಮಾನನಿಲ್ದಾಣದಿಂದ ಸಬರಮತಿ ಆಶ್ರಮದವರೆಗೆ ರೋಡ್ ಶೋ ಮೂಲಕ ಆಗಮಿಸಿದ ಟ್ರಂಪ್ ಮತ್ತು ಮೋದಿ ಅವರನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಆತ್ಮೀಯ ಸ್ವಾಗತವನ್ನು ಕೋರಿದರು. ಈ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾವಿದರುಗಳು ನಡೆಸಿಕೊಟ್ಟರು.
ಮಹಾತ್ಮ ಗಾಂಧೀಜಿ ವಾಸವಿದ್ದ ಸಬರಮತಿ ಆಶ್ರಮಕ್ಕೆ ತೆರಳಿದ ಟ್ರಂಪ್ ದಂಪತಿ ಅಲ್ಲಿ ಚರಕದ ಮೂಲಕ ನೂಲನ್ನು ನೇಯ್ದರು. ಸುಮಾರು 15 ನಿಮಿಷಗಳ ಕಾಲ ಅಲ್ಲಿ ಕಾಲ ಕಳೆದರು. ಈ ವೇಳೆ ಮೋದಿ ಕೂಡ ಉಪಸ್ಥಿತರಿದ್ದರು. ಆಶ್ರಮದ ಪುಸ್ತಕದಲ್ಲಿ ಬರೆದ ಟ್ರಂಪ್, “ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಅದ್ಭುತ ಭೇಟಿ” ಎಂದಿದ್ದಾರೆ.
ಸಬರಮತಿ ಆಶ್ರಮದ ಬಳಿಕ ಮೋದಿ ಅವರು ವಿಶ್ವದ ಅತೀದೊಡ್ಡ ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರೀಡಾಂಗಣದಲ್ಲಿ ‘ನಮಸ್ತೇ, ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
PM Shri @narendramodi and President @realDonaldTrump visit Sabarmati Ashram in Ahmedabad, Gujarat. #NamasteTrump pic.twitter.com/pDnixeA08y
— BJP (@BJP4India) February 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.