ನವದೆಹಲಿ: ಭಾರತದ ಅತೀದೊಡ್ಡ ರಾಷ್ಟ್ರೀಯ ಪಕ್ಷ ಎನಿಸಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಇತಿಹಾಸ ಇನ್ನು ಮುಂದೆ ಇಂಡೋನೇಷ್ಯಾದ ಇಸ್ಲಾಮಿಕ್ ವಿಶ್ವವಿದ್ಯಾಲಯದ ಕೋರ್ಸ್ನ ಭಾಗವಾಗಲಿದೆ. ಹೌದು, ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಜಯಗಳಿಸಿರುವ ಬಿಜೆಪಿಯ ಗೆಲುವಿನ ಓಟವನ್ನು ವಿಶ್ವವಿದ್ಯಾಲಯದ ಮಕ್ಕಳು ಅಧ್ಯಯನ ಮಾಡಲಿದ್ದಾರೆ.
‘ಭಾರತೀಯ ಜನತಾ ಪಾರ್ಟಿ ಪಾಸ್ಟ್, ಪ್ರೆಸೆಂಟ್ & ಫ್ಯೂಚರ್, ಸ್ಟೋರಿ ಆಫ್ ವರ್ಲ್ಡ್ಸ್ ಬಿಗ್ಗೆಸ್ಟ್ ಪೊಲಿಟಿಕಲ್ ಪಾರ್ಟಿ’ ಎಂಬ ಶೀರ್ಷಿಕೆಯ ಪುಸ್ತಕ ಅಲ್ಲಿನ ಪಠ್ಯವಾಗಲಿದೆ. ಶಾಂತನು ಗುಪ್ತಾ ಬರೆದಿರುವ ಈ ಪುಸ್ತಕವು ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗದಲ್ಲಿನ ಏಷ್ಯನ್ ಸ್ಟಡೀಸ್ ಪದವಿಪೂರ್ವ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಭಾಗವಾಗಲಿದೆ.
ಭಾರತದ ಎರಡು ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷವು ಜಯಗಳಿಸಿದ ರೀತಿ ಇಂಡೋನೇಷ್ಯಾದ ಶಿಕ್ಷಣ ತಜ್ಞರಲ್ಲಿ ಬಿಜೆಪಿಯಲ್ಲಿ ಆಸಕ್ತಿ ಹೆಚ್ಚುವಂತೆ ಮಾಡಿದೆ ಎಂದು ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗದ ಅಧ್ಯಾಪಕ ಸದಸ್ಯ ಹಡ್ಜಾ ಮಿನ್ ಫಾದ್ಲಿ ಹೇಳುತ್ತಾರೆ.
ಈ ಪುಸ್ತಕವು ಅಂತರರಾಷ್ಟ್ರೀಯ ಸಂಬಂಧಗಳ ವಿಭಾಗದಲ್ಲಿ ಪದವಿಪೂರ್ವ ಕೋರ್ಸ್ಗಳಿಗಾಗಿನ ಏಷ್ಯನ್ ಸ್ಟಡೀಸ್ ಪಠ್ಯಕ್ರಮದ ಭಾಗವಾಗಲಿದೆ ಎಂದು ಅವರು ಹೇಳಿದರು.
ಇಂಡಿಯಾ ಫೌಂಡೇಶನ್ ಆಯೋಜಿಸಿದ್ದ ಕೌಟಿಲ್ಯ ಫೆಲೋಶಿಪ್ ಕಾರ್ಯಕ್ರಮದ ಅಂಗವಾಗಿ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಂತನು ಗುಪ್ತಾ ಅವರು ಬರೆದ ಪುಸ್ತಕದ ಬಗ್ಗೆ ತಿಳಿದುಕೊಂಡೆವು ಎಂದು ಹಡ್ಜಾ ಹೇಳಿದ್ದಾರೆ.
”ಇಂಡೋನೇಷ್ಯಾದಲ್ಲಿ ನಾವು ಭಾರತದೊಂದಿಗಿನ ನಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದ್ದೇವೆ ಮತ್ತು ಆದ್ದರಿಂದ ಅದರ ಆಡಳಿತ ಪಕ್ಷ ಬಿಜೆಪಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಬಿಜೆಪಿಯೂ ಇದಕ್ಕೆ ಸಹಮತ ವ್ಯಕ್ತಪಡಿಸಲಿದೆ ಎಂದು ಭಾವಿಸುತ್ತೇವೆ” ಎಂದು ಹಡ್ಜಾ ಹೇಳಿದರು.
ಇಂಡೋನೇಷ್ಯಾದ ವಿಶ್ವವಿದ್ಯಾನಿಲಯವೊಂದರಲ್ಲಿ ಕೋರ್ಸ್ನ ಭಾಗವಾಗಲು ಪುಸ್ತಕವನ್ನು ಆಯ್ಕೆ ಮಾಡುವ ಬಗ್ಗೆ ಕೇಳಿದಾಗ, ಗುಪ್ತಾ ಅವರ ಕೃತಿಗಳ ಜಾಗತಿಕ ಮಾನ್ಯತೆಯು ಎಲ್ಲಾ ಲೇಖಕರಿಗೆ ಅಪಾರ ತೃಪ್ತಿ ತಂದಿದೆ ಎಂದು ಹೇಳಿದರು.
ಈ ಪುಸ್ತಕವು ಬಿಜೆಪಿಯ ಇತಿಹಾಸವನ್ನು ನಿರೂಪಿಸುತ್ತದೆ, ಗುಪ್ತಾ ಅವರು ಕೇಸರಿ ಪಕ್ಷವನ್ನು ಭಾರತ ಕಂಡ ರಾಷ್ಟ್ರೀಯತಾವಾದಿ ಚಳುವಳಿಗಳ ಇತ್ತೀಚಿನ ರಾಜಕೀಯ ಅಭಿವ್ಯಕ್ತಿ ಎಂದು ಬಣ್ಣಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.