ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಮಾರ್ಚ್ 3ರಂದು ಬೆಳಿಗ್ಗೆ ಮರಣದಂಡನೆ ಶಿಕ್ಷೆ ನಿಗದಿಯಾಗಿದೆ. ಈ ಹಿನ್ನಲೆಯಲ್ಲಿ ತಿಹಾರ್ ಜೈಲು ಅಧಿಕಾರಿಗಳು ಎಲ್ಲಾ ನಾಲ್ಕು ಅಪರಾಧಿಗಳಿಗೆ ಪತ್ರವನ್ನು ಬರೆದಿದ್ದು, ಕುಟುಂಬದವರನ್ನು ಕೊನೆಯ ಬಾರಿಗೆ ಭೇಟಿಯಾಗುವ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದಾರೆ.
ಯಾವಾಗ ನೀವು ನಿಮ್ಮ ಕುಟುಂಬದವರನ್ನು ಭೇಟಿಯಾಗಲು ಇಚ್ಛಿಸುತ್ತೀರಾ ಎಂದು ಜೈಲು ಅಧಿಕಾರಿಗಳು ವಿನಯ್ ಮತ್ತು ಅಕ್ಷಯ್ನನ್ನು ಕೇಳಿದ್ದಾರೆ. ಮುಕೇಶ್ ಮತ್ತು ಪವನ್ ಫೆ.1ರ ಡೆತ್ ವಾರೆಂಟ್ಗೂ ಮುಂಚೆ ಅವರ ಕುಟುಂಬದವರನ್ನು ಭೇಟಿಯಾಗಿದ್ದಾರೆ.
ಇನ್ನೊಂದೆಡೆ ಜೈಲು ಅಧಿಕಾರಿಗಳು ಉತ್ತರ ಪ್ರದೇಶ ಜೈಲು ಆಡಳಿತಕ್ಕೆ ಪತ್ರ ಬರೆದಿದ್ದು, ಮಾರ್ಚ್ 3ಕ್ಕೂ ಎರಡು ದಿನಗಳ ಮೊದಲು ಗಲ್ಲಿಗೇರಿಸುವ ವ್ಯಕ್ತಿಯನ್ನು ಕಳುಹಿಸಿಕೊಡುವಂತೆ ಕೋರಿದೆ. ನಾಲ್ವರು ಅಪರಾಧಿಗಳನ್ನು ಮಾರ್ಚ್ 3ರಂದು ಸಂದರ್ಭದಲ್ಲಿ ಗಲ್ಲಿಗೇರಿಸಲಾಗುತ್ತದೆ.
ಫೆಬ್ರವರಿ 16 ರಂದು ವಿನಯ್ ಗೋಡೆಗೆ ತಲೆ ಬಡಿಯುವ ಮೂಲಕ ತನ್ನನ್ನು ಘಾಸಿಗೊಳಿಸಲು ಪ್ರಯತ್ನಿಸಿದ ನಂತರ ಜೈಲಿನ ಆಡಳಿತವು ಹೆಚ್ಚು ನಿಗಾ ವಹಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಫೆಬ್ರವರಿ 17 ರಂದು, ದೆಹಲಿ ನ್ಯಾಯಾಲಯವು 2020 ರ ಮಾರ್ಚ್ 3 ರಂದು ಬೆಳಿಗ್ಗೆ 6:00 ಗಂಟೆಗೆ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರಿಗೆ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.