ಕೊಚ್ಚಿ: ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಷಪ್ ಫ್ರಾಂಕೊ ಮುಲಕ್ಕಲ್ ವಿರುದ್ಧ ಮತ್ತೋರ್ವ ಕ್ರೈಸ್ಥ ಸನ್ಯಾಸಿನಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ. ಈ ಬಿಷಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾಕೆಯೇ ಈಗ ಇವರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ.
ಮುಲಕ್ಕಲ್ ವಿರುದ್ಧ ಈ ಹಿಂದೆ ದಾಖಲಾದ ಅತ್ಯಾಚಾರ ಪ್ರಕರಣದಲ್ಲಿ ಈ ಸನ್ಯಾಸಿನಿ 14ನೇ ಸಾಕ್ಷಿಯಾಗಿದ್ದಳು. ಹೇಳಿಕೆ ನೀಡಿದ್ದ ಈಕೆ, ಬಿಷಪ್ ತನ್ನೊಂದಿಗೆ ದೂರವಾಣಿ ಸಂಭಾಷಣೆ ನಡೆಸುವಾಗ ಅಶ್ಲೀಲ ಮಾತುಗಳನ್ನು ಆಡಿದ್ದಾರೆ ಎಂದಿದ್ದಾಳೆ.
ಸನ್ಯಾಸಿನಿಯ ಪ್ರಕಾರ, ಅವರು 2015 ರಿಂದ 2017 ರವರೆಗೆ ಎರಡು ವರ್ಷಗಳ ಅವಧಿಯಲ್ಲಿ ಇವರು ಫೋನ್ ಕರೆಗಳು, ಚಾಟ್ ಮತ್ತು ವೀಡಿಯೊ ಕರೆಗಳ ಮೂಲಕ ಸಂಪರ್ಕದಲ್ಲಿದ್ದರು. ಬಿಷಪ್ ಬಗ್ಗೆ ಹೆದರಿಕೆ ಇದ್ದ ಕಾರಣ ತಾನು ಈ ಬಗ್ಗೆ ಹೇಳಿಕೊಳ್ಳಲಿಲ್ಲ ಎಂದಿದ್ದಾಳೆ. ಅಲ್ಲದೇ, 2017 ರಲ್ಲಿ ಬಿಷಪ್ ತಾನು ಇದ್ದ ಕಾನ್ವೆಂಟ್ಗೆ ಭೇಟಿ ನೀಡಿ ತಬ್ಬಿಕೊಂಡು ಅಸಹ್ಯವಾಗಿ ನಡೆದುಕೊಂಡ ಎಂದು ಹೇಳಿದ್ದಾಳೆ.
ಮೊದಲ ಪ್ರಕರಣದಲ್ಲಿ ಮಿಷನರೀಸ್ ಆಫ್ ಜೀಸಸ್ನ ಸನ್ಯಾಸಿನಿ, ಫ್ರಾಂಕೊ ಅವರು ಕೊಟ್ಟಾಯಂನ ಕುರುವಿಲಂಗಡು ಕಾನ್ವೆಂಟಿನಲ್ಲಿ ತನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣದ ಎಫ್ಐಆರ್ 2018ರ ಜೂನ್ನಲ್ಲಿ ದಾಖಲಾಗಿದೆ.
ನಂತರ ಪ್ರತಿಭಟನೆಯ ನಂತರ, ಫ್ರಾಂಕೊ ಅವರನ್ನು ಸೆಪ್ಟೆಂಬರ್ 21, 2018 ರಂದು ಬಂಧಿಸಲಾಯಿತು.
ಪ್ರಕರಣದ ಚಾರ್ಜ್ಶೀಟ್ ಅನ್ನು 2019 ರ ಏಪ್ರಿಲ್ನಲ್ಲಿ ಸಲ್ಲಿಸಲಾಯಿತು. ಚಾರ್ಜ್ಶೀಟ್ನಲ್ಲಿ, ಬಿಷಪ್ ಫ್ರಾಂಕೊ ಮುಲ್ಲಕಲ್ ವಿರುದ್ಧ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.