ನವದೆಹಲಿ: ದೂರಸಂಪರ್ಕ ಇಲಾಖೆಯು ‘5 ಜಿ ಹ್ಯಾಕಥಾನ್’ ಅನ್ನು ಪ್ರಾರಂಭಿಸಿದೆ. ಸರ್ಕಾರ, ಶೈಕ್ಷಣಿಕ ಮತ್ತು ಉದ್ಯಮದ ಭಾಗಿದಾರರ ಸಹಯೋಗದೊಂದಿಗೆ ಇದನ್ನು ಆಯೋಜನೆಗೊಳಿಸಲಾಗಿದೆ.
ಕಾರ್ಯಸಾಧುವಾದ 5 ಜಿ ಉತ್ಪನ್ನಗಳು ಮತ್ತು ಪರಿಹಾರಗಳಿಗೆ ಪರಿವರ್ತಿಸಬಹುದಾದಂತಹ ಭಾರತದ ಕೇಂದ್ರೀಕೃತ ಅತ್ಯಾಧುನಿಕ ವಿಚಾರಗಳನ್ನು ಆಯ್ದುಕೊಳ್ಳುವ ಉದ್ದೇಶದಿಂದ ಈ ಹ್ಯಾಕಥಾನ್ ಆಯೋಜನೆಗೊಂಡಿದೆ. ಮೂರು ಹಂತಗಳನ್ನು ಹೊಂದಿರುವ ಈ ಹ್ಯಾಕಥಾನ್ ನಿನ್ನೆ ಪ್ರಾರಂಭಗೊಂಡಿದೆ.
ಈ ವರ್ಷದ ಅಕ್ಟೋಬರ್ 16 ರಂದು ನಡೆಯಲಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ನಲ್ಲಿ ಭವ್ಯ ಸಮಾಪನವನ್ನು ಇದು ಕಾಣಲಿದೆ. ವಿವಿಧ ಹಂತಗಳ ವಿಜೇತರು ಒಟ್ಟು 2.5 ಕೋಟಿ ರೂಪಾಯಿಗಳ ಬಹುಮಾನವನ್ನು ಹಂಚಿಕೊಳ್ಳಲಿದ್ದಾರೆ.
5 ಜಿ ತಂತ್ರಜ್ಞಾನವು ವೇಗ, ಗರಿಷ್ಠ ದತ್ತಾಂಶ ದರ, ಸ್ಪೆಕ್ಟ್ರಮ್ ದಕ್ಷತೆ ಮತ್ತು ಸಂಪರ್ಕ ಸಾಂದ್ರತೆಯ ವಿಷಯದಲ್ಲಿ 4 ಜಿ ಗಿಂತ ಹೆಚ್ಚಿನ ಕ್ವಾಂಟಮ್ ಲೀಪ್ ಅನ್ನು ಒದಗಿಸುತ್ತದೆ. ಈ ಹ್ಯಾಕಥಾನ್ ನವೀನ ಆಲೋಚನೆಗಳನ್ನು ವಿವಿಧ ಉತ್ಪನ್ನಗಳು ಮತ್ತು ಪರಿಹಾರಗಳಾಗಿ ಪರಿವರ್ತಿಸುವ ಮತ್ತು 5 ಜಿ ಸುತ್ತ ಭಾರತದ ನಿರ್ದಿಷ್ಟ ಬಳಕೆಯ ಸಂದರ್ಭಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.
ಈ 5 ಜಿ ಹ್ಯಾಕಥಾನ್ ಡೆವಲಪರ್ಗಳು, ವಿದ್ಯಾರ್ಥಿಗಳು, ಸ್ಟಾರ್ಟ್ ಅಪ್ಗಳು, ಎಸ್ಎಂಇಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಭಾರತ ಮತ್ತು ಎನ್ಆರ್ಐಗಳ ನೋಂದಾಯಿತ ಕಂಪನಿಗಳಿಗೆ ಮುಕ್ತವಾಗಿದೆ. ಭಾರತೀಯ ವ್ಯಾಪ್ತಿಯಲ್ಲಿ 5 ಜಿ ನೆಟ್ವರ್ಕ್ ಬಳಕೆಯ ಪ್ರಕರಣಗಳನ್ನು ಪ್ರಸ್ತುತಪಡಿಸಲು ಭಾಗಿದಾರರು ವ್ಯಕ್ತಿಗಳಾಗಿ ಅಥವಾ ತಂಡವಾಗಿ ಭಾಗವಹಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.