ನವದೆಹಲಿ: ಭಾರತ ವಿರೋಧಿ ಮನಸ್ಥಿತಿಯನ್ನು ಹೊಂದಿರುವ ಬ್ರಿಟಿಷ್ ಶಾಸಕಿ ಡೆಬ್ಬೀ ಅಬ್ರಾಮ್ಸ್ಗೆ ಭಾರತೀಯ ಇ-ವೀಸಾ ನಿರಾಕರಣೆ ಮಾಡಲಾಗಿದೆ. ಭಾರತಕ್ಕೆ ಆಗಮಿಸಿದ್ದ ಅವರನ್ನು ಭಾರತವು ಗೌರವಪೂರ್ವಕವಾಗಿ ವಾಪಾಸ್ ಕಳುಹಿಸಿಕೊಟ್ಟಿದೆ.
ಈ ಬಗ್ಗೆ ಭಾರತೀಯ ವಿದೇಶಾಂಗ ಸಚಿವಾಲಯವು ಸ್ಪಷ್ಟನೆ ನೀಡಿದ್ದು, ಡೆಬ್ಬೀ ಅಬ್ರಾಮ್ಸ್ ಅವರು ಮಾನ್ಯತೆ ಹೊಂದಿರದ ವೀಸಾದಲ್ಲಿ ಆಗಮಿಸಿದ್ದರು. ಭಾರತ ವಿರೋಧಿ ಮನಸ್ಥಿತಿಯನ್ನು ಅವರು ಹೊಂದಿದ್ದಾರೆ. ಅವರನ್ನು ಗೌರವಪೂರ್ವಕವಾಗಿ ವಾಪಾಸ್ ಕಳುಹಿಸಲಾಗಿದೆ ಎಂದಿದೆ.
ಬ್ರಿಟಿಷ್ ಸದನದಲ್ಲಿ ಸದಾ ಭಾರತದ ವಿರುದ್ಧವಾಗಿ ಮಾತಾನಾಡುತ್ತಿದ್ದ ಬ್ರಿಟಿಷ್ ಶಾಸಕಿ ಡೆಬ್ಬೀ ಅಬ್ರಾಮ್ಸ್ ಅವರಿಗೆ ಭಾರತೀಯ ವಿದೇಶಾಂಗ ಸಚಿವಾಲಯವು ಅವರ ಇ-ಬಿಸಿನೆಸ್ ವೀಸಾವನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ಫೆಬ್ರವರಿ 14 ರಂದೇ ತಿಳಿಸಿತ್ತು. ಆದರೂ ಅವರು ದೆಹಲಿ ವಿಮಾನದಲ್ಲಿ ಇಳಿದದ್ದು ಕಾನೂನು ಬಾಹಿರವಾಗಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬ್ರಿಟಿನ್ ಶಾಸಕಿ ಡೆಬ್ಬೀ ಅಬ್ರಾಮ್ಸ್ಗೆ ಅವರು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಅನ್ನು ರದ್ದುಪಡಿಸಿದ ವಿಷಯವಾಗಿ ಭಾರತದ ವಿರುದ್ಧ ನಿರಂತರವಾಗಿ ಹೇಳಿಕೆ ನೀಡುತ್ತಿದ್ದರು. ಈ ಹಿನ್ನಲೆಯಲ್ಲಿ ಭಾರತ ವಿದೇಶಾಂಗ ಸಚಿವಾಲಯವು ಅವರ ವೀಸಾ ರದ್ದುಪಡಿಸುವ ನಿರ್ಧಾರ ಕೈಗೊಂಡಿತು. ಬ್ರಿಟನ್ ಶಾಸಕಿ ನಡೆಯ ವಿರುದ್ಧ ಕಾಂಗ್ರೆಸ್ನ ಅಭಿಷೇಕ್ ಸಿಂಗ್ವಿ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಈ ನಿರ್ಧಾರಕ್ಕೆ ಭಾರತದಲ್ಲಿ ಸಹಮತ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.