ಬೆಂಗಳೂರು: ಸಿಎಎ ವಿರೋಧಿ ಹೋರಾಟದಲ್ಲಿ ಪಾಕಿಸ್ಥಾನದ ಪರವಾಗಿ ಘೋಷಣೆಯನ್ನು ಕೂಗಿದ ಅಮೂಲ್ಯ ಲಿಯೋನಾ ಎನ್ನುವ ಯುವತಿ ವಿರುದ್ಧ ದೇಶವ್ಯಾಪಿ ಖಂಡನೆಗಳು ವ್ಯಕ್ತವಾಗಿದೆ. ಪ್ರಸ್ತುತ ಈಕೆ ಪೊಲೀಸರ ವಶದಲ್ಲಿದ್ದಾಳೆ ಮತ್ತು ಈಕೆಯ ವಿರುದ್ಧ ದೇಶದ್ರೋಹದ ಪ್ರಕರಣವನ್ನು ಹಾಕಲಾಗಿದೆ.
‘ಪಾಕಿಸ್ಥಾನ ಜಿಂದಾಬಾದ್’ ಎನ್ನುವ ಮೂಲಕ ಭಾರತ ವಿರೋಧಿ ಕೃತ್ಯವನ್ನು ಎಸಗಿರುವ ಈಕೆಗೆ ಜಾಮೀನು ನಿರಾಕರಿಸಲಾಗಿದೆ ಮತ್ತು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಎಡಪಂಥೀಯ ಸಂಘಟನೆಗಳ ಹೋರಾಟದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುವ ಈಕೆ, ಸಿಎಎ ವಿರೋಧಿ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದಳು. ನಿನ್ನೆ ಬೆಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಈಕೆ, ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಓವೈಸಿ, ಜೆಡಿಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾ ಮುಂತಾದವರ ಸಮ್ಮುಖದಲ್ಲೇ ‘ಪಾಕಿಸ್ಥಾನ ಜಿಂದಾಬಾದ್’ ಎಂದಿದ್ದಾಳೆ.
ಘಟನೆಯ ನಂತರ ನಿನ್ನೆ ಸಂಜೆಯೇ ಅಮೂಲ್ಯಳನ್ನು ಬಂಧಿಸಲಾಯಿತು. ಆಕೆಯ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿದೆ.” ನಾವು ಅವಳ ವಿರುದ್ಧ 124 ಎ (ದೇಶದ್ರೋಹ), 153 ಎ ಮತ್ತು ಬಿ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಸುಮೋಟೋ ಪ್ರಕರಣವನ್ನು ದಾಖಲಿಸಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಬಿ ರಮೇಶ್ ಹೇಳಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನೆಗಳು ಎತ್ತ ಕಡೆ ಸಾಗುತ್ತಿದೆ ಎಂಬ ಪ್ರಶ್ನೆಯನ್ನು ನಿನ್ನೆ ನಡೆದ ಪ್ರಕರಣ ಹುಟ್ಟು ಹಾಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.