ನವದೆಹಲಿ: ಮಹತ್ವದ ಪರಿವರ್ತನೆ ತರಬಲ್ಲಂತಹ ಯೋಜನೆಯನ್ನು ಕೈಗೊಂಡಿರುವ ಭಾರತೀಯ ರೈಲ್ವೆ ತನ್ನ ಇಂಧನ ಬಿಲ್ಗಳನ್ನು ಬೃಹತ್ ಪ್ರಮಾಣದಲ್ಲಿ ಕಡಿತವನ್ನು ಮಾಡಿದೆ ಮತ್ತು ಈ ಮೂಲಕ ದೊಡ್ಡ ಮೊತ್ತವನ್ನು ಉಳಿತಾಯ ಮಾಡಿದೆ.
ಉತ್ತರ ರೈಲ್ವೆ ವಲಯದ ದೆಹಲಿ ವಿಭಾಗವು 39 ಪ್ರೀಮಿಯಂ ಮತ್ತು ಎಕ್ಸ್ಪ್ರೆಸ್ ರೈಲುಗಳನ್ನು ಹೆಡ್-ಆನ್-ಜನರೇಷನ್ (ಎಚ್ಒಜಿ) ವ್ಯವಸ್ಥೆಗೆ ಯಶಸ್ವಿಯಾಗಿ ಪರಿವರ್ತಿಸುವ ಮೂಲಕ ತನ್ನ ಇಂಧನ ಬಿಲ್ಗಳಲ್ಲಿ ಶೇ.80ರಷ್ಟು ಕಡಿತ ಮಾಡಿದೆ. ಉತ್ತರ ರೈಲ್ವೆಯ ದೆಹಲಿ ವಿಭಾಗದ ಅಧಿಕಾರಿಯೊಬ್ಬರು ಈ ಬಗೆಗಿನ ಮಾಹಿತಿಯನ್ನು ನೀಡಿದ್ದು, 11 ಶತಾಬ್ದಿ ಎಕ್ಸ್ಪ್ರೆಸ್, ಎಂಟು ರಾಜಧಾನಿ ಎಕ್ಸ್ಪ್ರೆಸ್, ಡುರೊಂಟೊದ ಎರಡು ರೈಲುಗಳು, ಎರಡು ಹಮ್ಸಫರ್ ಎಕ್ಸ್ಪ್ರೆಸ್ ಮತ್ತು 16 ಎಕ್ಸ್ ಪ್ರೆಸ್ಗಳಲ್ಲಿ ಪರಿಸರ ಸ್ನೇಹಿ ಎಚ್ಒಜಿ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ ಎಂದಿದ್ದಾರೆ.
ಇಂಧನ ಬಿಲ್ಗಳನ್ನು ಕಡಿತಗೊಳಿಸುವ ಮತ್ತು ಪರಿಸರ ಸಂರಕ್ಷಣೆಗಾಗಿ ಕೊಡುಗೆ ನೀಡುವ ಪ್ರಯತ್ನದಲ್ಲಿ, ರೈಲುಗಳ ನಿಯಮಿತ ಕಾರ್ಯಾಚರಣೆಯಲ್ಲಿ ಎಚ್ಒಜಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಓವರ್ಹೆಡ್ ವಿದ್ಯುತ್ ಮಾರ್ಗಗಳಿಂದ ಪ್ಯಾಂಟೋಗ್ರಾಫ್ ಮೂಲಕ ರೈಲು ಎಂಜಿನ್ಗೆ ಟ್ಯಾಪ್ ಮಾಡಲಾದ ವಿದ್ಯುತ್ ಸರಬರಾಜನ್ನು ಎಂಜಿನ್ ನಿರ್ವಹಣೆಗೆ ಮತ್ತು ರೈಲಿನ ಬೋಗಿಗಳನ್ನು ಸಾಗಿಸಲು ಬಳಸಿಕೊಳ್ಳಲಾಗುತ್ತಿದೆ. ಹೊಸ ಎಚ್ಒಜಿ ತಂತ್ರಜ್ಞಾನದೊಂದಿಗೆ, ವಿದ್ಯುತ್ ಅವಶ್ಯಕತೆಗಳನ್ನು ಪೂರೈಸಲು ಓವರ್ಹೆಡ್ನಿಂದ ರೈಲು ಎಂಜಿನ್ಗೆ ಟ್ಯಾಪ್ ಮಾಡಲಾದ ವಿದ್ಯುತ್ ಸರಬರಾಜನ್ನು ಟ್ರೈಲಿಂಗ್ ಕೋಚುಗಳಿಗೆ ಪೂರೈಸಲಾಗುತ್ತಿದೆ.
ಭಾರತೀಯ ರೈಲ್ವೆಯಲ್ಲಿನ ಎಚ್ಒಜಿ ವ್ಯವಸ್ಥೆಯನ್ನು ಎಲ್ಎಚ್ಬಿ ಅಥವಾ ಲಿಂಕೆ ಹಾಫ್ಮನ್ ಬುಶ್ ಬೋಗಿಗಳನ್ನು ಹೊಂದಿರುವ ಎಲ್ಲಾ ರೈಲುಗಳಲ್ಲಿ ಪರಿಚಯಿಸಲಾಗಿದೆ. ಈ ಪರಿಸರ ಸ್ನೇಹಿ ತಂತ್ರಜ್ಞಾನವು ಕೋಚ್ ಲೈಟಿಂಗ್, ರೈಲುಗಳಲ್ಲಿ ಹವಾನಿಯಂತ್ರಣ ಮುಂತಾದ ವಿದ್ಯುತ್ ಅಗತ್ಯಗಳನ್ನು ಪೂರೈಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.