ಅಹ್ಮದಾಬಾದ್: ಫೆಬ್ರವರಿ 24 ರಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹ್ಮದಾಬಾದ್ಗೆ ಭೇಟಿ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಡೊನಾಲ್ಡ್ ಟ್ರಂಪ್ ಅವರಿಂದ ಮರೆಮಾಚಲು ಕೊಳೆಗೇರಿಗೆ ಕಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಎಲ್ಲಾ ಕಡೆಯೂ ಹರಿದಾಡುತ್ತಿದೆ. ಬಡತನವನ್ನು ಮರೆ ಮಾಡಲು ಗೋಡೆಯನ್ನು ನಿರ್ಮಿಸುತ್ತಿದ್ದಾರೆ ಎಂದು ದೊಡ್ಡ ದೊಡ್ಡ ನಾಯಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯುತ್ತಿದ್ದಾರೆ.
ಆದರೆ ನಿಜವಾಗಿಯೂ ಟ್ರಂಪ್ ಅವರಿಗೆ ಕೊಳಗೇರಿ ಪ್ರದೇಶ ಕಾಣಬಾರದು ಎಂಬ ಕಾರಣಕ್ಕೆ ಕಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆಯೇ? ಈ ಮಾತು ಎಷ್ಟು ಸರಿ?
ಖಂಡಿತಾ ಇದೊಂದು ಸುಳ್ಳು ಸುದ್ದಿ ಎಂಬುದನ್ನು ಕೆಲವು ಫ್ಯಾಕ್ಟ್ಚೆಕ್ಗಳು ಸಾಬೀತುಪಡಿಸಿವೆ. ಕೊಳೆಗೇರಿಗಳನ್ನು ಮರೆಮಾಚುವ ಉದ್ದೇಶದಿಂದ ಗೋಡೆ ನಿರ್ಮಿಸಲಾಗುತ್ತಿರುವುದು ನಿಜವಲ್ಲ ಎಂದು ಸ್ಪಷ್ಟವಾಗಿದೆ. 7 ಅಡಿ ಎತ್ತರದ ಗೋಡೆ ನಿರ್ಮಿಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಇದು ತಪ್ಪು ಗೋಡೆಯ ಎತ್ತರ ಕೇವಲ 4 ಅಡಿ ಮಾತ್ರ.
ಗೋಡೆ ನಿರ್ಮಿಸಲಾಗುತ್ತಿರುವ ಪ್ರದೇಶವಾದ ಸರಣಿ ಆವಾಸ್ ಕಳೆದ 50-60 ವರ್ಷಗಳಿಂದ ಅನಧಿಕೃತ ಅತಿಕ್ರಮಣವನ್ನು ಕಂಡಿದೆ ಎನ್ನಲಾಗಿದೆ. ಕಳೆದ 2-3 ವರ್ಷಗಳಲ್ಲಿ ಇಲ್ಲಿ ಅನಧಿಕೃತ ನಿರ್ಮಾಣಗಳು ಏರಿಕೆಯಾಗಿವೆ ಮತ್ತು ಇದನ್ನು ತಡೆಗಟ್ಟಲು ಗೋಡೆಯನ್ನು ನಿರ್ಮಿಸಲಾಗುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹ್ಮದಾಬಾದಿಗೆ ಭೇಟಿ ನೀಡಲು ನಿರ್ಧರಿಸುವ ಮೊದಲೇ ಈ ಗೋಡೆಯ ನಿರ್ಮಾಣ ಪ್ರಾರಂಭವಾಗಿತ್ತು. ಆದ್ದರಿಂದ ಟ್ರಂಪ್ ಭೇಟಿಯನ್ನು ಗಮನದಲ್ಲಿಟ್ಟುಕೊಂಡು ಗೋಡೆ ನಿರ್ಮಿಸಲಾಗುತ್ತಿದೆ ಎಂಬ ವಾದ ಶುದ್ಧ ಸುಳ್ಳು.
ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ನ ಆಯುಕ್ತರ ಆದೇಶದ ಮೇರೆಗೆ ಗೋಡೆ ನಿರ್ಮಿಸುವ ಕೆಲಸ ಪ್ರಾರಂಭವಾಗಿದೆ.
ಸ್ಥಳೀಯ ಪತ್ರಿಕೆಗಳು ಗೋಡೆಯ ಬಗ್ಗೆ ತಪ್ಪಾದ ವರದಿಯನ್ನು ಮುದ್ರಿಸಿವೆ ಎಂದು ಅಹ್ಮದಾಬಾದ್ ಮಹಾನಗರ ಪಾಲಿಕೆಯ ಆಯುಕ್ತ ವಿಜಯ್ ನೆಹ್ರಾ ತಿಳಿಸಿದ್ದಾರೆ. ಸ್ಥಳೀಯ ಸುದ್ದಿ ವರದಿಯನ್ನು ಆಧರಿಸಿ ರಾಷ್ಟ್ರೀಯ ಸೇರಿದಂತೆ ಇತರ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ ಎಂದಿದ್ದಾರೆ.
ಟ್ರಂಪ್ ಅವರ ಭಾರತ ಪ್ರವಾಸವನ್ನು ಅಂತಿಮಗೊಳಿಸುವ ಮೊದಲೇ ಗೋಡೆ ನಿರ್ಮಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಡೊನಾಲ್ಡ್ ಟ್ರಂಪ್ ಅವರು ಭಾರತ ಭೇಟಿಯನ್ನು ಅಂತಿಮಗೊಳಿಸಿದಾಗ ನಿಜವಾದ ಕೆಲಸ ಪ್ರಾರಂಭವಾದದ್ದು ಕೇವಲ ಕಾಕತಾಳೀಯ ಅಷ್ಟೇ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.