ಕೌಲಾಲಂಪುರ: ಇತ್ತೀಚಿಗೆ ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಮಹಿಳಾ ಫುಟ್ಬಾಲ್ ಸಮಿತಿಯ ಸಭೆಯಲ್ಲಿ, 2022ರಲ್ಲಿ ನಡೆಯಲಿರುವ ಮಹಿಳಾ ಏಷ್ಯಾನ್ ಕಪ್ನ ಕ್ರೀಡಾಕೂಡವನ್ನು ಆಯೋಜಿಸಲು ಭಾರತವನ್ನು ಆಯ್ಕೆ ಮಾಡಲಾಗಿದೆ.
ಏಷ್ಯನ್ ಫೂಟ್ಬಾಲ್ ಫೆಡರೇಶನ್ ಸಮಿತಿಯು ಭಾರತವನ್ನು ಆತಿಥೇಯ ರಾಷ್ಟ್ರವಾಗಿ ಶಿಫಾರಸ್ಸು ಮಾಡಿದ್ದು, ದಕ್ಷಿಣ ಏಷ್ಯಾದಲ್ಲಿ ಈ ಕ್ರೀಡಾಕೂಟದ ಆಯೋಜನೆ ಮಾಡಲು ಅವಕಾಶ ಪಡೆದ ಪ್ರಥಮ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಫಿಫಾ ಮಹಿಳಾ ಅಂಡರ್ 17 ವಿಶ್ವಕಪ್ಗೆ ಆತಿಥ್ಯ ವಹಿಸಿದ ಅನುಭವ ಹೊಂದಿರುವ ಭಾರತವನ್ನು ಮಹಿಳಾ ಏಷ್ಯನ್ ಕ್ರೀಡಾಕೂಟವನ್ನು ಆಯೋಜಿಸಲು ಬಿಡ್ ಮಾಡಿದ ಮೂರು ದೇಶಗಳ ಪೈಕಿ ಅತ್ಯುತ್ತಮ ದೇಶವೆಂದು ಪರಿಗಣಿಸಲಾಗಿದೆ. ಚೀನಾ ಮತ್ತು ಉಜ್ಬೇಕಿಸ್ಥಾನ ಇತರ ದೇಶಗಳು.
ಡಿ.ವೈ ಪಾಟೀಲ್ ಕ್ರೀಡಾಂಗಣ ಮತ್ತು ಫಿಫಾ ಪಂದ್ಯಾವಳಿಗೆ ಬಳಸಿದ ಟ್ರಾನ್ಸ್ ಸ್ಟೇಡಿಯಾ ಅರೆನಾ ಕ್ರೀಡಾಂಗಣವನ್ನು ಭಾರತ ಈ ಕ್ರೀಡಾಕೂಟಕ್ಕೆ ಪ್ರಸ್ತಾಪಿಸಿದೆ. ಭಾರತವು 2016 ರಲ್ಲಿ ನಡೆದ ಎಎಫ್ಸಿ ಅಂಡರ್ -16 ಚಾಂಪಿಯನ್ಶಿಪ್ ಮತ್ತು ಫಿಫಾ ಅಂಡರ್ -17 ವಿಶ್ವಕಪ್ 2017 ರ ಆತಿಥೇಯನಾಗಿತ್ತು. ಹೀಗಾಗಿ ಎಎಫ್ಸಿ ಮಹಿಳಾ ಏಷ್ಯನ್ ಕಪ್ ಸಂದರ್ಭದಲ್ಲಿ ಕ್ರೀಡಾಂಗಣದ ಗುಣಮಟ್ಟವನ್ನು ಭಾರತ ಇನ್ನಷ್ಟು ಕಾಯ್ದುಕೊಳ್ಳುತ್ತದೆ ಎಂಬ ಭರವಸೆಯನ್ನು ಸಮಿತಿ ವ್ಯಕ್ತಪಡಿಸಿದೆ.
ಎಎಫ್ಸಿಯ ಅಧ್ಯಕ್ಷರಾಗಿರುವ ಮಾಫುಝಾ ಅಕ್ತರ್ ಕಿರೊನ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, “ಇದು ಏಷ್ಯಾದ ಮಹಿಳಾ ಫುಟ್ಬಾಲ್ನಲ್ಲಿ ಅತ್ಯಂತ ಪ್ರಮುಖ ಮತ್ತು ಪ್ರತಿಷ್ಠಿತ ಸ್ಪರ್ಧೆಯಾಗಿದೆ. ಜೋರ್ಡಾನ್ನಲ್ಲಿ ನಡೆಸಲಾದ ಕೊನೆಯ ಆವೃತ್ತಿಯ ಪುಟ್ ಬಾಲ್ ಕ್ರೀಡಾಕೂಟ ಏಷ್ಯಾದ ಮಹಿಳಾ ಆಟದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಕ್ರೀಡಾಕೂಟವನ್ನು ಮೊದಲ ಬಾರಿಗೆ ಪಶ್ಚಿಮ ಏಷ್ಯಾದ ರಾಷ್ಟ್ರದಲ್ಲಿ ಆಯೋಜಿಸಲಾಯಿತು. ಈ ದೃಷ್ಠಿಯಲ್ಲಿ ನಾವು ಏಷ್ಯಾದ ಎಲ್ಲಾ ದಿಕ್ಕಿನಡೆಗೆ ಪರಂಪರೆಯನ್ನು ಮುಂದುವರೆಸುವ ಹೆಜ್ಜೆಯತ್ತ ಸಾಗಿದ್ದೇವೆ” ಎಂದಿದ್ದಾರೆ.
ಪಂದ್ಯಾವಳಿಯ ದಿನಾಂಕಗಳು 2022ರ ಅಕ್ಟೋಬರ್ ಅಂತ್ಯದಲ್ಲಿ ಮತ್ತು ನವೆಂಬರ್ ಆರಂಭಕ್ಕೆ ನಿಗದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.