ನವದೆಹಲಿ: ಭಾರತದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾ ಮುಸ್ಲಿಮರು ನೇಪಾಳಕ್ಕೆ ವಲಸೆ ಹೋಗಲು ಪ್ರಾರಂಭಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದೆ. ಕನಿಷ್ಠ 378 ರೋಹಿಂಗ್ಯಾಗಳು ನೇಪಾಳಕ್ಕೆ ತೆರಳಿದ್ದಾರೆ ಮತ್ತು ಅವರಲ್ಲಿ ಕೆಲವರು ರಿಯಲ್ ಎಸ್ಟೇಟ್ ದಲ್ಲಾಳಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಆ ಹಿಮಾಲಯನ್ ರಾಷ್ಟ್ರದಲ್ಲಿ ಭೂಮಿಯನ್ನು ಖರೀದಿಸಲು ಸಜ್ಜಾಗಿದ್ದಾರೆ ಎಂದು ವರದಿ ಹೇಳಿದೆ.
ಈಗಾಗಲೇ ನೇಪಾಳದಲ್ಲಿ ನೆಲೆಸಿರುವ ರೋಹಿಂಗ್ಯಾಗಳೊಂದಿಗೆ ಈ ರೋಹಿಂಗ್ಯಾಗಳು ಸಂಪರ್ಕದಲ್ಲಿದ್ದಾರೆ ಮತ್ತು ನೇಪಾಳದಲ್ಲಿ ಪೌರತ್ವ ದಾಖಲೆಗಳನ್ನು ಪಡೆದುಕೊಳ್ಳಲು ಸಾವಿರಾರು ರೂಪಾಯಿ ಲಂಚವನ್ನು ಸಹ ಪಾವತಿಸಿದ್ದಾರೆ ಎಂದು ಗುಪ್ತಚರ ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೇಪಾಳದಲ್ಲಿ ನೆಲೆಸಲು ದಲ್ಲಾಳಿಗಳಿಗೆ 4,000 ರಿಂದ 50,000 ರೂಪಾಯಿ ಲಂಚಗಳನ್ನು ಇವರು ನೀಡುತ್ತಿದ್ದಾರೆ. ನೇಪಾಳದ ಕೆಲವು ಇಸ್ಲಾಮಿಕ್ ಸಂಸ್ಥೆಗಳು ದೇಶದಲ್ಲಿ ನೆಲೆಸಲು ರೋಹಿಂಗ್ಯಾಗಳಿಗೆ ಧನಸಹಾಯ ನೀಡುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಸ್ಲಾಮಿ ಸಂಘ್ ನೇಪಾಳ ರೊಹಿಂಗ್ಯಾಗಳಿಗೆ ಧನ ಸಹಾಯ ನೀಡುತ್ತಿರುವ ಪ್ರಮುಖ ಗುಂಪಾಗಿದ್ದು, ಇದರ ಚಟುವಟಿಕೆಗಳು ಅತ್ಯಂತ ಅನುಮಾನಾಸ್ಪದವಾಗಿವೆ.
ನೇಪಾಳದ ಧೇಡಿಂಗ್ ಜಿಲ್ಲೆಯಲ್ಲಿ ಕನಿಷ್ಠ 35 ತಾತ್ಕಾಲಿಕ ಆಶ್ರಯಗಳಿವೆ ಮತ್ತು ಇವೆಲ್ಲವೂ ಕಳೆದ ಕೆಲವು ದಿನಗಳಲ್ಲಿ ಸೃಷ್ಟಿಯಾಗಿವೆ. ಅಂತೆಯೇ, 104 ರೋಹಿಂಗ್ಯಾಗಳು ಲ್ಯಾನ್ಸ್ಟೂರ್ನಲ್ಲಿ ನೆಲೆಸಿದ್ದಾರೆ ಮತ್ತು ಅವರಲ್ಲಿ ಕೆಲವರು ಪನೌಟಿ ಪುರಸಭೆ ವಲಯಲ್ಲಿದ್ದಾರೆ. ಅಂತಹ ರೋಹಿಂಗ್ಯಾಗಳ ಚಲನವಲನಗಳ ಬಗ್ಗೆ ನಿಗಾ ಇಡಬೇಕಾದ ತುರ್ತು ಅವಶ್ಯಕತೆಯಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಪ್ರತಿಪಾದಿಸಿದ್ದಾರೆ.
ಪಾಕಿಸ್ಥಾನದ ಕುಖ್ಯಾತ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸಹ ಇಂಡೋ-ನೇಪಾಳ ಗಡಿಯಲ್ಲಿ ಲಷ್ಕರ್-ಇ-ತೊಯ್ಬಾ ಮತ್ತು ಜೈಶೇ-ಇ-ಮೊಹಮ್ಮದ್ನಂತಹ ಭಯೋತ್ಪಾದಕ ಗುಂಪುಗಳ ನೆಲೆಗಳನ್ನು ನಿರ್ಮಿಸುತ್ತಿದೆ. ನೇಪಾಳದಲ್ಲಿ ಐಎಸ್ಐನ ಚಟುವಟಿಕೆಯನ್ನು ಗಮನಿಸಿದರೆ, ರೋಹಿಂಗ್ಯಾಗಳಿಗೆ ನೇಪಾಳದಲ್ಲಿ ನೆಲೆಸಲು ಇವರೇ ಹಣಕಾಸು ಒದಗಿಸುತ್ತಿದ್ದಾರೆ. ಆದರೆ ಈಗಲೇ ಅಂತಹ ತೀರ್ಮಾನಕ್ಕೆ ಬರುವುದು ಕಷ್ಟ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.