ದಲಿತರ ಪರವಾದ ಧ್ವನಿ ಎಂದು ತನ್ನನ್ನು ತಾನು ಕರೆಸಿಕೊಳ್ಳುತ್ತಿರುವ ಸಿಪಿಎಂನ ನಿಜವಾದ ಮುಖವನ್ನು ಕೇರಳದ ಆಟೋ ರಿಕ್ಷಾ ಚಾಲಕಿಯಾಗಿರುವ ದಲಿತ ಮಹಿಳೆಯೊಬ್ಬರು ಬಹಿರಂಗಪಡಿಸಿದ್ದಾರೆ. ಆ ಪಕ್ಷದೊಳಗಿನ ಜಾತಿ ತಾರತಮ್ಯದ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. ಅದರಲ್ಲೂ ದಲಿತ ದೌರ್ಜನ್ಯದ ವಿರುದ್ಧ ಹೋರಾಟ ಮಾಡುವ ಜಿಗ್ನೇಶ್ ಮೆವಾನಿಯ ಅಸಲಿ ಮುಖವನ್ನು ಅವರು ಬಹಿರಂಗಪಡಿಸಿದ್ದಾರೆ.
ದಲಿತ ಮಹಿಳೆ ಚಿತ್ರಲೇಖಾ ತಮ್ಮ ಆತ್ಮಚರಿತ್ರೆಯಲ್ಲಿ ಕೇರಳ ಕಣ್ಣೂರು ಜಿಲ್ಲೆಯ ಮೇಲ್ವರ್ಗದ ಎಡ ರಾಜಕೀಯದ ಬಗ್ಗೆ ಧ್ವನಿ ಎತ್ತಿ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಅವರ ಈ ದಿಟ್ಟ ನಡೆಗೆ ಸಿಪಿಎಂ ಟ್ರೇಡ್ ಯೂನಿಯನ್ ಅವರ ವಿರುದ್ಧ ಮುಗಿ ಬಿದ್ದಿದೆ.
ಕೆಎಲ್ 13 ಎಲ್ 8527 ಎಂಬ ಶೀರ್ಷಿಕೆಯ ತನ್ನ ಆತ್ಮಚರಿತ್ರೆಯಲ್ಲಿ, ರಾಷ್ಟ್ರೀಯ ಮೆವಾನಿಯ ದಲಿತ್ ಅಧಿಕಾರಿ ಮಂಚ್ (ಆರ್ಡಿಎಂಎಂ) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕಾಗಿ ಗುಜರಾತ್ಗೆ ಭೇಟಿ ನೀಡಿದಾಗ ಜಿಗ್ನೇಶ್ ಮೆವಾನಿಯ ಮನೆಯಲ್ಲಿ ತಾನು ತೀವ್ರ ತಾರತಮ್ಯವನ್ನು ಎದುರಿಸಿದ್ದೇನೆ ಎಂದು ಚಿತ್ರಲೇಖಾ ಹೇಳಿದ್ದಾರೆ. ಜಿಗ್ನೇಶ್ ಅವರ ಮನೆಯಲ್ಲಿ ತನಗೆ ಸ್ನಾನ ಮಾಡಲು ಅವಕಾಶ ನೀಡಲಾಗಿಲ್ಲ ಮತ್ತು ಜಾತಿ-ತಾರತಮ್ಯದಿಂದ ಆತನ ಮನೆಯವರು ನನ್ನನ್ನು ನಡೆಸಿಕೊಂಡರು ಎಂದು ಆಕೆ ಹೇಳಿದ್ದಾರೆ.
ಚಿತ್ರಲೇಖಾ ಅವರ ಪುಸ್ತಕವು ಜಿಗ್ನೇಶ್ ಮೇವಾನಿ ಭೇಟಿಯಾದ ಸಂದರ್ಭದಲ್ಲಿ ಅನುಭವಿಸಿದ ಜಾತಿ-ತಾರತಮ್ಯ ಮತ್ತು ಜಾತಿ-ವಿಷಯಗಳ ಬಗೆಗಿನ ಆತನ ಬೂಟಾಟಿಕೆಗಳನ್ನು ಬಹಿರಂಗಪಡಿಸುವಂತಹ ಅನೇಕ ಘಟನೆಗಳನ್ನು ಒಳಗೊಂಡಿದೆ.
ಚಿತ್ರಲೇಖಾ ಅವರು ಮೇಲ್ಜಾತಿಯ ವ್ಯಕ್ತಿಯನ್ನು ಮದುವೆಯಾದ ನಂತರ ಕಮ್ಯುನಿಸ್ಟರಿಂದ ಹಲ್ಲೆಗೊಳಗಾದರು ಮತ್ತು ಪೀಡಿಸಲ್ಪಟ್ಟರು. ಸೇಡು ತೀರಿಸಿಕೊಳ್ಳುವ ಸಲುವಾಗಿ, ಸಿಪಿಎಂ ಕಾರ್ಯಕರ್ತರು 2005 ರಲ್ಲಿ ಅವರ ಆಟೋರಿಕ್ಷಾಗೆ ಬೆಂಕಿ ಹಚ್ಚಿದರು. ಈ ಘಟನೆಯ ನಂತರ, ಆಕೆ ಮತ್ತು ಆಕೆಯ ಕುಟುಂಬ ಸಿಪಿಎಂ ನಾಯಕತ್ವದ ನಿರಂತರ ಕಣ್ಗಾವಲಿಗೆ ಒಳಪಟ್ಟಿತ್ತು. ಅವರು ಬೆದರಿಕೆಗಳಿಗೆ ಬಗ್ಗದ ಕಾರಣ, ಸಿಪಿಎಂ ಅವರ ಕುಟುಂಬವನ್ನು ಸಾಮಾಜಿಕವಾಗಿ ಬಹಿಷ್ಕರಿಸಿತು, ಹೀಗಾಗಿ ಅವರು ತಮ್ಮ ಹಳ್ಳಿಯಿಂದ ಪಲಾಯನ ಮಾಡಬೇಕಾಯಿತು. ಅವರ ಮೇಲೆ ಸಿಪಿಎಂ ಗೂಂಡಾಗಳು ದೈಹಿಕ ಹಲ್ಲೆ ನಡೆಸಿದರು ಮತ್ತು ಆಕೆಯ ಆಟೋರಿಕ್ಷಾ ಹಲವಾರು ಬಾರಿ ಹಾನಿಗೊಳಪಟ್ಟಿತು.
ಚಿತ್ರಲೇಖಾ ಬೆದರಿಕೆಗಳಿಗೆ ಬಗ್ಗದ ಕಾರಣ ಹತಾಶರಾದ ಕಮ್ಯುನಿಸ್ಟರು ಅಕೆಯನ್ನು ‘ವೇಶ್ಯೆ’ ಎಂದು ಕರೆಯುವ ಪೋಸ್ಟರ್ಗಳನ್ನು ಹಾಕಿದ್ದರು.
ಸಿಪಿಎಂ ನಾಯಕತ್ವವು ‘ಪರಯ ಮಹಿಳೆಯರು ಆಟೋ ರಿಕ್ಷಾ ಓಡಿಸಬಾರದು’ ಎಂದು ಆ ಸಮಯದಲ್ಲಿ ಹೇಳಿತ್ತು ಎಂಬುದಾಗಿ ಚಿತ್ರಲೇಖಾ ಆರೋಪಿಸಿದ್ದರು ಎಂದು ವರದಿಯಾಗಿದೆ. ಪರಯ ಜಾತಿ ಕೇರಳದ ಪರಿಶಿಷ್ಟ ಜಾತಿಯ ಅತ್ಯಂತ ಕೆಳ ದರ್ಜೆಯ ವರ್ಗಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.
ಕುತೂಹಲಕಾರಿ ಸಂಗತಿಯೆಂದರೆ, ಈಗ ಚಿತ್ರಲೇಖಾ ಅವರಿಂದ ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಲ್ಪಟ್ಟಿರುವ ಜಿಗ್ನೇಶ್ ಮೇವಾನಿ, 2018 ರಲ್ಲಿ ಚಿತ್ರಲೇಖಾ ಅವರ ದುಃಸ್ಥಿತಿಯ ಬಗ್ಗೆ ಮಾತನಾಡಿದ್ದರು.
2018 ರಲ್ಲಿ, ದಲಿತ ರಾಜಕಾರಣಿಯಾಗಿ ತಮ್ಮನ್ನು ತಾವು ರೂಪಿಸಿಕೊಳ್ಳುತ್ತಿದ್ದ ಜಿಗ್ನೇಶ್ ಮೇವಾನಿ, ಸಿಪಿಎಂ ಬೆಂಬಲಿತ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದರು ಮತ್ತು ದಲಿತ ವಿಷಯಗಳ ಬಗ್ಗೆ ತಮ್ಮ ನಿಲುವು ಮೀಸಲಾಗಿದೆ ಎಂದು ಹೇಳಿದ್ದರು.
ಪಟ್ಟಿಕಾ ಜಾತಿ ಕ್ಷೇಮಾ ಸಮಿತಿ (ಪಿಕೆಎಸ್) ಸಿಪಿಎಂ ನಡೆಸುತ್ತಿರುವ ದಲಿತ ಸಂಘಟನೆಯಾಗಿದ್ದು, ಅದರ ಆಹ್ವಾನವನ್ನು ಮೆವಾನಿ ಅವರು ನಿರಾಕರಿಸಿದ್ದರು. ಚಿತ್ರಲೇಖಾಗೆ ನೀಡಿದ ಕಿರುಕುಳವನ್ನು ಅವರು ಖಂಡಿಸಿದ್ದರು ಮತ್ತು ಅವರ ಹೋರಾಟದಲ್ಲಿ ಬಲವಾಗಿ ನಿಂತಿರುವುದಾಗಿ ಅವರು ಪ್ರತಿಪಾದಿಸಿದ್ದರು.
ವಾಡ್ಗಮ್ ಶಾಸಕ ಮತ್ತು ಸಾಮಾಜಿ ಹೋರಾಟಗಾರ ಎನಿಸಿದ್ದ ಜಿಗ್ನೇಶ್ ಮೇವಾನಿ ಅವರ ರಾಜಕೀಯ ಉದ್ದೇಶಗಳನ್ನು ಪೂರೈಸಲು ದೌರ್ಜನ್ಯ-ಪ್ರಚೋದನೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಮಾರ್ಗದತ್ತ ವಾಲಿದ್ದಾರೆ. ವಿಡಿಯೋವೊಂದರಲ್ಲಿ, ಜಿಗ್ನೇಶ್ ಮೇವಾನಿ ಅವರು ಬೆಂಗಳೂರಿನಲ್ಲಿ ಪ್ರಧಾನಮಂತ್ರಿಗಳ ಸಮಾವೇಶವನ್ನು ಅಡ್ಡಿಪಡಿಸಲು ಜನರನ್ನು ಪ್ರಚೋದಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಕುರ್ಚಿಗಳನ್ನು ಎಸೆಯುವ ಮೂಲಕ ಮತ್ತು ಅವರು ಭರವಸೆ ನೀಡಿದ್ದ ಎರಡು ಕೋಟಿ ಉದ್ಯೋಗಗಳಿಗೆ ಏನಾಯಿತು ಎಂದು ಕೇಳುವ ಮೂಲಕ ಯುವಕರು ಮೋದಿ ಸಮಾವೇಶವನ್ನು ಅಡ್ಡಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಹೇಳುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ.
ಜಿಗ್ನೇಶ್ ಮೇವಾನಿ ಮತ್ತು ವಿವಾದಗಳು ಪರಸ್ಪರ ಬೆಸದುಕೊಂಡೇ ಇರುತ್ತದೆ. ಆಗಾಗ ಕೆಟ್ಟ ಪ್ರತಿಕ್ರಿಯೆಗಳನ್ನು ನೀಡಿ ಅವರು ಸುದ್ದಿಯಾಗುತ್ತಿರುತ್ತಾರೆ. ಬಹಳ ಹಿಂದೆಯೇ, ರಿಪಬ್ಲಿಕ್ ಟಿವಿಯಲ್ಲಿ ಜಿಗ್ನೇಶ್ ಮೆವಾನಿ ಅವರು “ಹಿಮಾಲಯಕ್ಕೆ ಹೋಗಿ ಎಲುಬುಗಳನ್ನು ಕರಗಿಸಿ” ಎಂದು ಪ್ರಧಾನಿಗೆ ಹೇಳಿದ್ದರು. ಭೀಮಾ-ಕೊರೆಗಾಂವ್ ಘಟನೆಯಲ್ಲಿ ಹಿಂಸಾಚಾರ ಸ್ಫೋಟಗೊಳ್ಳುವ ಮೊದಲೇ ಜನರನ್ನು ಪ್ರಚೋದಿಸುವ ಕಾರ್ಯವನ್ನು ಮಾಡಿ ಇವರು ಸಿಕ್ಕಿಬಿದ್ದಿದ್ದರು. ಕೇವಲ ಪ್ರಧಾನಿ ಮಾತ್ರವಲ್ಲ, ಜಿಗ್ನೇಶ್ ಮೇವಾನಿ ಪೊಲೀಸರನ್ನು ಕೂಡ ನಿಂದಿಸಿದ್ದಾರೆ. ಆದರೆ ಬಳಿಕ ತಾನೇ ಬಲಿಪಶು ಎಂದು ನಾಟಕ ಮಾಡುವುದರಲ್ಲೂ ಇವರು ನಿಸ್ಸೀಮರು.
ಇದೀಗ ಚಿತ್ರಲೇಖ ತಮ್ಮ ಆತ್ಮಚರಿತ್ರೆಯಲ್ಲಿ ಜಿಗ್ನೇಶ್ ಅಸಲಿಯತ್ತನ್ನು ಬಹಿರಂಗಪಡಿಸಿದ್ದಾರೆ. ಮಾತ್ರವಲ್ಲ, ಎಡಪಂಥೀಯರ ನೈಜ ಮುಖವನ್ನೂ ಹೊರ ಜಗತ್ತಿಗೆ ತಿಳಿಯುವಂತೆ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.