ನವದೆಹಲಿ: ಭಾರತವು ಏಪ್ರಿಲ್ 1 ರಿಂದ ವಿಶ್ವದ ಅತ್ಯಂತ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್ಗೆ ಬದಲಾಗುತ್ತಿದೆ. ಯಾಕೆಂದರೆ ಭಾರತ ಯುರೋ- IV ಶ್ರೇಣಿಗಳಿಂದ ನೇರವಾಗಿ ಯುರೋ- VI ಹೊರಸೂಸುವಿಕೆ ಕಂಪ್ಲೈಂಟ್ ಇಂಧನಗಳಿಗೆ ಜಿಗಿಯುತ್ತಿದೆ. ಕೇವಲ ಮೂರು ವರ್ಷಗಳಲ್ಲಿ ಈ ಸಾಧನೆಯನ್ನು ಮಾಡಲಾಗಿದೆ ಮತ್ತು ಇದು ಜಗತ್ತಿನ ಯಾವುದೇ ದೊಡ್ಡ ಆರ್ಥಿಕತೆಗಳು ಮಾಡದ ಸಾಧನೆ ಇದಾಗಿದೆ.
ಪ್ರಮುಖ ನಗರಗಳಲ್ಲಿ ಉಸಿರುಗಟ್ಟಿಸುವ ಮಾಲಿನ್ಯಕ್ಕೆ ಒಂದು ಕಾರಣವೆಂದು ಹೇಳಲಾಗುವ ವಾಹನ ಹೊರಸೂಸುವಿಕೆಯನ್ನು ಕಡಿತಗೊಳಿಸಲು ಭಾರತವು ಪ್ರತಿ ಮಿಲಿಯನ್ಗೆ ಕೇವಲ 10 ಭಾಗ ಸಲ್ಫರ್ ಹೊಂದಿರುವ ಪೆಟ್ರೋಲ್ ಮತ್ತು ಡೀಸೆಲ್ ಬಳಸುವ ರಾಷ್ಟ್ರಗಳ ಆಯ್ದ ಲೀಗ್ಗೆ ಸೇರಲಿದೆ.
ದೇಶದ ಇಂಧನ ಮಾರುಕಟ್ಟೆಯ ಅರ್ಧದಷ್ಟು ಭಾಗವನ್ನು ನಿಯಂತ್ರಿಸುವ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪ್ (ಐಒಸಿ) ಅಧ್ಯಕ್ಷ ಸಂಜೀವ್ ಸಿಂಗ್, ಬಹುತೇಕ ಎಲ್ಲಾ ಸಂಸ್ಕರಣಾಗಾರಗಳು ಅಲ್ಟ್ರಾ-ಲೋ ಸಲ್ಫರ್ ಬಿಎಸ್-ವಿ (ಯುರೋ- VI ದರ್ಜೆಗೆ ಸಮ) ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದಿಸಲು 2019ರ ಅಂತ್ಯಕ್ಕೆಯೇ ಪ್ರಾರಂಭಿಸಿವೆ ಮತ್ತು ತೈಲ ಕಂಪನಿಗಳು ಈಗ ದೇಶದ ಪ್ರತಿಯೊಂದು ಹನಿ ಇಂಧನವನ್ನು ಹೊಸದರೊಂದಿಗೆ ಬದಲಿಸುವ ಪ್ರಯಾಸದಾಯಕ ಕೆಲಸವನ್ನು ಕೈಗೊಂಡಿವೆ ಎಂದಿದ್ದಾರೆ.
“ಏಪ್ರಿಲ್ 1 ರಿಂದ ಬಿಎಸ್-VI ಇಂಧನವನ್ನು ಪೂರೈಸಲು ನಾವು ಸಂಪೂರ್ಣವಾಗಿ ಸಜ್ಜಾಗಿದ್ದೇವೆ. ಬಹುತೇಕ ಎಲ್ಲಾ ಸಂಸ್ಕರಣಾಗಾರಗಳು ಬಿಎಸ್-V ಇಂಧನವನ್ನು ಪೂರೈಸಲು ಪ್ರಾರಂಭಿಸಿವೆ ಮತ್ತು ಇದು ದೇಶಾದ್ಯಂತ ಶೇಖರಣಾ ಡಿಪೋಗಳನ್ನು ತಲುಪಿದೆ” ಎಂದು ಅವರು ಹೇಳಿದ್ದಾರೆ.
ಶೇಖರಣಾ ಡಿಪೋಗಳಿಂದ, ಇಂಧನವು ಪೆಟ್ರೋಲ್ ಪಂಪ್ಗಳಿಗೆ ಪ್ರಯಾಣಿಸಲು ಪ್ರಾರಂಭಿಸಿದೆ ಮತ್ತು ಮುಂದಿನ ಕೆಲವು ವಾರಗಳಲ್ಲಿ ಎಲ್ಲರಿಗೂ ಬಿಎಸ್-VI ದರ್ಜೆಯ ಪೆಟ್ರೋಲ್ ಮತ್ತು ಡೀಸೆಲ್ ಮಾತ್ರ ಸಿಗಲಿದೆ ಎಂದು ಅವರು ಹೇಳಿದ್ದಾರೆ. “ಏಪ್ರಿಲ್ 1 ರಂದು ದೇಶದ ಎಲ್ಲಾ ಪೆಟ್ರೋಲ್ ಪಂಪ್ಗಳಲ್ಲಿ ನಳಿಕೆಗಳಿಂದ ಹರಿಯುವ ಇಂಧನವು ಬಿಎಸ್- VI ಹೊರಸೂಸುವಿಕೆ ಕಂಪ್ಲೈಂಟ್ ಇಂಧನವಾಗಲಿದೆ ಎಂದು ನಮಗೆ ಶೇ.100ರಷ್ಟು ವಿಶ್ವಾಸವಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.