ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ವರ್ಷ ತುಂಬಾ ಸಂಕೀರ್ಣವಾದ ಯೋಜನೆಯನ್ನು ಮುನ್ನಡೆಸಲು ಯೋಜಿಸಿದೆ, ಈ ಯೋಜನೆಯಡಿ ವಿಜ್ಞಾನಿಗಳು ಮೊದಲು ಉಪಗ್ರಹವನ್ನು ಇಬ್ಭಾಗಗೊಳಿಸಲಿದ್ದಾರೆ ಮತ್ತು ನಂತರ ಅದನ್ನು ಬಾಹ್ಯಾಕಾಶದಲ್ಲಿ ಮರು ಜೋಡಿಸಲಿದ್ದಾರೆ ಎಂದು ವರದಿಗಳು ಹೇಳಿವೆ.
ಭಾರತದ ಮೊಟ್ಟಮೊದಲ ಬಾಹ್ಯಾಕಾಶ ಡಾಕಿಂಗ್ ಪ್ರಯೋಗವನ್ನು (SPADEX) ನಡೆಸಲು ಇಸ್ರೋ ಸಜ್ಜಾಗಿದೆ. ಪ್ರಯೋಗವು ಭೌತಿಕವಾಗಿ ಬಾಹ್ಯಾಕಾಶದಲ್ಲಿ ಪರಸ್ಪರ ಸಂಪರ್ಕಿಸುವ ಎರಡು ಪ್ರತ್ಯೇಕ ಉಪಗ್ರಹಗಳನ್ನು ಒಳಗೊಂಡಿರುತ್ತದೆ. ಎರಡು ಉಪಗ್ರಹಗಳನ್ನು ದೇಶೀಯವಾಗಿ ತಯಾರಿಸಿದ ಪಿಎಸ್ಎಲ್ವಿ ರಾಕೆಟ್ನಲ್ಲಿ ಕಳುಹಿಸಲಾಗುವುದು.
ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆಗೆ ಪೂರಕವಾಗಿ ಈ ಯೋಜನೆ ನಡೆಯುತ್ತಿದೆ. ನಮ್ಮ ಗಗನಯಾತ್ರಿಗಳನ್ನು ಬಾಹ್ಯಾಕಾಶ ವಾಹನದಿಂದ ಇನ್ನೊಂದಕ್ಕೆ ಸುರಕ್ಷಿತವಾಗಿ ವರ್ಗಾವಣೆ ಮಾಡುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಇಸ್ರೋ ಅಧ್ಯಕ್ಷ ಕೆ.ಶಿವನ್ ಈ ಬಗ್ಗೆ ಮಾಹಿತಿ ನೀಡಿದ್ದು, “ನಾವು ಉಡಾವಣೆ ಮಾಡುವ ಉಪಗ್ರಹವು ಎರಡು ಘಟಕಗಳನ್ನು ಹೊಂದಿರುತ್ತದೆ. ಇದನ್ನು ಎರಡು ತುಂಡುಗಳಾಗಿ ಬೇರ್ಪಡಿಸಲಾಗುತ್ತದೆ ಮತ್ತು ನಂತರ ಅವುಗಳನ್ನು ಒಂದೇ ತುಂಡಾಗಿ ಡಾಕ್ ಮಾಡಲಾಗುತ್ತದೆ. ಈ ಏಕ ಘಟಕವು ನಂತರ ಪೂರ್ಣ ಪ್ರಮಾಣದ ಉಪಗ್ರಹವಾಗಿ ಕಾರ್ಯನಿರ್ವಹಿಸುತ್ತದೆ. ಇದು ಬಹಳ ನಿರ್ಣಾಯಕ ತಂತ್ರಜ್ಞಾನ” ಎಂದಿದ್ದಾರೆ.
ಸ್ಪ್ಯಾಡೆಕ್ಸ್ನ ಯಶಸ್ವಿ ಅನುಷ್ಠಾನ ಭೂಮಿಯ ಗ್ರಹವನ್ನು ಸುತ್ತುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್)ವನ್ನು ಹೋಲುವ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲು ಭಾರತದ ಮಹತ್ವಾಕಾಂಕ್ಷೆಗಳಿಗೆ ದಾರಿ ಮಾಡಿಕೊಡುತ್ತದೆ. ನಂತರ ಬಾಹ್ಯಾಕಾಶ ಕೇಂದ್ರವು ಬಾಹ್ಯಾಕಾಶದಲ್ಲಿ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸುತ್ತದೆ.
ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ 2022-23ರ ಅಂತ್ಯದ ಮೊದಲು ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ಡಾ.ಶಿವನ್ ಅವರ ಪ್ರಕಾರ, ಗಗನಯಾನ ಯೋಜನೆ ಡಿಸೆಂಬರ್ 2021ರಲ್ಲಿ ನಡೆಯುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.