ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಿರುವ ಸಂಘಟನೆ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಡೀ ದೇಶಾದ್ಯಂತ ಹಿಂದುತ್ವ, ಸಂಸ್ಕೃತಿ, ಸಂಸ್ಕಾರ, ಸೇವಾ ಕಾರ್ಯದ ಮೂಲಕ ಜನಮಾನಸದಲ್ಲಿ ಅಚ್ಚವಾಗಿ ಮೂಡಿದೆ. ಚಿಕ್ಕ ಶಿಶುವಿನಿಂದ ಹಿಡಿದ ಅಬಾಲ ವೃದ್ಧರಲ್ಲಿ ಸಂಘವೆಂದರೆ ಪೂಜ್ಯಭಾವನೆ, ವಿಶಿಷ್ಟ ಗೌರವ. ಸಂಘದ ವಿರೋಧಿಗಳು ಸಹಿತ ಸಂಘದ ಕಾರ್ಯವನ್ನು ಮೆಚ್ಚಿದ್ದುಂಟು. ಸಂಘದ ಬಗ್ಗೆ ಹೇಳೋಕೆ ನಿಂತರೆ ವರ್ಷಗಳೇ ಸಾಲದು. ಪ್ರತಿದಿನ ಪ್ರತಿಕ್ಷಣ ಹೊಸದನ್ನು ಸಮಾಜಕ್ಕೆ ನೀಡುತ್ತಾ ಪ್ರೇರಣೆಗಾಗಿದೆ.
ಪ್ರತಿಯೊಬ್ಬ ಮನಷ್ಯನಿಗೂ ತನ್ನ ಶಾರೀರಿಕ, ಮಾನಸಿಕ ಅಥವಾ ಬೌದ್ದಿಕವಾಗಿ ಕೊರತೆಗಳಿವೆ. ಆ ಕೊರತೆಗಳೇ ದೊಡ್ಡ ಸಮಸ್ಯೆ ಎಂದು ತಿಳಿದುಕೊಂಡು ತಮ್ಮನ್ನೆ ತಾವು ಕೀಳುಗರೆಂದು ಬಿಂಬಿಸಿಕೊಂಡು ಯಾವುದರಲ್ಲಿಯೂ ಉತ್ಸಾಹ ತೊರುವುದಿಲ್ಲ. ಆ ಉತ್ಸಾಹದ ಕೊರತೆಯ ನಮ್ಮ ಮಾನಸಿಕ ಕುಬ್ಜತೆಗೆ ಕಾರಣ. ಸಂಘದ ಶಾಖೆಗಳಲ್ಲಿ ಎಲ್ಲ ಕೊರತೆಗಳೆ ದೇಶಭಕ್ತಿಯ ಅವಕಾಶಗಳಾಗುತ್ತವೆ. ಒಂದು ಶಾಖೆಯಲ್ಲಿ ನಡೆಯುತ್ತಿರುವ ಅಂಗವಿಕಲನಾಗಿರುವ ಸ್ವಯಂಸೇವಕನ ಬಗ್ಗೆ ತಿಳಿಯೋಣ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನಿಡಗುಂದಿ (ಹೊಸ ತಾಲೂಕು, ಸಂಘದ ದೃಷ್ಟಿಯಿಂದ ಹೋಬಳಿ ಕೇಂದ್ರ)ಯ ಸ್ವಯಂಸೇವಕನ ಹೆಸರು ಭಗವಂತ. ಹುಟ್ಟುತ್ತಾ ಅಂಗವಿಕಲ ಅಂದರೆ ಭಗವಂತನ ಬಲಗೈ ಬೆಳವಣಿಗೆ ಇಲ್ಲದಿದ್ದರೂ ಸಂಘದ ವಿಚಾರದಲ್ಲಿ ಆತನ ಬೆಳವಣೆಗೆ ಅದ್ಭುತ.
ಭಗವಂತ ಎಂಬ ಬಾಲಕನೂ ಸರಕಾರಿ ಕನ್ನಡ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದಾನೆ. ಶಾಲೆ ಮುಗಿದ ಮೇಲೆ ಛತ್ರಪತಿ ಸಾಯಂ (ಸಂಜೆ ಶಾಖೆ) ಶಾಖೆಗೆ ಬರುತ್ತಾನೆ. ಈ ಶಾಖೆ ಹೊಸ ಶಾಖೆ ಆಗಿದ್ದರೂ ಸಂಘ ಸಂಸ್ಕಾರದ ಕಲಿಕೆಯಲ್ಲಿ ಈ ಶಾಖೆಗೆ ಬರುವವರು ತುಂಬಾ ಉತ್ಸಾಹಿಗಳಾಗಿದ್ದಾರೆ. ಈ ಭಗವಂತನಿಗೆ ಶಾಲೆಯಲ್ಲಿ, ಊರಲ್ಲಿ ತನಗೆ ಕೈಯಿಲ್ಲ ಎನ್ನುವ ಕೊರತೆ ಕಾಡುತ್ತಿರುತ್ತದೆ ಆದರೆ ಶಾಖೆಯಲ್ಲಿ ಆ ತರಹದ ಫೀಲಿಂಗ್ ಬರೋದೇ ಇಲ್ಲ. ಸಂಘದ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಸಂಘದ ಹಿರಿಯರು ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸುವವನು ಈ ಭಗವಂತ.
ಸಂಘದ ಶಾಖೆಗೆ ಬರುತ್ತಾ ಬರುತ್ತಾ ಆತನಿಗೆ ತನಗೆ ಕೈಯಿಲ್ಲ ಎನ್ನುವ ವೇದನೆಯೇ ಹೋಗಿದೆ. ನಾವೆಲ್ಲರೂ ಕೈ ಸರಿಯಿದ್ದವರು ಹೇಗೆ ಕೆಲಸ ಮಾಡುತ್ತೇವೆಯೋ ಹಾಗೇನೆ ಕೆಲಸ ಮಾಡುತ್ತಿದ್ದಾನೆ. ಬಲಗೈ ಇಲ್ಲದಿದ್ರೂ ಅದರ ಕೆಲಸವನ್ನು ಭಗವಂತ ಅದೇ ಬಲಗೈಯಿಂದ ಮಾಡುತ್ತಿದ್ದಾನೆ. ಶಾಖೆಗೆ ಸಮಯಕ್ಕಿಂತ ಮುಂಚಿತವಾಗಿ ಬಂದು ಸಂಘಸ್ಥಾನ ಸ್ವಚ್ಛ ಮಾಡಿ, ಎರಡು ಕೈಯಿಂದ ಮಂಡಲ ಅಲಂಕಾರ ಮಾಡುತ್ತಾನೆ. ಶಾಖೆಯ ಚಟುವಟಿಕೆಗಳಲ್ಲಿ ಎಷ್ಟು ಉತ್ಸಾಹದಿಂದ ಇರುತ್ತಾನೆ ಎಂದರೆ ಉಳಿದವರೆಲ್ಲರಿಗೂ ಇವನ ಉತ್ಸಾಹ ಮೀರಿಸೋಕಾಗೊಲ್ಲ. ಒಂದೇ ಒಂದು ದಿನ ಶಾಖೆ ಬಿಡೊಲ್ಲ, ಎಲ್ಲರಿಗಿಂತ ಮುಂಚಿತವಾಗಿ ಬರುತ್ತಾನೆ. ಮನೆಯಲ್ಲಿ ಶಾಖೆಗೆ ಬರೋದಕ್ಕೆ ಎಳ್ಳಷ್ಟು ವಿರೋಧವಿಲ್ಲ. ತಂದೆ ತಾಯಿಯ ಸಂಸ್ಕಾರವೇ ಅವನನ್ನು ಶಾಖೆಗೆ ಬರುವಂತೆ ಮಾಡಿದೆ. ಸಂಘದ ಸಂಸ್ಕಾರವೇ ಅವನನ್ನು ತಾನೊಬ್ಬ ಅಂಗವಿಕಲ ಎನ್ನುವುದನ್ನು ಮರೆಸಿದೆ. ತಾನು ತನ್ನ ಮನೆಗೆ ಅಷ್ಟೇಯಲ್ಲ ಇಡೀ ಶಾಖೆಗೆ ಅಚ್ಚುಮೆಚ್ಚಿನ ಸ್ವಯಂಸೇವಕನಾಗಿದ್ದಾನೆ. ಈತನ ಸಂಘ ನಿಷ್ಠೆಗೆ ನಾವೆಲ್ಲರೂ ತಲೆ ಬಾಗಲೇಬೇಕು. ಸಂಘಕ್ಕೆ ಬಂದು ಸ್ವಾರ್ಥ ಬಯಸುವ ಕೆಲವರ ಮದ್ಯೆ ನಿಸ್ವಾರ್ಥತೆಯಿಂದ ಸಮಾಜದ ಕೆಲಸಕ್ಕೆ ಅಣಿಯಾಗುವ ಇಂತಹ ಸ್ವಯಂಸೇವಕರೆ ಸಂಘ ಕಾರ್ಯಕ್ಕೆ ಪ್ರೇರಣೆ.
ಅಕರ್ತವ್ಯಂ ನಕರ್ತವ್ಯಂ ಪ್ರಾಣೈಕಂಟಕ ತೈರಪಿ
ಕರ್ತವ್ಯ ಮೇವ ಕರ್ತವ್ಯಂ ಪ್ರಾಣೈಕಂಟಕ ತೈರಪಿ ಅಂದರೆ ಮಾಡಬಾರದ ಕೆಲಸವನ್ನು (ದೇಶದ್ರೂಹಿ) ಜೀವಹೋದರೂ ಮಾಡಬಾರದು ,ಮಾಡಬೇಕಾಗಿರುವ ಕೆಲಸವನ್ನು (ದೇಶಭಕ್ತಿ) ಜೀವ ಕೊಟ್ಟಾದರೂ ಮಾಡಬೇಕೆನ್ನುವ ಮನಸ್ಥಿತಿಯ ಈ ಬಾಲ ಸ್ವಯಂಸೇವಕ ಭಗವಂತನ ಕಣ್ಣಲ್ಲಿ ಮುಂದಿನ ಭವಿಷ್ಯ ಕಾಣುತ್ತೆ. ಎಷ್ಟೋ ಜನ ತಮ್ಮ ಕೊರತೆಗಳೆ ಸಮಸ್ಯೆಗಳು, ತಮ್ಮ ಹೀನತೆ ಅಂತ ಕುಗ್ಗುವ ಸಮಾಜದಲ್ಲಿ ಈ ತರಹ ಪ್ರೇರಣಾದಾಯಿ ಬಾಲಕರು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಿರೋದು ಮಾತ್ರ ಸಂಘದ ಶಾಖೆಯಿಂದ ಎನ್ನುವ ಹೆಮ್ಮೆ ನಮ್ಮದು.
ಸಂಘದಲ್ಲಿ ಶ್ರೀಮಂತ, ಬಡವ , ಮೇಲು, ಕೀಳು ಜಾತಿಯ ಬೇಧಭಾವ ಇಲ್ಲವೇ ಇಲ್ಲ. ಅಂಗವಿಕಲನಾಗಿದ್ದರೂ ಅಷ್ಟೈಶ್ವರ್ಯ ಒಡೆಯನಾಗಿದ್ದರೂ ಸಂಘದಲ್ಲಿ ಸಮಾನರು. ಸಂಘದಲ್ಲಿನ ಈ ತರಹ ಪಾಠವೇ ವ್ಯಕ್ತಿಯ ಕೊರತೆಗಳನ್ನು ನೀಗಿ ಇತರೆಲ್ಲರಿಗೂ ಪ್ರೇರಣೆಯಾಗೋಕೆ ಸಾಧ್ಯ. ಸಂಘದ ಸಂಸ್ಕಾರದ ಪರಿಣಾಮವೇ ಅವಿದ್ಯಾವಂತರೂ ಪ್ರಜ್ಞಾವಂತರಾಗುತ್ತಾರೆ. ಸಂಘವು ಸಮಾಜದ ಭಗವಂತನಾಗುತ್ತಿರೋದು ಗೋಚರಿಸುತ್ತಿದೆ ಅಂದರೆ ಅಷ್ಟು ಪೂಜ್ಯಭಾವನೆಯಿಂದ ಸಂಘವನ್ನು ನೋಡುತ್ತಿದ್ದಾರೆ. ಈ ಸಂಘವೆಂಬ ಭಗವಂತನಿಗೆ ಈ ಬಾಲ ಭಗವಂತನೇ ಪೂಜಿಸಿ, ಧ್ಯಾನಾಸಕ್ತನಾಗಿದ್ದಾನೆ ಈ ಬಾಲ ಭಗವಂತ. ಈ ತರಹದ ನಿಷ್ಠರೇ ಸಂಘದ ಸಂಸ್ಕಾರದಿಂದ ಭಗವಂತನ ಅವತಾರ ಅಂತ ಭಾಸವಾಗುತ್ತದೆ.
ಸಮಾಜದಲ್ಲಿ ಯಾರನ್ನೂ ಕನಿಷ್ಠವಾಗಿ ಕಾಣದೇ ಎಲ್ಲರೂ ಭಗವಂತನ ಸ್ವರೂಪಿಗಳೆ ಎನ್ನುವ ಭಾವನೆಯೇ ನಮ್ಮಗೆ ದೇಶ ಹಾಗೂ ಧರ್ಮದ ಕೆಲಸಕ್ಕೆ ಹಚ್ಚುತ್ತದೆ. ಆವಾಗ ಸಮಾಜದಲ್ಲಿ ಕನಿಷ್ಠರೆನ್ನುವ ವ್ಯಕ್ತಿಗಳು ಸಿಗೋದು ಅಸಾಧ್ಯ. ಗರಿಷ್ಠ ಕನಿಷ್ಠ ಎನ್ನುವ ವೇದನೆ ಕಳೆದು ಹೋದರೆ ಭಾರತದ ಭವಿಷ್ಯ ಉಜ್ವಲವಾಗುವುದು ಅಸಾಧ್ಯವೇ ಅಲ್ಲ. ಎಲ್ಲಾ ಬೇಧವನ್ನು ಮರೆತು ಸಂಘದಂಗಳದಲ್ಲಿ ಸೇರಿ ಭಾರತವನ್ನು ಅತ್ಯುನ್ನತ ಸ್ಥಿತಿಗೆ ಒಯ್ಯೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.