ನವದೆಹಲಿ: ಕೆನಡಾದಲ್ಲಿ ಉನ್ನತ ವ್ಯಾಸಂಗ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಕೆನಡಾ ಸರ್ಕಾರ ಶುಭ ಸುದ್ದಿಯನ್ನು ನೀಡಿದೆ. ಕೆನಡಾದ ವಲಸೆ ಸಂಸ್ಥೆಯಿಂದ ಅಧ್ಯಯನ ಪರವಾನಗಿ ಪಡೆದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಸತತ ಎರಡನೇ ವರ್ಷವೂ ಒಂದು ಲಕ್ಷವನ್ನು ಮೀರಿದೆ.
ಒಂದು ದೇಶದ ವಿದ್ಯಾರ್ಥಿಗಳು ಬೇರೆ ದೇಶದಲ್ಲಿ ವ್ಯಾಸಂಗ ಮಾಡಬೇಕಾದರೆ ಆ ದೇಶದ ಸರ್ಕಾರ ಕೆಲವೊಂದು ನೀತಿ ನಿಯಮಗಳನ್ನು ರೂಪಿಸಿಕೊಂಡಿರುತ್ತದೆ. ಅವುಗಳಲ್ಲಿ ವಲಸೆ ವಿದ್ಯಾರ್ಥಿಗಳಿಗೆ ತಮ್ಮ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕೆನ್ನುವುದು ಕೂಡ ಒಂದು.
ಅದರಂತೆ, 2019 ರಲ್ಲಿ ಕೆನಡಾವು 4 ಲಕ್ಷಕ್ಕಿಂತ ಹೆಚ್ಚಿನ ಅಧ್ಯಯನ ಪರವಾನಗಿಗಳನ್ನು ಅಂಗೀಕರಿಸಿತ್ತು, ಅದರಲ್ಲಿ 1.39 ಲಕ್ಷ ಅಥವಾ 34.5% ಭಾರತೀಯ ವಿದ್ಯಾರ್ಥಿಗಳಿಗೆ ಪರವಾನಗಿ ಸಿಕ್ಕಿದೆ, ಚೀನಿಯರು 21% ಹೊಸ ಅಧ್ಯಯನ ಪರವಾನಗಿಗಳನ್ನು ಪಡೆದುಕೊಂಡರು. 2018ರಲ್ಲಿ, ಕೆನಡಾ ಒಟ್ಟು 3.55 ಲಕ್ಷ ಅಧ್ಯಯನ ಪರವಾನಗಿಗಳನ್ನು ನೀಡಿತ್ತು. 2019ರ ಹೊಸದಾಗಿ ಬಿಡುಗಡೆಯಾದ ಅಂಕಿ ಅಂಶಗಳು ಹಿಂದಿನ ವರ್ಷಕ್ಕಿಂತ ಒಟ್ಟಾರೆ 13.8% ಹೆಚ್ಚಳವನ್ನು ಸೂಚಿಸುತ್ತವೆ.
ಕಳೆದ ಮೂರು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ, ಅಧ್ಯಯನ ಪರವಾನಗಿ ಪಡೆದ ಚೀನಾದ ವಿದ್ಯಾರ್ಥಿಗಳ ಸಂಖ್ಯೆಯು ಅಲ್ಪ ಪ್ರಮಾಣದ ಕುಸಿತವನ್ನು ತೋರಿಸಿದೆ, ಆದರೆ ಭಾರತದ ವಿದ್ಯಾರ್ಥಿಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ.
2019 ರಲ್ಲಿ ಅಧ್ಯಯನ ಪರವಾನಗಿ ನೀಡಬೇಕಾದ ಚೀನೀ ವಿದ್ಯಾರ್ಥಿಗಳ ಸಂಖ್ಯೆ 84,710, ಇದು ಅದರ ಹಿಂದಿನ ವರ್ಷದ 85,165 ಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ. ಇದಕ್ಕೆ ವ್ಯತಿರಿಕ್ತವಾಗಿ, ಅಧ್ಯಯನ ಪರವಾನಗಿ ಪಡೆದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 30.3% ರಷ್ಟು ಅಂದರೆ 1.39 ಲಕ್ಷಕ್ಕೆ ಏರಿದೆ, ಹಿಂದಿನ ವರ್ಷದ ಅಂಕಿ 1.07 ಲಕ್ಷಕ್ಕಿಂತಲೂ ಇದು ಹೆಚ್ಚಾಗಿದೆ. 2017 ರಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಕೇವಲ 82,990 ಪರವಾನಗಿಗಳನ್ನು ನೀಡಲಾಗಿತ್ತು, ಇದು ಎರಡು ವರ್ಷಗಳಲ್ಲಿ 68.3% ಹೆಚ್ಚಳವನ್ನು ಪ್ರತಿಬಿಂಬಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.