ನವದೆಹಲಿ: ಭಾರತವನ್ನು ಒಳಗೊಂಡಂತೆ ಜಾಗತಿಕವಾಗಿ ತನ್ನ ‘ಸ್ಟೇಷನ್’ ಕಾರ್ಯಕ್ರಮವನ್ನು 2020ರ ಅಂತ್ಯದ ವೇಳೆಗೆ ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಗೂಗಲ್ ಘೋಷಿಸಿದೆ. ಗೂಗಲ್ನ ಈ ನಿರ್ಧಾರದ ಹೊರತಾಗಿಯೂ, 5,600ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಮುಂದುವರಿಯಲಿದೆ ಎಂಬುದಾಗಿ ರೈಲ್ಟೆಲ್ ಮಂಗಳವಾರ ಘೋಷಣೆ ಮಾಡಿದೆ.
ಯುಎಸ್ ಮೂಲದ ಟೆಕ್ ದೈತ್ಯ ಗೂಗಲ್ 2015 ರಿಂದ ಭಾರತದ 400 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಿಗೆ ಉಚಿತ ವೈ-ಫೈ ಸೇವೆಗಳನ್ನು ನೀಡುತ್ತಿದೆ ಎಂದು ಇಲ್ಲಿ ಗಮನಾರ್ಹ.
ರೈಲ್ಟೆಲ್ ಮತ್ತು ಗೂಗಲ್ ನಡುವಿನ ಒಪ್ಪಂದದ ಪ್ರಕಾರ, ಎ 1, ಎ ಮತ್ತು ಸಿ ವರ್ಗದ 415 ನಿಲ್ದಾಣಗಳಿಗೆ ಮಾತ್ರ ಗೂಗಲ್ ರೈಲ್ಟೆಲ್ನ ತಂತ್ರಜ್ಞಾನ ಪಾಲುದಾರನಾಗಿರುತ್ತದೆ. “ಈ ಸಹಭಾಗಿತ್ವದಲ್ಲಿ ಗೂಗಲ್ RAN ಮತ್ತು ತಂತ್ರಜ್ಞಾನದ ಬೆಂಬಲವನ್ನು ನೀಡಿದೆ ಮತ್ತು ರೈಲ್ಟೆಲ್ ಭೌತಿಕ ಮೂಲಸೌಕರ್ಯ ಮತ್ತು ಇಂಟರ್ನೆಟ್ ಬ್ಯಾಂಡ್ವಿಡ್ತ್ (ಐಎಸ್ಪಿ) ಅನ್ನು ಒದಗಿಸಿದೆ. ಆದರೆ ಈ 415 ನಿಲ್ದಾಣಗಳನ್ನು ಹೊರತುಪಡಿಸಿ, ನಾವು 5190 ಬಿ, ಸಿ, ಡಿ ನಿಲ್ದಾಣಗಳಲ್ಲಿ ಉಚಿತ ವೈ-ಫೈ ಅನ್ನು ಒದಗಿಸಿದ್ದೇವೆ ಎಂದು” ರೈಲ್ಟೆಲ್ ಹೇಳಿಕೆಯಲ್ಲಿ ತಿಳಿಸಿದೆ.
“ನಾವು ಪ್ರಯಾಣದ ಉದ್ದಕ್ಕೂ ಹಲವಾರು ಪಾಲುದಾರರನ್ನು ಹೊಂದಿದ್ದೇವೆ ಮತ್ತು ಪ್ರಸ್ತುತ ರೈಲ್ಟೆಲ್ ದೇಶಾದ್ಯಂತ 5600 ನಿಲ್ದಾಣಗಳಲ್ಲಿ ಉಚಿತ ವೈಫೈ ಒದಗಿಸುತ್ತಿದೆ. 415 ನಿಲ್ದಾಣಗಳಲ್ಲಿ ಮಾತ್ರ ವೈಫೈ ಸ್ಥಾಪಿಸಲು ಮತ್ತು ಸಹಾಯ ಮಾಡಲು ನಾವು ಗೂಗಲ್ನೊಂದಿಗೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದೇವೆ. ಶೀಘ್ರದಲ್ಲೇ ಇದು ಮುಕ್ತಾಯಗೊಳ್ಳಲಿದೆ” ಎಂದಿದೆ.
ಗೂಗಲ್ನ ‘ಸ್ಟೇಷನ್’ ಕಾರ್ಯಕ್ರಮದಡಿ ಉಚಿತ ವೈಫೈ ಪಡೆಯುತ್ತಿರುವ 415 ನಿಲ್ದಾಣಗಳು ಸೇರಿದಂತೆ ಭಾರತದಾದ್ಯಂತ 5,600 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ಒದಗಿಸುವುದನ್ನು ಮುಂದುವರಿಸುವುದಾಗಿ ರೈಲ್ಟೆಲ್ ದೃಢಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.