ಲಂಡನ್: ಟಾಟಾ ಗ್ರೂಪ್ ಮುಖ್ಯಸ್ಥ ರತನ್ ಟಾಟಾ ಅವರಿಗೆ ನಾವೀನ್ಯತೆ ಮತ್ತು ಸಮಾಜಸೇವೆಗೆ ನೀಡಿದ ಕೊಡುಗೆಗಾಗಿ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ.
ವಿಶ್ವವಿದ್ಯಾಲಯದ ಅಧ್ಯಕ್ಷ ಮತ್ತು ಉಪಕುಲಪತಿ ಪ್ರೊಫೆಸರ್ ಡೇಮ್ ನ್ಯಾನ್ಸಿ ರೋಥ್ವೆಲ್ ಅವರ ಇತ್ತೀಚಿನ ಭಾರತ ಪ್ರವಾಸದ ಸಂದರ್ಭದಲ್ಲಿ ಮುಂಬೈನಲ್ಲಿರುವ 82 ವರ್ಷದ ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಯುಕೆ ವಿಶ್ವವಿದ್ಯಾಲಯ ತಿಳಿಸಿದೆ.
“ರತನ್ ಒರ್ವ ಸ್ಪೂರ್ತಿದಾಯಕ ವ್ಯಕ್ತಿ. ಅವರಿಗೆ, ಸಮಾಜ ಸೇವೆ ಮತ್ತು ನಾವೀನ್ಯತೆ ಒಂದೇ ನಾಣ್ಯದ ಎರಡು ಮುಖಗಳಾಗಿವೆ, ಈ ಎರಡೂ ಕೂಡ ಜೀವನವನ್ನು ಸುಧಾರಣೆಗೊಳಿಸುವತ್ತ ಸಾಗುತ್ತವೆ, ಇದು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ನಾವು ಹೊಂದಿರುವ ನೀತಿಯೂ ಆಗಿದೆ” ಎಂದು ರೋಥ್ವೆಲ್ ಹೇಳಿದರು.
“ಅವರು ದೊಡ್ಡ ಉದ್ಯಮಗಳಿಗೆ, ಸಣ್ಣ ಉದ್ಯಮಕ್ಕೆ, ಸಂಶೋಧಕರು ಮತ್ತು ಆವಿಷ್ಕಾರಿಗಳಿ, ಕೊಡುಗೈ ದಾನಿಗಳಿಗೆ ಎಲ್ಲರಿಗೂ ಉದಾಹರಣೆಯಾಗಿದ್ದಾರೆ. ಜಾಗತಿಕ ಪ್ರಜೆಗಳಾಗುವತ್ತ ಬೆಳೆಯುತ್ತಿರುವ ನಮ್ಮ ವಿದ್ಯಾರ್ಥಿಗಳಿಗೂ ಅವರು ಉದಾಹರಣೆಯಾಗುತ್ತಾರೆ ಎಂದು ನಾವು ನಂಬುತ್ತೇವೆ” ಎಂದು ಅವರು ಹೇಳಿದ್ದಾರೆ.
ಪೌಷ್ಠಿಕಾಂಶ, ನೈರ್ಮಲ್ಯ, ಕ್ಯಾನ್ಸರ್ ಚಿಕಿತ್ಸೆ, ಗ್ರಾಮೀಣ ಬಡತನ ನಿವಾರಣೆ ಮತ್ತು ಸಾಮಾಜಿಕ ಉದ್ಯಮಶೀಲತೆ ಮುಂತಾದ ಕ್ಷೇತ್ರಕ್ಕೆ ರತನ್ ಟಾಟಾ ಅವರು ಉದಾರಿಯಾಗಿ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.