ನವದೆಹಲಿ: 2022ರ ವೇಳೆಗೆ ಭಾರತವು ಎರಡರಿಂದ ಐದು ಥಿಯೇಟರ್ ಕಮಾಂಡ್ಗಳನ್ನು ಹೊಂದಲಿದೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹೇಳಿದ್ದಾರೆ.
ಥಿಯೇಟರ್ ಕಮಾಂಡ್ ಎಂದರೆ ಮೂರು ಸಶಸ್ತ್ರ ಪಡೆಗಳ ಜಂಟಿ ಕಮಾಂಡ್ ಆಗಿದೆ ಅಥವಾ ಇದು ಸೈನ್ಯ, ನೌಕಾಪಡೆ ಮತ್ತು ವಾಯುಸೇನೆಯ ಸಂಯೋಜಿತ ಪಡೆ. ತುರ್ತು ಸಮಯದಲ್ಲಿ ಅಂತರ್-ಪಡೆಗಳ ಜಂಟಿ ಕಾರ್ಯಾಚರಣೆಯನ್ನು ನಡೆಸಲು ಇದನ್ನು ಮುಖ್ಯವಾಗಿ ರಚನೆ ಮಾಡಲಾಗುತ್ತದೆ. ಜಂಟಿ ಕಾರ್ಯಾಚರಣೆ ಸಮಯದಲ್ಲಿ ಪ್ರತಿಯೊಂದು ಪಡೆಯು ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಾಗಿರುವುದು ಅನಿವಾರ್ಯ
ದೇಶದ ದಕ್ಷಿಣ ಭಾಗದಲ್ಲಿ, ಅಸ್ತಿತ್ವದಲ್ಲಿರುವ ನೌಕಾಪಡೆ ಪೂರ್ವ ಮತ್ತು ಪೂರ್ವ ನೌಕಾ ಕಮಾಂಡ್ ಕೇಂದ್ರಗಳನ್ನು ಸಂಯೋಜಿಸುವ ಮೂಲಕ ಭಾರತವು ಪೆನಿನ್ಸುಲಾ ಕಮಾಂಡ್ ಅನ್ನು ಹೊಂದಲಿದೆ, ಜಮ್ಮು ಮತ್ತು ಕಾಶ್ಮೀರವು ಒಂದೇ ಬಿ ಕಮಾಂಡ್ ಥಿಯೇಟರ್ ಅಡಿಯಲ್ಲಿ ಬರುತ್ತದೆ ಎಂದುರಾವತ್ ಹೇಳಿದ್ದಾರೆ.
ಕಡಲ ಸುರಕ್ಷತೆಯೊಂದಿಗೆ ವ್ಯವಹರಿಸುವ ನೌಕಾಪಡೆಯ ಅಡಿಯ ಪೆನಿನ್ಸುಲಾ ಕಮಾಂಡ್ ಶೀಘ್ರದಲ್ಲೇ ರಚನೆಯಾಗಲಿದೆ, ಮಾರ್ಚ್ 31 ರೊಳಗೆ ಇದರ ಅಧ್ಯಯನಕ್ಕೆ ನಿರ್ದೇಶನ ಹೊರಬೀಳುವ ನಿರೀಕ್ಷೆ ಇದೆ. ಇದು ಅರೇಬಿಯನ್ ಸಮುದ್ರದ ಸರ್ ಕ್ರೀಕ್ ನಿಂದ ಬಂಗಾಳಕೊಲ್ಲಿಯ ಸುಂದರ್ಬನ್ಸ್ ವರೆಗೆ ಹರಡಿರಲಿದೆ. ಅಧ್ಯಯನವನ್ನು ಮೂರರಿಂದ ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಬೇಕು ಮತ್ತು ಮುಂದಿನ ವರ್ಷದ ಅಂತ್ಯದ ವೇಳೆಗೆ ಒಂದು ನೌಕಾ ಕಮಾಂಡರ್ ಅಡಿಯಲ್ಲಿ ಕಮಾಂಡ್ ಕಾರ್ಯನಿರ್ವಹಿಸಲು ಪ್ರಾರಂಭಿಸಬೇಕು ಎಂದು ಜನರಲ್ ರಾವತ್ ಹೇಳಿದ್ದಾರೆ.
ವರ್ಷದ ಅಂತ್ಯದ ವೇಳೆಗೆ ಥಿಯಟರೈಝೇಶನ್ ಅಥವಾ ಜಂಟಿ ಕಮಾಂಡ್ ಅಧ್ಯಯನ ನಡೆಯಲಿದೆ. 2022 ರ ಹೊತ್ತಿಗೆ ಥಿಯೇಟರ್ ಹೇಳಿದ್ದಾರೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯನ್ನು ಒಳಗೊಂಡ ಜಂಟಿ ಕಮಾಂಡ್ಗಳನ್ನು ಸ್ಥಾಪಿಸುವುದು ರಕ್ಷಣಾ ಸಿಬ್ಬಂದಿಗೆ ಕಡ್ಡಾಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.