ನವದೆಹಲಿ: ಮಹಿಳಾ ಅಧಿಕಾರಿಗಳು ಸೇನೆಯಲ್ಲಿ ಕಮಾಂಡ್ ಹುದ್ದೆಗೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂಕೋರ್ಟ್ ಸೋಮವಾರ ಆದೇಶಿಸಿದೆ.
ಮಹಿಳಾ ಸೇನಾಧಿಕಾರಿಗಳಿಗೆ ಖಾಯಂ ಆಯೋಗವನ್ನು ನೀಡುವ 2019 ರ ಕೇಂದ್ರ ಸರ್ಕಾರದ ನೀತಿ ನಿರ್ಧಾರವು ಎಲ್ಲಾ ಮಹಿಳಾ ಅಧಿಕಾರಿಗಳಿಗೆ ಅನ್ವಯಿಸುತ್ತದೆ ಎಂದು ಅದು ಹೇಳಿದೆ.
ಇದನ್ನು ಆಯ್ಕೆ ಮಾಡುವ ಯಾವುದೇ ಮಹಿಳಾ ಅಧಿಕಾರಿಗೆ ಮತ್ತು 14 ವರ್ಷಗಳ ಸೇವೆಯ ಅವಧಿ ಮತ್ತು ಅದಕ್ಕೂ ಮೀರಿದ ಸೇವಾವಧಿ ಮಾಡಿದ ಎಲ್ಲರಿಗೂ ಅನ್ವಯಿಸುತ್ತದೆ ಎಂದಿದೆ.
“ಯಾವುದೇ ಪಾತ್ರವನ್ನು ವಹಿಸಲು ಯೋಧರಿಗೆ ದೈಹಿಕ ಸಾವರ್ಥ್ಯ ಇರಬೇಕು. ಸೇನೆಯಲ್ಲಿ ಮಹಿಳೆಯರನ್ನು ಹೊಂದುವುದು ಕ್ರಾಂತಿಕಾರಕ ಪ್ರಕ್ರಿಯೆ” ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶ ಡಿವೈ ಚಂದ್ರಚೂಡ ಹೇಳಿದ್ದಾರೆ.
ಶಾರೀರಿಕ ಲಕ್ಷಣಗಳನ್ನು ಉಲ್ಲೇಖಿಸಿ ಮಹಿಳೆಯರಿಗೆ ಖಾಯಂ ಆಯೋಗ ಮತ್ತು ಕಮಾಂಡ್ ನೇಮಕಾತಿಯನ್ನು ವಿರೋಧಿಸುವ ಕೇಂದ್ರದ ಲಿಖಿತ ಟಿಪ್ಪಣಿಯು ಲಿಂಗ ನಿರೂಪಣೆಗಳ ಮನಸ್ಥಿತಿಯನ್ನು ಶಾಶ್ವತಗೊಳಿಸುತ್ತದೆ ಎಂದು ಹೇಳಿದ್ದಾರೆ.
“ಕಮಾಂಡ್ ನಿಯೋಜನೆಗಳಿಂದ ಮಹಿಳೆಯರನ್ನು ಸಂಪೂರ್ಣವಾಗಿ ಹೊರಗಿಡುವುದು ಆರ್ಟಿಕಲ್ 14ಕ್ಕೆ ವಿರುದ್ಧವಾದುದು ಮತ್ತು ನ್ಯಾಯಸಮ್ಮತವಲ್ಲದ್ದು. ಮಹಿಳೆಯರಿಗೆ ಸಿಬ್ಬಂದಿ ನೇಮಕಾತಿಗಳನ್ನು ಮಾತ್ರ ನೀಡಬಹುದು ಎಂಬ ಕೇಂದ್ರದ ವಾದವನ್ನು ಜಾರಿಗೊಳಿಸಲಾಗುವುದಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.