ನವದೆಹಲಿ: ಭಾರತೀಯ ನೌಕಾಪಡೆಯು ಏಪ್ರಿಲ್ನಿಂದ 1.1 ಬಿಲಿಯನ್ ಡಾಲರ್ ಮೌಲ್ಯದ ನಾಲ್ಕು P8I ವಿಮಾನಗಳನ್ನು ತನ್ನ ಪಡೆಗೆ ಸೇರ್ಪಡೆಗೊಳಿಲು ಸಜ್ಜಾಗುತ್ತಿದೆ. ಇದು ನೌಕಾಪಡೆಯ ಶಕ್ತಿಯನ್ನು ವೃದ್ಧಿಸಲಿದೆ.
P8I ವಿಮಾನಗಳಿಗಾಗಿ ಆರ್ಡರ್ ಅನ್ನು ಭಾರತೀಯ ನೌಕಾಪಡೆಯು 2016 ರಲ್ಲಿ ನೀಡಿದ್ದು, ಬಾಲಕೋಟ್ ವೈಮಾನಿಕ ದಾಳಿ ನಡೆದು ಸುಮಾರು ಒಂದು ವರ್ಷದ ನಂತರ ಈ ಸೇರ್ಪಡೆ ಕಾರ್ಯ ಪ್ರಾರಂಭವಾಗುತ್ತಿದೆ.
ಕಳೆದ ವರ್ಷ ನಡೆದ ಪುಲ್ವಾಮಾ ದಾಳಿಯ ಬಳಿಕ ಪಾಕಿಸ್ಥಾನದ ಮಿಲಿಟರಿ ಬೆಳವಣಿಗೆಗಳ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸುವಲ್ಲಿ ಪಿ 8 ಐ ಕಣ್ಗಾವಲು ಮತ್ತು ದೀರ್ಘ-ಶ್ರೇಣಿಯ ಕಡಲ ವಿಚಕ್ಷಣ ವಿಮಾನಗಳು ಪ್ರಮುಖ ಪಾತ್ರ ವಹಿಸಿದ್ದರಿಂದ ಈ ಬೆಳವಣಿಗೆಯು ಮಹತ್ವವನ್ನು ಪಡೆದುಕೊಂಡಿದೆ.
ಈ ವಿಮಾನವನ್ನು ಯುನೈಟೆಡ್ ಸ್ಟೇಟ್ಸ್ ಮೂಲದ ರಕ್ಷಣಾ ಪ್ರಮುಖ ಬೋಯಿಂಗ್ ತಯಾರಿಸಿದೆ. ಇದನ್ನು ಮೊದಲು ಯುನೈಟೆಡ್ ಸ್ಟೇಟ್ಸ್ ನೇವಿಗಾಗಿ ಅಭಿವೃದ್ಧಿಪಡಿಸಲಾಗಿತ್ತು.
ಹೆಚ್ಚಿನ ಸಂಖ್ಯೆಯ ಪಿ 8 ಐ ವಿಮಾನಗಳ ಸೇರ್ಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಣ್ಗಾವಲು ಮತ್ತು ಹಡಗು ವಿರೋಧಿ ಕಾರ್ಯಾಚರಣೆ ಮತ್ತು ಜಲಾಂತರ್ಗಾಮಿ ಸನ್ನದ್ಧತೆಯನ್ನು ನಿರ್ವಹಿಸುವ ನೌಕಾಪಡೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.