
ನವದೆಹಲಿ: ಗಾಂಧಿ ಹತ್ಯೆ ಆಗಿ ಅನೇಕ ದಶಕಗಳೇ ಉರುಳಿವೆ. ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ನೇಣುಗಂಬಕ್ಕೇರಿಸಿಯೂ ಆಗಿದೆ. ಆದರೆ ನಾವು ಕೇಳಿದ್ದು ಎಲ್ಲವೂ ಸತ್ಯವಲ್ಲ ( ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ) ಎನ್ನುವ ಮಾತಿದೆ. ಅದರಂತೆ ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಅವರು ಗಾಂಧಿ ಹತ್ಯೆ ಬಗ್ಗೆ ಹಲವಾರು ಪ್ರಶ್ನೆಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮೂಲಕ ಎತ್ತಿದ್ದಾರೆ.
”ಗಾಂಧಿ ಅವರ ಮೃತ ದೇಹವನ್ನು ಯಾಕೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿಲ್ಲ?, ಹತ್ಯೆಯ ಘಟನೆಯನ್ನು ನೇರವಾಗಿ ಕಂಡಿರುವ ಅಭ ಹಾಗೂ ಮನು ಅವರನ್ನು ನ್ಯಾಯಾಲಯದಲ್ಲಿ ಯಾಕೆ ವಿಚಾರಣೆಗೆ ಒಳಪಡಿಸಲಿಲ್ಲ?, ನಾಥುರಾಮ್ ಗೋಡ್ಸೆ ಗುಂಡು ಹಾರಿಸಿದ ರಿವಾಲ್ವರ್ ಪತ್ತೆ ಹಚ್ಚಲು ಯಾಕೆ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ?” ಎಂದು ಸುಬ್ರಹ್ಮಣ್ಯನ್ ಸ್ವಾಮಿ ಪ್ರಶ್ನಿಸಿದ್ದಾರೆ.
ಅಲ್ಲದೇ ಹಲವು ಪ್ರಶ್ನೆಗಳಿಗೆ ಉತ್ತರ ದೊರಕದಿರುವಾಗ ಈ ಪ್ರಕರಣವನ್ನು ಮತ್ತೊಮ್ಮೆ ತೆರೆಯುವುದು ಅತ್ಯಂತ ಅವಶ್ಯಕ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಹಿಂದೆಯೂ ಅನೇಕರು ಗಾಂಧಿ ಹತ್ಯೆಯ ಕುರಿತು ಅನೇಕ ಪ್ರಶ್ನೆಗಳನ್ನು ಎತ್ತಿದ್ದರು.
ಅಸೋಸಿಯೇಟೆಡ್ ಪ್ರೆಸ್ ಇಂಟರ್ನ್ಯಾಷನಲ್ ಜರ್ನಲ್ ನ ವರದಿಗಾರನ ಹೇಳಿಕೆಯನ್ನು ಉಲ್ಲೇಖಿಸಿರುವ ಸ್ವಾಮಿ ಅವರು, ”ಹತ್ಯೆ ನಡೆದಂದು 5.05 ಕ್ಕೆ 4 ಗುಂಡಿನ ಶಬ್ದಗಳನ್ನು ಕೇಳಿದ್ದೇನೆ ಎಂದು ಆತ ಹೇಳಿದ್ದಾನೆ. ಆದರೆ, ಗೋಡ್ಸೆ ತಾನು ಎರಡು ಬಾರಿ ಮಾತ್ರ ಗುಂಡು ಹಾರಿಸಿದ್ದೇನೆ ಎಂದು ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ವರದಿಗಾರ ಬಿರ್ಲಾ ಹೌಸ್ನಲ್ಲಿ 5.40 ಕ್ಕೆ ಗಾಂಧಿ ಹತ್ಯೆಯಾದರು ಎಂದು ಹೇಳಿದ್ದಾನೆ. ಅಂದರೆ, ಅವರ ಹೇಳಿಕೆಯ ಪ್ರಕಾರ ಗುಂಡಿನ ದಾಳಿ ನಡೆದ ನಂತರವೂ ಗಾಂಧೀಜಿ 35 ನಿಮಿಷಗಳ ಕಾಲ ಜೀವಂತವಾಗಿದ್ದರು ಎಂದಲ್ಲವೇ?” ಎಂದು ಸುಬ್ರಮಣಿಯನ್ ಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಸ್ವಾಮಿ ಅವರ ಈ ಟ್ವೀಟ್ ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಪರ,ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಗಾಂಧೀಜಿ ಹತ್ಯೆಯ ಬಗ್ಗೆ ಹಲವಾರು ಮಂದಿ ಅನುಮಾಣಗಳನ್ನು ವ್ಯಕ್ತಪಡಿಸಿದ್ದರು, ಸುಪ್ರೀಂ ಮೆಟ್ಟಿಲನ್ನೂ ಏರಿದ್ದರು. ಆದರೆ ಯಾವುದೇ ಪ್ರಯೋಜನಗಳು ಆಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


