ನವದೆಹಲಿ: ಭಾರತೀಯ ವಾಯುಪಡೆ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ದೇಶೀಯ ಮಿಲಿಟರಿ ವಾಯುಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದುವರೆಗಿನ ಅತಿದೊಡ್ಡ ಒಪ್ಪಂದಕ್ಕೆ ಸಹಿ ಹಾಕಿದೆ. 83 ಏಕ-ಎಂಜಿನ್ ತೇಜಸ್ ಮಾರ್ಕ್ -1 ಎ ಯುದ್ಧ ವಿಮಾನಗಳನ್ನು ಖರೀದಿಸಲು ಈ ಒಪ್ಪಂದ ಏರ್ಪಟ್ಟಿದೆ.
ಬಹು ನಿರೀಕ್ಷಿತ ಒಪ್ಪಂದಕ್ಕೆ ಸಹಿ ಹಾಕಿರುವುದು ಮೇಕ್ ಇನ್ ಇಂಡಿಯಾ ಕಾರ್ಯಕ್ರಮ ಮತ್ತು ದೇಶೀಯ ರಕ್ಷಣಾ ಉತ್ಪಾದನೆಗಾಗಿನ ಸರ್ಕಾರದ ಪ್ರಯತ್ನಕ್ಕೆ ದೊಡ್ಡ ಉತ್ತೇಜನ ನೀಡುವುದಲ್ಲದೆ, ವಾಯುಸೇನೆ ಕೂಡ ತನ್ನ ತನ್ನ ಬತ್ತಳಿಕೆಗೆ ಹೊಸ ಫೈಟರ್ ಜೆಟ್ಗಳನ್ನು ಬೃಹತ್ ಪ್ರಮಾಣದಲ್ಲಿ ಸೇರಿಸಿಕೊಳ್ಳುತ್ತದೆ, ಇದರಿಂದ ದೊಡ್ಡ ಮಟ್ಟದ ಪ್ರಯೋಜನ ಸಿಗಲಿದೆ.
ಫ್ರೆಂಚ್ ರಕ್ಷಣಾ ಪ್ರಮುಖ ಡಸಾಲ್ಟ್ ಏವಿಯೇಷನ್ ನಿರ್ಮಿಸಿದ 36 ರಫೆಲ್ ಫೈಟರ್ ಜೆಟ್ಗಳ ಪ್ರವೇಶದಿಂದ ಮತ್ತು 83 ಏಕ-ಎಂಜಿನ್ ತೇಜಸ್ ಮಾರ್ಕ್ -1 ಎ ಯುದ್ಧ ವಿಮಾನಗಳ ಖರೀದಿಯಿಂದ ವಾಯುಸೇನೆಯ ಬಲ ದುಪ್ಪಟ್ಟು ಆಗಲಿದೆ.
ವಾಯುಸೇನೆ ಮತ್ತು ಎಚ್ಎಎಲ್ ನಡುವಿನ ದೀರ್ಘಕಾಲದ ಮಾತುಕತೆಗಳ ನಂತರ, ಒಪ್ಪಂದದ ಗಾತ್ರವನ್ನು ಹಿಂದಿನ 56,500 ಕೋಟಿಯಿಂದ 39,000 ಕೋಟಿ ರೂ.ಗೆ ಇಳಿಸಲಾಗಿದೆ. ಒಟ್ಟಾರೆ ಬೆಲೆಯಲ್ಲಿನ ಕಡಿತದಿಂದ ವಾಯುಸೇನೆಯು 17,000 ಕೋಟಿ ರೂ.ಗಳನ್ನು ಉಳಿತಾಯ ಮಾಡಿದ್ದು, ಇದನ್ನು ಇತರ ಬೆಳವಣಿಗೆಗಳಿಗೆ ಬಳಸಲು ಸಾಧ್ಯವಾಗಲಿದೆ.
ಈ ಒಪ್ಪಂದಕ್ಕೆ ಎಚ್ಎಎಲ್ ಮತ್ತುವಾಯುಸೇನೆ ಈಗಾಗಲೇ ಸಹಿ ಹಾಕಿದ್ದು, ಇದು ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭದ್ರತಾ ಸಂಪುಟ ಸಮಿತಿಯಿಂದ (ಸಿಸಿಎಸ್) ಅಂತಿಮ ಅನುಮೋದನೆಗಾಗಿ ಕಾಯುತ್ತಿದೆ. ಮಾರ್ಚ್ 31 ರಂದು ಕೊನೆಗೊಳ್ಳುವ ಈ ಹಣಕಾಸು ವರ್ಷದಲ್ಲಿ ಸಿಸಿಎಸ್ ತನ್ನ ಅಂತಿಮ ಅನುಮೋದನೆಯನ್ನು ನೀಡುವ ನಿರೀಕ್ಷೆಯಿದೆ.
ಅಲ್ಲದೇ, ಸಿಸಿಎಸ್ ಅನುಮೋದನೆಯ ನಂತರ ಮೂರು ವರ್ಷಗಳಲ್ಲಿ ಫೈಟರ್ ಜೆಟ್ಗಳ ವಿತರಣೆಯನ್ನು ಪ್ರಾರಂಭಿಸುವುದಾಗಿ ಎಚ್ಎಎಲ್ ಭರವಸೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.