ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ಶಹೀನ್ ಭಾಗ್ ಪ್ರತಿಭಟನಾಕಾರರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಒಪ್ಪಿಕೊಂಡಿದ್ದಾರೆ. ‘ಪೀಪಲ್ ಆಫ್ ಶಹೀನ್ ಭಾಗ್’ ಎಂಬ ಹೆಸರಿನಲ್ಲಿ ಪ್ರತಿಭಟನಾಕಾರರು ಗೃಹ ಸಚಿವರನ್ನು ಭೇಟಿಯಾಗಲಿದ್ದಾರೆ.
ಮೂಲಗಳ ಪ್ರಕಾರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಗೃಹ ಸಚಿವರ ನಿವಾಸದಲ್ಲಿ ಮಾತುಕತೆ ನಡೆಯಲಿದೆ.
ಗುರುವಾರ ಅಮಿತ್ ಶಾ ಅವರು ಪ್ರತಿಭಟನಾಕಾರರೊಂದಿಗೆ ಚರ್ಚೆ ನಡೆಸಲು ಸಿದ್ಧ, ಆದರೆ ಆರ್ಹತೆಯ ಮೇರೆಗೆ ಮಾತ್ರ ಎಂದಿದ್ದರು. ಇದರ ಬೆನ್ನಲ್ಲೇ ಅವರನ್ನು ಭೇಟಿಯಾಗಲು ಪ್ರತಿಭಟನಾಕಾರರು ಒಪ್ಪಿಕೊಂಡಿದ್ದಾರೆ.
“ಶಹೀನ್ ಬಾಗ್ ಪ್ರತಿಭಟನಾಕಾರರು ನನ್ನನ್ನು ಭೇಟಿಯಾಗಲು ಸಮಯ ಪಡೆಯಬೇಕು, ಮೂರು ದಿನಗಳೊಳಗೆ ನಾನು ಸಮಯ ನೀಡುತ್ತೇನೆ. ನಾನು ಯಾರನ್ನಾದರೂ ಭೇಟಿಯಾಗಲು ಸಿದ್ಧನಿದ್ದೇನೆ. ಆದರೆ ಯಾರೂ ಚರ್ಚಿಸಲು ಬಯಸುತ್ತಿಲ್ಲ, ಅರ್ಹತೆಗಳ ಮೇಲೆ ಚರ್ಚೆ ನಡೆಯಬೇಕಿದೆ ”ಎಂದು ಪ್ರಮುಖ ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಶಾ ಹೇಳಿದ್ದರು.
ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದಿದ್ದ ಅವರು, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಘಟನೆಯಲ್ಲಿ ಪೊಲೀಸರ ಪರ ನಿಲ್ಲುವುದಾಗಿ ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.