ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತೀಯ ವಾಯುಪಡೆಯು ಫೆಬ್ರವರಿ 14 ರಿಂದ ಫೆಬ್ರವರಿ 15 ರ ವರೆಗೆ ವಾಯುಪಡೆಯ ಸ್ಟೇಷನ್ ನಲಿಯಾದಲ್ಲಿ ತನ್ನ ಮೊದಲ ಇಂಟರ್ ಕಮಾಂಡ್ ಅಲ್ಟ್ರಾ ಮ್ಯಾರಥಾನ್ ಸ್ಪರ್ಧೆಯನ್ನು ಆಯೋಜನೆಗೊಳಿಸಿದೆ. ಏರ್ಫೋರ್ಸ್ ಸ್ಟೇಷನ್ ನಲಿಯಾದ ಏರ್ ಆಫೀಸರ್ ಕಮಾಂಡಿಂಗ್ ಏರ್ ಕಮಡೋರ್ ಇಜೆ ಆಂಥೋನಿ ವಿಎಸ್ಎಂ ಅವರು ಅಲ್ಟ್ರಾಗೆ ಚಾಲನೆ ನೀಡಿದ್ದಾರೆ.
ಫೆಬ್ರವರಿ 14 ರಂದು 06:00 ಗಂಟೆಗೆ ಮ್ಯಾರಥಾನ್ ಆರಂಭವಾಗಿದ್ದು, ಇಂದು ಅಂತ್ಯವಾಗಲಿದೆ.
ಈ ಮ್ಯಾರಥಾನ್ ಕ್ರಮವಾಗಿ 75 ಕಿ.ಮೀ, 100 ಕಿ.ಮೀ ಮತ್ತು 160 ಕಿ.ಮೀ ದೂರವನ್ನು ಒಳಗೊಂಡಿರುವ ಮೂರು ವಿಭಾಗಗಳನ್ನು ಒಳಗೊಂಡಿದೆ. ಏರ್ ಹೆಡ್ಕ್ವಾಟರ್ಸ್, ಐಎಎಫ್ ನ ವಿವಿಧ ಕಮಾಂಡ್ ಗಳು ಮತ್ತು ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಾಯು ಯೋಧರಿಗೆ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಮತ್ತು ಐಎಎಫ್ನ ಉತ್ಸಾಹವನ್ನು ಎತ್ತಿ ತೋರಿಸಲು ಅವಕಾಶ ಸಿಗುತ್ತದೆ. ಸಶಸ್ತ್ರ ಪಡೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಕಲ್ಪನೆಯನ್ನು ಪ್ರಚಾರ ಮಾಡುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಇದಲ್ಲದೆ, ಭಾಗವಹಿಸುವವರು ತಮ್ಮ ದೈಹಿಕ ಮತ್ತು ಮಾನಸಿಕ ಕಠೋರತೆಯನ್ನು ದೃಢಪಡಿಸಲು ಇಂತಹ ಕ್ರೀಡೆಗೆ ತಯಾರಾಗಲು ಕಠಿಣ ತರಬೇತಿಗೆ ಒಳಗಾಗಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.