ನವದೆಹಲಿ: ಆಧಾರ್ನೊಂದಿಗೆ ಲಿಂಕ್ ಆಗದ ಸುಮಾರು 17 ಕೋಟಿಗೂ ಹೆಚ್ಚು ಪಾನ್ ಕಾರ್ಡ್ಗಳು ಮಾರ್ಚ್ ಅಂತ್ಯದ ವೇಳೆಗೆ ನಿಷ್ಕ್ರಿಯವಾಗಲಿದೆ.
2020 ರ ಮಾರ್ಚ್ 31 ರೊಳಗೆ ಆಧಾರ್ನೊಂದಿಗೆ ಲಿಂಕ್ ಆಗದ ಪಾನ್ ಸಂಖ್ಯೆಗಳು ನಿಷ್ಕ್ರಿಯಗೊಳ್ಳುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಪಾನ್ ಮತ್ತು ಆಧಾರ್ ಅನ್ನು ಜೋಡಣೆಗೊಳಿಸುವ ಗಡುವನ್ನು ಹಲವಾರು ಬಾರಿ ವಿಸ್ತರಿಸಲಾಗಿದೆ ಮತ್ತು ಕೊನೆಯ ಬಾರಿಗೆ ನೀಡಿದ ಗಡುವು ಮಾರ್ಚ್ 31, 2020 ಕ್ಕೆ ಕೊನೆಗೊಳ್ಳುತ್ತದೆ.
ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಈಗಾಗಲೇ 30.75 ಕೋಟಿಗೂ ಹೆಚ್ಚು ಪಾನ್ಗಳನ್ನು ಆಧಾರ್ಗೆ ಜೋಡಿಸಲಾಗಿದೆ. ಆದರೆ, 17.58 ಕೋಟಿ ಪಾನ್ಗಳನ್ನು ಇನ್ನೂ 12-ಅಂಕಿಯ ಬಯೋಮೆಟ್ರಿಕ್ ಐಡಿಯೊಂದಿಗೆ ಜೋಡಿಸಲಾಗಿಲ್ಲ.
ಸುಪ್ರೀಂಕೋರ್ಟ್ 2018 ರ ಸೆಪ್ಟೆಂಬರ್ನಲ್ಲಿ ಆಧಾರ್ ಅನ್ನು ಸಾಂವಿಧಾನಿಕವಾಗಿ ಮಾನ್ಯ ಎಂದು ಘೋಷಿಸಿತ್ತು ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಮತ್ತು ಪಾನ್ ಕಾರ್ಡ್ಗಳ ಹಂಚಿಕೆಗೆ ಬಯೋಮೆಟ್ರಿಕ್ ಐಡಿ ಕಡ್ಡಾಯವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
“ಮಾರ್ಚ್ 31, 2020ರ ವೇಳೆ ಪಾನ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಲು ವಿಫಲರಾಗುವ ವ್ಯಕ್ತಿಯ ಪಾನ್ ಸಂಖ್ಯೆ ನಿಷ್ಕ್ರಿಯಗೊಳ್ಳಲಿದೆ” ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.