ಚಂಡೀಗಢ: 2021ರ ಜನಗಣತಿಯ ಮೊದಲ ಹಂತವನ್ನು ಹರಿಯಾಣದಲ್ಲಿ ಮೇ 1 ರಿಂದ ಜೂನ್ 15 ರವರೆಗೆ ನಡೆಸಲಾಗುತ್ತಿದೆ. ಸುಮಾರು 58,000 ಎಣಿಕೆದಾರರು ಮತ್ತು ಮೇಲ್ವಿಚಾರಕರ ಸಹಾಯದ ಮೂಲಕ ಜನಗಣತಿ ಕಾರ್ಯ ನಡೆಯಲಿದೆ.
ಹರಿಯಾಣದ ಮುಖ್ಯ ಕಾರ್ಯದರ್ಶಿ ಕೆಶ್ನಿ ಆನಂದ್ ಅರೋರಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜನಗಣತಿ 2021 ರ ಸನ್ನದ್ಧತೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ನವೀಕರಣದ ಪರಿಶೀಲನೆಗಾಗಿ ರಾಜ್ಯ ಮಟ್ಟದ ಸಮ್ಮೇಳನ ನಡೆಯಿತು. ಇದರಲ್ಲಿ ಜಿಲ್ಲಾಧಿಕಾರಿಗಳು ಮತ್ತು ಪ್ರಧಾನ ಜನಗಣತಿ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆಯಲ್ಲಿ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ವಿವೇಕ್ ಜೋಶಿ ಉಪಸ್ಥಿತರಿದ್ದರು.
“ಜನಗಣತಿಯ ಮಾಹಿತಿಯು ಬಹಳ ವಿಶ್ವಾಸಾರ್ಹವಾಗಿರಬೇಕು ಮತ್ತು ಜನಗಣತಿಯ ಸಂಪೂರ್ಣ ಪ್ರಕ್ರಿಯೆಯು ಸಮಯಕ್ಕೆ ಅನುಗುಣವಾಗಿರಬೇಕಾದುದರಿಂದ ಎಲ್ಲಾ ಕಾರ್ಯವಿಧಾನಗಳು ನಿಗದಿತ ಅವಧಿಯೊಳಗೆ ಅಂದರೆ ಮೇ 1 ರಿಂದ ಜೂನ್ 15 ರವರೆಗೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು” ಎಂದು ಮುಖ್ಯ ಕಾರ್ಯದರ್ಶಿ ಅಧಿಕಾರಿಗಳಿಗೆ ಹೇಳಿದ್ದಾರೆ.
ಈ ವರ್ಷ ಜನಗಣತಿ ದತ್ತಾಂಶವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಜನಗಣತಿ ಡಿಜಟಲೀಕರಣಗೊಂಡಿದೆ.
ಸರ್ಕಾರದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮೇ 1 ರಿಂದ ಜೂನ್ 15 ರವರೆಗೆ ಹರಿಯಾಣದಲ್ಲಿ ಮೊದಲ ಹಂತದ ಮನೆ ಪಟ್ಟಿ ಮತ್ತು ವಸತಿ ಗಣತಿಯನ್ನು ನಡೆಸಲಾಗುತ್ತಿದೆ.
ಮನೆ ಪಟ್ಟಿ ಕಾರ್ಯಾಚರಣೆಯ ಸಮಯದಲ್ಲಿ, ಮನೆಗಳ ಗುಣಮಟ್ಟ, ಮನೆಗಳಿಗೆ ಲಭ್ಯವಿರುವ ಸೌಕರ್ಯಗಳು ಮತ್ತು ಮನೆಗಳು ಹೊಂದಿರುವ ಆಸ್ತಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಎರಡನೇ ಹಂತ ಅಂದರೆ ಜನಸಂಖ್ಯೆಯ ಎಣಿಕೆಯನ್ನು ಫೆಬ್ರವರಿ 9 ರಿಂದ ಫೆಬ್ರವರಿ 28, 2021 ರವರೆಗೆ ನಡೆಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.