ಶಿಮ್ಲಾ : ಹಿಮಾಲಯ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಪ್ರದೇಶದಲ್ಲಿ 117 ವರ್ಷಗಳಷ್ಟು ಹಳೆಯದಾದ ಉಗಿ ಯಂತ್ರ (ಸ್ಟೀಮ್ ಎಂಜಿನ್)ವು ಕಲ್ಕಾ-ಶಿಮ್ಲಾ ಪಾರಂಪರಿಕ ಮಾರ್ಗದಲ್ಲಿ ಹಲವಾರು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಪ್ರದೇಶದ ಪ್ರವಾಸೋದ್ಯಮದ ಉತ್ತೇಜನಕ್ಕೆ ಸಹಾಯ ಮಾಡುತ್ತಿದೆ ಮತ್ತು ಉತ್ತರ ರೈಲ್ವೆಯ ಆದಾಯವನ್ನೂ ಹೆಚ್ಚಳ ಮಾಡುತ್ತಿದೆ.
“ಈ ಉಗಿ ಎಂಜಿನ್ ರೈಲನ್ನು ಓಡಿಸಲು ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಇದು ದೇಶದ ಪರಂಪರೆ, ಸಂಸ್ಕೃತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತಿದೆ ಮತ್ತು ಭಾರತೀಯ ರೈಲ್ವೆಯ ಗಳಿಕೆಗೆ ಸಹಕಾರಿಯಾಗಿದೆ” ಎಂದು ರೈಲ್ವೆ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಉತ್ತರ ರೈಲ್ವೆಯು ಕಲ್ಕಾ-ಶಿಮ್ಲಾ ಪಾರಂಪರಿಕ ಮಾರ್ಗದಲ್ಲಿ ಪ್ರವಾಸಿಗರಿಗೆ 12 ರಿಂದ 20 ಮೈಲಿ (20 ಕಿ.ಮೀ ನಿಂದ 32 ಕಿ.ಮೀ) ವರೆಗೆ ಈ ಉಗಿ ಯಂತ್ರದಲ್ಲಿ ಪ್ರಯಾಣವನ್ನು ನೀಡುತ್ತಿದೆ. ಇದರಲ್ಲಿ ಪ್ರಯಾಣ ಮಾಡಲು ಬುಕ್ಕಿಂಗ್ ಮಾಡಿಕೊಳ್ಳಬೇಕು.
“ಸ್ಟೀಮ್ ಎಂಜಿನ್ ರೈಲುಗಳು ನಿಜಕ್ಕೂ ಅದ್ಭುತವಾದವು ಮತ್ತು ಅವುಗಳ ಪರಂಪರೆ ಬಹಳ ನಿಖರವಾಗಿದೆ. ಪ್ರತಿಯೊಬ್ಬರೂ ಇದರಲ್ಲಿ ಪ್ರಯಾಣಿಸಬೇಕು ಮತ್ತು ಒಮ್ಮೆಯಾದರೂ ಇಲ್ಲಿಗೆ ಬರಲೇ ಬೇಕು. ಈ ಸಂದೇಶವನ್ನು ಹೊತ್ತು ನಾನು ನನ್ನ ತವರಿಗೆ ಮರಳುತ್ತೇವೆ” ಎಂದು ಯುಕೆ ಮಹಿಳಾ ಪ್ರವಾಸಿ ವಿವಿಯೆನ್ ಎಡ್ವರ್ಡ್ ಹೇಳುತ್ತಾರೆ.
ರೈಲ್ವೆ ಇಲಾಖೆ ತನ್ನ ಐತಿಹಾಸಿಕ ಪ್ರಾಮುಖ್ಯತೆಗಾಗಿ ಈ ಎಂಜಿನ್ ಅನ್ನು ಓಡಿಸುತ್ತಿದೆ.
ಕಲ್ಕಾ-ಶಿಮ್ಲಾ ರೈಲ್ವೆ ಮಾರ್ಗವನ್ನು 2008 ರಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ಮಾರ್ಗವೆಂದು ಘೋಷಿಸಲಾಯಿತು. ಅಂದಿನಿಂದ ಈ ಉಗಿ ಯಂತ್ರ ಈ ಪ್ರದೇಶದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.