ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರು ನೀಡಿದ ಅಮೂಲ್ಯ ಕೊಡುಗೆಗಳಿಗೆ ಗೌರವ ಸಲ್ಲಿಸುವಂತಹ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ.
ಭಾರತೀಯ ರಾಜತಾಂತ್ರಿಕತೆಗೆ, ಅನಿವಾಸಿ ಭಾರತೀಯರಿಗೆ ಮತ್ತು ಸಾರ್ವಜನಿಕ ಸೇವಾ ನೀತಿಗಳಿಗೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ನವದೆಹಲಿಯ ಪ್ರವಾಸಿ ಭಾರತೀಯ ಕೇಂದ್ರವನ್ನು ಸುಷ್ಮಾ ಸ್ವರಾಜ್ ಭವನ ಮತ್ತು ನವದೆಹಲಿಯಲ್ಲಿನ ವಿದೇಶಿ ಸೇವಾ ಸಂಸ್ಥೆಗೆ ಸುಷ್ಮಾ ಸ್ವರಾಜ್ ಇನ್ಸ್ಟಿಟ್ಯೂಟ್ ಆಫ್ ಫಾರಿನ್ ಸರ್ವಿಸ್ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ.
ಮಾಜಿ ವಿದೇಶಾಂಗ ಸಚಿವೆಯ ಮಾನವೀಯ ಮೌಲ್ಯ ಮತ್ತು ದಶಕಗಳ ಸಾರ್ವಜನಿಕ ಸೇವೆಯ ಗೌರವಾರ್ಥ ಫೆಬ್ರವರಿ 14 ರಂದು ಅವರ ಜನ್ಮ ವರ್ಷಾಚರಣೆಯ ಮುನ್ನಾದಿನದಂದು ಈ ಘೋಷಣೆಯನ್ನು ಸರ್ಕಾರ ಹೊರಡಿಸಿದೆ.
ಸುಷ್ಮಾ ಸ್ವರಾಜ್ ಅವರ 68 ಜನ್ಮದಿನದ ಅಂಗವಾಗಿ ವಿದೇಶಾಂಗ ಸಚಿವಾಲಯ ಈ ನಿರ್ಧಾರವನ್ನು ಪ್ರಕಟಿಸಿದೆ.
In honour of the legacy and decades of public service of Smt. Sushma Swaraj, it has been decided to rename Pravasi Bhartiya Kendra as Sushma Swaraj Bhawan & Foreign Service Institute as Sushma Swaraj Institute of Foreign Service.
🔗https://t.co/HQCePPWnhQhttps://t.co/B2H2ItkG8P pic.twitter.com/xrwnmffECo— Raveesh Kumar (@MEAIndia) February 13, 2020
Thank you Prime Minister @narendramodi for this kind gesture on the eve of her birthday. We as a family are grateful for this honour.
– Bansuri Swaraj & @governorswaraj @AmitShah @DrSJaishankar @JPNadda https://t.co/kxyDEjmoBn— Governor Swaraj (@governorswaraj) February 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.