ನವದೆಹಲಿ: ಭಾರತವು ರಕ್ಷಣಾ ಸಾಧನಗಳ ದೊಡ್ಡ ಆಮದುದಾರ ಎಂಬುದು ನಿಜ. ಆದರೀಗ ಭಾರತ ರಕ್ಷಣಾ ರಫ್ತು ವಿಷಯದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಿದೆ. ಯುಎಸ್, ಆಸ್ಟ್ರೇಲಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಸ್ರೇಲ್, ದಕ್ಷಿಣ ಆಫ್ರಿಕಾ ಮತ್ತು ಸ್ವೀಡನ್ ಮುಂತಾದ ದೊಡ್ಡ ರಕ್ಷಣಾ ರಫ್ತು ಮಾರುಕಟ್ಟೆಯನ್ನು ಹೊಂದಿರುವ ದೇಶಗಳಿಗೆ ಭಾರತವು ವಿವಿಧ ರಕ್ಷಣಾ ಪರಿಕರಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿದೆ.
ಅಜರ್ಬೈಜನ್, ಸೀಶೆಲ್ಸ್, ಎಸ್ಟೋನಿಯಾ, ಇಂಡೋನೇಷ್ಯಾ, ಜಿನಿಯಾ ಮತ್ತು ಫಿಲಿಪೈನ್ಸ್ ಅನ್ನು ಒಳಗೊಂಡಂತೆ 42 ರಾಷ್ಟ್ರಗಳು ಭಾರತದ ರಕ್ಷಣಾ ರಫ್ತು ಸ್ವೀಕರಿಸುವ ರಾಷ್ಟ್ರಗಳ ಪಟ್ಟಿಯಲ್ಲಿವೆ.
ರಕ್ಷಣಾ ಸಚಿವಾಲಯದ ರಾಜ್ಯ ಖಾತೆ ಸಚಿವ ಶ್ರೀಪಾದ್ ನಾಯಕ್ ಸೋಮವಾರ ರಾಜ್ಯಸಭೆಗೆ ಈ ಬಗ್ಗೆ ಲಿಖಿತ ಉತ್ತರವನ್ನು ನೀಡಿದ್ದು, ವಸ್ತುಗಳ ಬೆಲೆ ಮತ್ತು ವಿದೇಶಿ ವಿನಿಮಯದ ಪ್ರಮಾಣವು ಕಂಪನಿಯಿಂದ ಕಂಪನಿಗೆ ಬದಲಾಗುತ್ತದೆ ಎಂದಿದ್ದಾರೆ.
ಆಸ್ಟ್ರೇಲಿಯಾಕ್ಕೆ ಭಾರತೀಯ ರಕ್ಷಣಾ ಉತ್ಪನ್ನ ರಫ್ತು 56x45mm Ball MK N(SS109) (ಎಸ್ಎಸ್ 109) ಕಾರ್ಟ್ರಿಜ್ಗಳನ್ನು ಒಳಗೊಂಡಿದೆ, ಅಜೆರ್ಬೈಜಾನ್ಗೆ ರಕ್ಷಣಾತ್ಮಕ ಹೆಲ್ಮೆಟ್ ಮತ್ತು ಗಟ್ಟಿಯಾದ ರಕ್ಷಾಕವಚ ರಫ್ತು ಮಾಡಲಾಗಿದೆ. ಹೆಲ್ಮೆಟ್ಗಳು, ಬಾಂಬ್ ನಿಗ್ರಹ ಬ್ಲ್ಯಾಂಕೆಟ್ ಮತ್ತು ಮೃದು ರಕ್ಷಾಕವಚಗಳು ಜರ್ಮನಿಗೆ ರಫ್ತಾಗಿದೆ, ಗಿನಿಯಾಕ್ಕೆ ಸ್ಲೀಪಿಂಗ್ ಬ್ಯಾಗ್, ಮಾರ್ಟರ್ ಶೆಲ್ ಕವರ್ ರಫ್ತು ಮಾಡಲಾಗಿದೆ. ಇಸ್ರೇಲ್, ನೆದರ್ಲ್ಯಾಂಡ್ಸ್ ಮತ್ತು ಯುಎಸ್ಗೆ ಕಠಿಣ ರಕ್ಷಾ ಕವಚಗಳು, ರೇಡಾರ್ ಭಾಗಗಳು ಮತ್ತು ಸಿಂಗಾಪುರಕ್ಕೆ ಬಿಡಿಭಾಗಗಳೊಂದಿಗೆ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಮತ್ತು ಹೆಲ್ಮೆಟ್ಗಳನ್ನು ರಫ್ತು ಮಾಡಲಾಗಿದೆ. ದಕ್ಷಿಣ ಆಫ್ರಿಕಾಕ್ಕೆ ಡಿಟೊನೇಟರ್ಗಳು ಮತ್ತು ಥೈಲ್ಯಾಂಡ್ಗೆ ರಾತ್ರಿ ದೃಷ್ಟಿ ಬೈನಾಕ್ಯುಲರ್ಗಳನ್ನು ರಫ್ತು ಮಾಡಲಿದೆ.
ಕತಾರ್, ಲೆಬನಾನ್, ಇರಾಕ್, ಈಕ್ವೆಡಾರ್, ಉರುಗ್ವೆ, ಜಪಾನ್ ಮತ್ತು ಈಜಿಪ್ಟ್ಗೆ ಭಾರತದ ರಫ್ತು ಮುಖ್ಯವಾಗಿ ದೇಹದ ರಕ್ಷಣಾ ಸಾಧನಗಳನ್ನು ಒಳಗೊಂಡಿದೆ ಎಂದು ನಾಯಕ್ ತಮ್ಮ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.