ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಆದರೆ ಸಂದರ್ಶನದ ಹಂತದಲ್ಲಿ ಅನುತ್ತೀರ್ಣಗೊಂಡಿರುವ ಆಕಾಂಕ್ಷಿಗಳಿಗೆ ಖಾಸಗಿ ವಲಯದಲ್ಲಿ ಉದ್ಯೋಗವನ್ನು ದೊರಕಿಸಿಕೊಡುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವು ಅಭೂತಪೂರ್ವ ರೀತಿಯಲ್ಲಿ ಯಶಸ್ಸನ್ನು ಕಾಣುತ್ತಿದೆ.
ನಾಗರಿಕ ಸೇವಾ ಪರೀಕ್ಷೆ ಮತ್ತು ಎಂಜಿನಿಯರಿಂಗ್ ಸೇವಾ ಪರೀಕ್ಷೆಯನ್ನು ನಡೆಸುವ ಅಧಿಕೃತ ಸರ್ಕಾರಿ ಸಂಸ್ಥೆಯಾದ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC), 2017 ರಲ್ಲಿ ಸಂದರ್ಶನ ಹಂತದಲ್ಲಿ ತೇರ್ಗಡೆಯಾಗಲು ಸಾಧ್ಯವಾಗದ ಆಕಾಂಕ್ಷಿಗಳನ್ನು ಸಂಪರ್ಕಿಸಲು ಖಾಸಗಿ ವಲಯದ ಕಂಪೆನಿಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ. ಕಳೆದ ಮೂರು ವರ್ಷಗಳಿಂದ ಆಕಾಂಕ್ಷಿಗಳಾಗಿ ಮತ್ತು ಅಭ್ಯರ್ಥಿಗಳಾಗಿ ಇರುವವರಿಗೆ ಈ ನಿರ್ಧಾರವು ದೊಡ್ಡ ಯಶಸ್ಸನ್ನು ತಂದುಕೊಡಲಿದೆ.
2017 ರಲ್ಲಿ, 800 ಅಭ್ಯರ್ಥಿಗಳು ಸರ್ಕಾರದ ಈ ನಿಬಂಧನೆಯನ್ನು ಆರಿಸಿಕೊಂಡಿದ್ದಾರೆ ಮತ್ತು ಸಂಸ್ಥೆಯ ದತ್ತಾಂಶ ಕೇಂದ್ರದಲ್ಲಿ ಸ್ಕೋರ್ ಕಾರ್ಡ್ ಅನ್ನು ಅಪ್ಲೋಡ್ ಮಾಡಲು ಯುಪಿಎಸ್ಸಿಯಿಂದ ಅನುಮತಿಯನ್ನು ಪಡೆದಕೊಂಡಿದ್ದಾರೆ. ಮಾತ್ರವಲ್ಲದೇ ಅವರಲ್ಲಿ 200 ಮಂದಿ ಖಾಸಗಿ ಉದ್ಯೋಗಗಳನ್ನೂ ಪಡೆದರು. 2018 ರಲ್ಲಿ, ನಿಬಂಧನೆಯನ್ನು ಆರಿಸಿಕೊಳ್ಳುವ ಅಭ್ಯರ್ಥಿಗಳ ಸಂಖ್ಯೆಯು 6,000 ಕ್ಕೆ ಭಾರಿ ಹೆಚ್ಚಳವನ್ನು ಕಂಡಿದೆ ಮತ್ತು ಅವರಲ್ಲಿ 500 ಜನರಿಗೆ ಉದ್ಯೋಗವನ್ನೂ ನೀಡಲಾಗಿದೆ. ಹಿಂದಿನ ಅಭ್ಯರ್ಥಿಗಳು ಉತ್ತಮವಾದ ಉದ್ಯೋಗವನ್ನು ಗಿಟ್ಟಿಸಿಕೊಂಡಿದ್ದು ಈ ಭಾರೀ ಹೆಚ್ಚಳಕ್ಕೆ ಸ್ಪಷ್ಟವಾದ ಕಾರಣವಾಗಿದೆ.
ವರದಿಯ ಪ್ರಕಾರ, ಅಂತಹ ಅಭ್ಯರ್ಥಿಗಳ ಸಂಖ್ಯೆ 2019 ರಲ್ಲಿ 14,000 ಕ್ಕೆ ಏರಿದೆ. “ಈಗ, ಐಎಎಸ್ ಸಂದರ್ಶನದ ಹಂತದವರೆಗೆ ಬಂದು ವಿಫಲರಾದ ಶೇಕಡಾ 80-90 ಅಭ್ಯರ್ಥಿಗಳು ಇದನ್ನು ಆರಿಸಿಕೊಳ್ಳುತ್ತಾರೆ” ಎಂದು ಯುಪಿಎಸ್ಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಯುಪಿಎಸ್ ಸಿ ಅಂಕಗಳ ಆಧಾರದ ಮೇಲೆ ಖಾಸಗಿ ವಲಯದಲ್ಲಿ ಸುಲಭವಾಗಿ ಉದ್ಯೋಗ ಪಡೆಯುವ ಎಂಜಿನಿಯರ್ಗಳು ಮತ್ತು ವೈದ್ಯರಲ್ಲಿ ಇದು ವಿಶೇಷವಾಗಿ ಜನಪ್ರಿಯವಾಗಿದೆ” ಎಂದಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಮೋದಿ ಸರ್ಕಾರವು ನಾಗರಿಕ ಸೇವೆಗಳು ಮತ್ತು ಎಂಜಿನಿಯರಿಂಗ್ ಸೇವೆಗಳಲ್ಲಿನ ಹುದ್ದೆಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಕೆಲವು ವರ್ಷಗಳ ಹಿಂದೆ ಆಯ್ಕೆ ಮಾಡುತ್ತಿದ್ದ 1,000-1,100 ಕ್ಕೆ ಹೋಲಿಸಿದರೆ, ಈಗ ಪ್ರತಿವರ್ಷ 600-700 ನಾಗರಿಕ ಸೇವಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ, ಸಂದರ್ಶನದ ಸುತ್ತಿಗೆ ಪ್ರವೇಶಿಸುವ ಆದರೆ ಸೇವೆಗೆ ಪ್ರವೇಶ ಪಡೆಯದ ಅಭ್ಯರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿದೆ.
ಕಳೆದ ಕೆಲವು ವರ್ಷಗಳಲ್ಲಿ ನಾಗರಿಕ ಸೇವೆಗಳ ಆಕಾಂಕ್ಷಿಗಳ ಸಂಖ್ಯೆಯೂ ಗಣನೀಯವಾಗಿ ಏರಿದೆ. ಆದ್ದರಿಂದ, ಪ್ರತಿಭಾವಂತ ಮಾನವ ಸಂಪನ್ಮೂಲಗಳ ಕೊರತೆಯನ್ನು ನೀಗಿಸಲು ಪ್ರತಿಭೆಗಳನ್ನು ಖಾಸಗಿ ವಲಯಕ್ಕೆ ತಿರುಗಿಸಲು ಇದು ಹೆಚ್ಚು ಸೂಕ್ತವಾಗಿದೆ. ಕಂಪನಿಗಳು ಇವರುಗಳಿಗೆ ಭಾರಿ ಪ್ಯಾಕೇಜ್ ನೀಡಲು ಸಿದ್ಧವಾಗಿವೆ ಮತ್ತು ಆದ್ದರಿಂದ ಈ ನಿಬಂಧನೆಯು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಎನ್ಟಿಪಿಸಿ ಮತ್ತು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಂತಹ ಅನೇಕ ಕಂಪನಿಗಳು ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳನ್ನು ನೇಮಕ ಮಾಡಿಕೊಳ್ಳುತ್ತಿವೆ, ಏಕೆಂದರೆ ಅವರು ಈ ಕೆಲಸಕ್ಕೆ ಸೂಕ್ತರಾಗಿದ್ದಾರೆ. ಈ ನಿಬಂಧನೆಯು ಯಶಸ್ಸು-ಗೆಲುವಿನ ಸನ್ನಿವೇಶವಾಗಿದ್ದು, ಆಕಾಂಕ್ಷಿಗಳಿಂದ ಹಿಡಿದು ಸರ್ಕಾರದವರೆಗೆ ಮತ್ತು ಕಂಪನಿಗಳವರೆಗೂ ಎಲ್ಲರೂ ಸಂತೋಷಗೊಂಡಿದ್ದಾರೆ.
“ಸರ್ಕಾರವು ಕೆಲವು ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಬಹುದು, ಆದರೆ ಸಂದರ್ಶನದ ಹಂತಕ್ಕೆ ಬಂದವರು ಕೂಡ ಸಮರ್ಥರು. ಪ್ರತಿವರ್ಷ ಸುಮಾರು 500-1000 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಗಳ ಮೂಲಕ ಖಾಸಗಿ ಉದ್ಯೋಗಗಳಿಗೆ ಬರುತ್ತಿದ್ದಾರೆ, ಅವರು ನಾಗರಿಕ ಸೇವೆಗಳಿಗಾಗಿ ಅನೇಕ ವರ್ಷಗಳಿಂದ ನಡೆಸಿದ ಪ್ರಯತ್ನವನ್ನು ವ್ಯರ್ಥವಾಗದಂತೆ ನೋಡಿಕೊಳ್ಳಲು ಇದು ಒಳ್ಳೆಯ ಮಾರ್ಗ” ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಕಾಂಗ್ರೆಸ್ ಸರ್ಕಾರ ಖಾಸಗಿ ವಲಯದ ಬಗ್ಗೆ ಉದಾಸೀನತೆಯನ್ನು ತೋರಿಸಲು ಅದರ ಮಾರ್ಕ್ಸ್ವಾದಿ ಧೋರಣೆಯೇ ಕಾರಣ. ಆದರೆ, ಬಿಜೆಪಿ ಖಾಸಗೀಕರಣವನ್ನು ಅನುಸರಿಸುತ್ತಿದೆ ಮತ್ತು ಖಾಸಗಿ ವಲಯದ ಜನರನ್ನು ಸರ್ಕಾರಿ ಉದ್ಯೋಗಗಳಿಗೆ ಸೇರಿಸಿಕೊಳ್ಳುತ್ತಿದೆ.
ಜಂಟಿ ಕಾರ್ಯದರ್ಶಿ ಮುಂತಾದ ಹುದ್ದೆಗಳಿಗೆ ‘ಲ್ಯಾಟರಲ್ ಎಂಟ್ರಿ ಸ್ಕೀಮ್’ ಅಡಿಯಲ್ಲಿ ಖಾಸಗಿ ವಲಯದ ‘ಅನುಭವಿ’ ಜನರನ್ನು ಸರ್ಕಾರ ನೇಮಕ ಮಾಡಿಕೊಳ್ಳುತ್ತಿದೆ. ಖಾಸಗಿ ವಲಯದಲ್ಲಿ ದಶಕಗಳ ಅನುಭವ ಹೊಂದಿರುವ ಜನರು ನಿರ್ದಿಷ್ಟ ವಲಯಕ್ಕೆ ‘ತಜ್ಞರು’, ಎಲ್ಲದರ ಬಗ್ಗೆ ಸ್ವಲ್ಪ ತಿಳಿದಿರುವ ಮತ್ತು ವಲಯದ ನಿರ್ದಿಷ್ಟ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದ ಅಧಿಕಾರಿ ವರ್ಗಗಳಿಗಿಂತ ಇವರು ಹೆಚ್ಚು ಸೂಕ್ತ ವ್ಯಕ್ತಿಗಳಾಗಿರುತ್ತಾರೆ. ಆಲಸ್ಯ ಮತ್ತು ಅಸಮರ್ಥ ಅಧಿಕಾರಶಾಹಿ ನೀತಿ ಕಾರ್ಯಗತಗೊಳಿಸುವಿಕೆಯ ಗುಣಮಟ್ಟಕ್ಕೆ ಒಂದು ಅಡಚಣೆಯಾಗಿದೆ. ಆದರೆ ಮೋದಿ ಸರ್ಕಾರದ ಹೊಸ ತಂತ್ರವು ಅಧಿಕಾರಶಾಹಿಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ, ಮಾತ್ರವಲ್ಲದೆ ದೇಶದ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಕ್ರಮಗಳು ಭಾರತೀಯ ಅಧಿಕಾರಿಗಳಿಗೆ ಎಚ್ಚರಿಕೆಯ ಕರೆಯಾಗಬಲ್ಲದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.