ನವದೆಹಲಿ: ಶಾಲಾ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಇಸ್ರೋವು ‘ಯಂಗ್ ಸೈಂಟಿಸ್ಟ್ ಪ್ರೋಗ್ರಾಂ’ ಅನ್ನು ಆಯೋಜನೆಗೊಳಿಸುತ್ತಿದೆ. ಇದಕ್ಕೆ ಫೆ. 3 ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. 2019 ರಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮವನ್ನು ಇಸ್ರೋ ಆಯೋಜನೆಗೊಳಿಸಿತ್ತು, ಈ ವರ್ಷ ಎರಡನೇ ಬಾರಿಗೆ ಆಯೋಜಿಸುತ್ತಿದೆ.
9 ನೇ ತರಗತಿ ಓದುತ್ತಿರುವ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅರ್ಹರಾಗಿದ್ದಾರೆ. 2020ರ ಮೇ ತಿಂಗಳಲ್ಲಿ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ. ಕಾರ್ಯಕ್ರಮದಲ್ಲಿ ಗಣ್ಯ ವಿಜ್ಞಾನಿಗಳು ಭಾಗಿಯಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ತಲಾ 3 ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತಿದೆ. ಒಸಿಐ ಅಭ್ಯರ್ಥಿಗಳಿಗೆ 5 ಸ್ಥಾನಗಳು ಮೀಸಲಾಗಿ ಇರಲಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ.
2020ರ ಫೆಬ್ರವರಿ 24ರವರೆಗೆ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಇಸ್ರೋ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು, ನಂತರ ವಿವರವಾದ ಅಧಿಸೂಚನೆ ಮತ್ತು FAQ ಗಳನ್ನು ಓದಿದ ನಂತರ, ‘ಆನ್ಲೈನ್ ನೋಂದಣಿ’ ಕ್ಲಿಕ್ ಮಾಡಿ. ನೋಂದಾಯಿತ ಬಳಕೆದಾರರು ‘ಯುವಿಕಾ ಲಾಗಿನ್’ ಕ್ಲಿಕ್ ಮಾಡಬಹುದು, ವಿದ್ಯಾರ್ಥಿಗಳ ವಿವರಗಳನ್ನು ಒದಗಿಸಬೇಕು.
ಆಯ್ಕೆಯಾದ ಅಭ್ಯರ್ಥಿಗಳನ್ನು ಅಹಮದಾಬಾದ್, ಬೆಂಗಳೂರು, ಶಿಲ್ಲಾಂಗ್ ಮತ್ತು ತಿರುವನಂತಪುರಂನಲ್ಲಿರುವ ಇಸ್ರೋ / ಡಾಸ್ ಕೇಂದ್ರಗಳಲ್ಲಿ ವರದಿ ಮಾಡಲು ಕೇಳಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.