ಇಸ್ಲಾಮಾಬಾದ್: ಪಾಕಿಸ್ಥಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಬುಧವಾರ 26/11 ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಮತ್ತು ಲಷ್ಕರ್-ಇ-ತೋಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ಗೆ ಎರಡು ಭಯೋತ್ಪಾದನಾ ಧನಸಹಾಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಭಯೋತ್ಪಾದನಾ ನಿಗ್ರಹ ನ್ಯಾಯಾಲಯ (ಎಟಿಸಿ)ದ ನ್ಯಾಯಾಧೀಶ ಅರ್ಷದ್ ಹುಸೇನ್ ಭಟ್ ಈ ಆದೇಶವನ್ನು ಹೊರಡಿಸಿದ್ದಾರೆ. ಲಾಹೋರ್ ನ್ಯಾಯಾಲಯವು ಈ ಹಿಂದೆ ಸಯೀದ್ ವಿರುದ್ಧದ ಎರಡು ಭಯೋತ್ಪಾದಕ ಹಣಕಾಸು ಪ್ರಕರಣಗಳ ತೀರ್ಪನ್ನು ವಿಳಂಬಗೊಳಿಸಿತ್ತು.
ಸಯೀದ್ಗೆ ಐದೂವರೆ ವರ್ಷ ಜೈಲು ಶಿಕ್ಷೆ ಮತ್ತು ಪ್ರತಿ ಪ್ರಕರಣದಲ್ಲಿ 15 ಸಾವಿರ ರೂ.ಗಳ ದಂಡ ವಿಧಿಸಲಾಯಿತು. ಎರಡೂ ಪ್ರಕರಣಗಳ ಶಿಕ್ಷೆ ಏಕಕಾಲದಲ್ಲಿ ನಡೆಯುತ್ತವೆ. ಡಾನ್ ಡಾಟ್ ಕಾಮ್ ಪ್ರಕಾರ ಎಟಿಎ ಸೆಕ್ಷನ್ 11-ಎಫ್ (2) ಮತ್ತು 11-ಎನ್ ಅಡಿಯಲ್ಲಿ ಆತನಿಗೆ ಶಿಕ್ಷೆ ವಿಧಿಸಲಾಗಿದೆ.
ವಿಶ್ವಸಂಸ್ಥೆಯ ಘೋಷಿಸಲ್ಪಟ್ಟ ಜಾಗತಿಕ ಭಯೋತ್ಪಾದಕ ಸಯೀದ್ 26/11 ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದಾನೆ. ಈ ಹಿಂದೆ ಆತನನ್ನು 16 ಬಾರಿ ಬಂಧಿಸಲಾಗಿದ್ದರೂ ಪ್ರತಿ ಬಾರಿಯೂ ಬಿಡುಗಡೆ ಮಾಡಲಾಗಿತ್ತು
ಕಳೆದ ವರ್ಷ ಜುಲೈನಲ್ಲಿ, ಜಮಾತ್-ಉದ್-ದವಾ (ಜುಯುಡಿ)ದ ಅಗ್ರ 13 ಸದಸ್ಯರು ಲಾಭರಹಿತ ಸಂಸ್ಥೆಗಳ ಮೂಲಕ ಸಂಗ್ರಹಿಸಿದ ಬೃಹತ್ ಹಣದಿಂದ ಭಯೋತ್ಪಾದನೆಗೆ ಹಣಕಾಸು ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.