ನವದೆಹಲಿ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 24-25 ರಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಟ್ರಂಪ್, “ಭಾರತಕ್ಕೆ ತೆರಳಲು ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ” ಎಂದಿದ್ದಾರೆ. ಭಾರತ ಪ್ರವಾಸದ ವೇಳೆ ಅವರು ನವದೆಹಲಿ ಮತ್ತು ಅಹ್ಮದಾಬಾದಿಗೆ ತೆರಳಲಿದ್ದಾರೆ.
“ಪ್ರಧಾನಿ ಮೋದಿ ನನ್ನ ಸ್ನೇಹಿತ, ಅವರು ಸಭ್ಯಸ್ಥ. ಭಾರತಕ್ಕೆ ತೆರಳುವುದನ್ನು ನಾನು ಎದುರು ನೋಡುತ್ತಿದ್ದೇನೆ. ಈ ವರ್ಷದ ಅಂತ್ಯದ ವೇಳೆಗೆ ಭಾರತಕ್ಕೆ ತೆರಳುತ್ತೇನೆ” ಎಂದು ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಆಗಮನದ ಸಂದರ್ಭದಲ್ಲಿ ಅಹ್ಮದಾಬಾದಿನ ಮೊಟೆರ ಸ್ಟೇಡಿಯಂನಲ್ಲಿ ಮೆಗಾ ಕಾರ್ಯಕ್ರಮ ಜರುಗಲಿದೆ. ‘ಕೇಮ್ ಚೊ ಟ್ರಂಪ್’ ಎಂದು ಕಾರ್ಯಕ್ರಮಕ್ಕೆ ಹೆಸರಿಡಲಾಗಿದೆ. ಅಮೆರಿಕಾದಲ್ಲಿ ನಡೆದ ‘ಹೌಡಿ, ಮೋದಿ’ ಕಾರ್ಯಕ್ರಮದ ಮಾದರಿಯಲ್ಲೇ ಇದು ಇರಲಿದೆ.
ಇದರಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್, “ನಾನು ಭಾರತಕ್ಕೆ ತೆರಳುತ್ತಿದ್ದೇನೆ. ಅಲ್ಲಿ ಮಿಲಿಯನ್ಗಟ್ಟಲೆ ಜನರು ನಮ್ಮನ್ನು ಸ್ವಾಗತಿಸಲಿದ್ದಾರೆ. ವಿಮಾನನಿಲ್ದಾಣದಿಂದ ಹಿಡಿದು ಮೊಟೆರಾ ಸ್ಟೇಡಿಯಂವರೆಗೆ 5-7 ಮಿಲಿಯನ್ ಜನರು ನಮಗಾಗಿ ಸ್ವಾಗತ ಕೋರಲಿದ್ದಾರೆ ಎಂದು ಮೋದಿ ಭಾವಿಸಿದ್ದಾರೆ” ಎಂದಿದ್ದಾರೆ.
ಅಮೆರಿಕಾದ ಪ್ರಥಮ ಮಹಿಳೆ ಮಿಲೇನಿಯ ಟ್ರಂಪ್ ಅವರೊಂದಿಗೆ ಆಗಮಿಸಲಿರುವ ಟ್ರಂಪ್, ನವದೆಹಲಿ ಮತ್ತು ಅಹ್ಮದಾಬಾದಿನಲ್ಲಿ ಅನೇಕ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಭಾರತದ ವಿವಿಧ ವರ್ಗಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.