ನವದೆಹಲಿ: ಭಾರತೀಯ ರೈಲ್ವೆಯು ಪ್ರಯಾಣಿಕರ ಮೊಬೈಲ್ ಫೋನ್ಗಳಲ್ಲಿ “ವೇಕ್-ಅಪ್ ಕಾಲ್” ಯ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಪ್ರಯಾಣಿಕರು ನಿಗದಿತ ಸ್ಥಳವನ್ನು ತಲುಪುವುದಕ್ಕೂ ಅರ್ಧ ಗಂಟೆಗೂ ಮುಂಚಿತವಾಗಿ ‘ವೇಕ್ ಅಪ್ ಕಾಲ್’ ಅವರಿಗೆ ಬರಲಿದೆ.
ರೈಲ್ವೆ ಸಚಿವರಾದ ಪಿಯೂಷ್ ಗೋಯಲ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ತಾವು ಇಳಿಯಬೇಕಾಗಿದ್ದ ನಿಗದಿತ ನಿಲ್ದಾಣವನ್ನು ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಈ ಸೇವೆಯನ್ನು ಆರಂಭಿಸಿರುವುದಾಗಿ ತಿಳಿಸಿದ್ದಾರೆ.
“ಪ್ರಯಾಣಿಕರು ತಾವು ಇಳಿಯಬೇಕಾದ ನಿಲ್ದಾಣ ಬರುವುದಕ್ಕೂ ಅರ್ಧ ಗಂಟೆಯ ಮೊದಲು ವೇಕ್ ಅಪ್ ಕಾಲ್ ಮೂಲಕ ಎಚ್ಚರಗೊಳ್ಳುತ್ತಾರೆ, ಇದರಿಂದಾಗಿ ಅವರಿಗೆ ತಮ್ಮ ನಿಲ್ದಾಣ ಬರುವ ಮೊದಲೇ ಇಳಿಯಲು ಸಿದ್ಧರಾಗಲು ಸುಲಭವಾಗುತ್ತದೆ” ಎಂದಿದ್ದಾರೆ.
यात्रा के दौरान अपने गंतव्य स्टेशन के छूट जाने की चिंता से अब रेलवे मुक्ति दिलायेगा।
यात्रियों को उनके स्टेशन आने के आधे घंटे पहले एक Wake-up कॉल के द्वारा अलर्ट किया जायेगा, जिससे यात्री अपने स्टेशन के आने से पहले ही उतरने के लिये तैयार हो सकेंगे। https://t.co/C7ta90EIUV pic.twitter.com/s7eVOFYCF6
— Piyush Goyal (@PiyushGoyal) February 10, 2020
ರೈಲು ನಿಗದಿತ ಸ್ಥಳಗಳನ್ನು ತಲುಪಲು 30 ನಿಮಿಷಗಳ ಮೊದಲು ವೇಕ್-ಅಪ್ ಕಾಲ್ ಪ್ರಯಾಣಿಕರಿಗೆ ಬರುತ್ತದೆ.
ಇದೊಂದು ಅತ್ಯಂತ ಪ್ರಯೋಜನಕಾರಿಯಾದ ಸೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಸೇವೆ ತೀರ ಸರಳ ವಿಷಯ ಎನಿಸಿದರೂ ದೊಡ್ಡ ಪ್ರಯೋಜನವನ್ನು ಹೊಂದಿದೆ ಎಂದು ಅನೇಕರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.