ನವದೆಹಲಿ: ದೇಶದ ಬ್ಯಾಂಕುಗಳ ಆರ್ಥಿಕ ಆರೋಗ್ಯವನ್ನು ಸುಧಾರಿಸಲು ಸರ್ಕಾರ ಕೈಗೊಂಡ ಕ್ರಮಗಳ ಹಿನ್ನಲೆಯಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್ಬಿ) ಕೆಟ್ಟ ಸಾಲಗಳು 2019 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ರೂ.7.27 ಲಕ್ಷ ಕೋಟಿಗೆ ಇಳಿದಿದೆ ಎಂದು ವರದಿಗಳು ಹೇಳಿವೆ.
ಸೋಮವಾರ ಈ ಮಾಹಿತಿಯನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ನೀಡಿದ್ದು, “ಸರ್ಕಾರವು ಪಿಎಸ್ಬಿಗಳ ಸುಧಾರಣೆ, ಆಡಳಿತ, ಅಂಡರ್ರೈಟಿಂಗ್, ಮಾನಿಟರಿಂಗ್ ಮತ್ತು ರಿಕವರಿಗಾಗಿ ಸಮಗ್ರ ಸುಧಾರಣೆಗಳನ್ನು ಜಾರಿಗೆ ತಂದಿದೆ ಮತ್ತು ಬ್ಯಾಂಕಿಂಗ್ನ ಎಲ್ಲಾ ಅಂಶಗಳಲ್ಲೂ ತಂತ್ರಜ್ಞಾನವನ್ನು ಸದುಪಯೋಗಪಡಿಸಿದೆ. ಇದರಿಂದ NPA ಗಳನ್ನು ಕಡಿಮೆ ಮಾಡಲು ಸಹಾಯಕವಾಯಿತು” ಎಂದಿದ್ದಾರೆ.
ಪಿಎಸ್ಬಿಗಳ ಕೆಟ್ಟ ಸಾಲಗಳು 2019 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ರೂ. 7.27 ಲಕ್ಷ ಕೋಟಿಯಾಗಿತ್ತು, ಇದು 2018 ರ ಮಾರ್ಚ್ ಅಂತ್ಯದ ವೇಳೆಗೆ 96 8.96 ಲಕ್ಷ ಕೋಟಿಯಿಂದ ಕಡಿಮೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
“ಸೆಪ್ಟೆಂಬರ್ 2019 ಕ್ಕೆ ಕೊನೆಗೊಂಡ ಒಂದೂವರೆ ವರ್ಷದ ಅವಧಿಯಲ್ಲಿ 2.03 ಲಕ್ಷ ಕೋಟಿಗಳ ದಾಖಲೆಯ ರಿಕವರಿ ಮಾಡಲಾಗಿದೆ, ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ 18 ಪಿಎಸ್ಬಿಗಳಲ್ಲಿ ಲಾಭ ವರದಿ ಆಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.