ನವದೆಹಲಿ: ಈ ತಿಂಗಳು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಆಗಮಿಸುವುದಕ್ಕೂ ಮುಂಚಿತವಾಗಿ, ಯುಎಸ್ ರಕ್ಷಣಾ ಸಂಸ್ಥೆ ಲಾಕ್ಹೀಡ್ ಮಾರ್ಟಿನ್ನ ಮಿಲಿಟರಿ ಹೆಲಿಕಾಪ್ಟರ್ ಖರೀದಿಗಾಗಿ ಭಾರತವು 2.6 ಬಿಲಿಯನ್ ಡಾಲರ್ ಒಪ್ಪಂದಕ್ಕೆ ಅಂತಿಮ ಅನುಮೋದನೆ ನೀಡಲು ಸಿದ್ಧವಾಗಿದೆ ಎಂದು ರಕ್ಷಣಾ ಮತ್ತು ಕೈಗಾರಿಕಾ ಮೂಲಗಳು ತಿಳಿಸಿವೆ.
ಭಿನ್ನಾಭಿಪ್ರಾಯಗಳಿಂದ ಕೂಡಿದ ಉಭಯ ದೇಶಗಳ ನಡುವಿನ ಕಾರ್ಯತಾಂತ್ರಿಕ ಸಂಬಂಧಗಳನ್ನು ಪುನರ್ ರೂಪಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಟ್ರಂಪ್ ಅವರ ಪ್ರವಾಸದ ಸಂದರ್ಭದಲ್ಲಿ ಬೇಕಾದ ಎಲ್ಲಾ ಪ್ರಯತ್ನಗಳನ್ನು ನಡೆಸಲಿದ್ದಾರೆ.
ಸಾಂಪ್ರದಾಯಿಕ ಪೂರೈಕೆದಾರ ರಷ್ಯಾದಿಂದ ದೂರ ಸರಿದ ಹಿನ್ನಲೆಯಲ್ಲಿ, 2007 ರಿಂದ ಅಮೆರಿಕಾದಿಂದ ಭಾರತದ ರಕ್ಷಣಾ ಖರೀದಿಗಳು 17 ಬಿಲಿಯನ್ ಡಾಲರ್ ತಲುಪಿದೆ. ಭಾರತವು ತನ್ನ ಮಿಲಿಟರಿಯನ್ನು ಆಧುನೀಕರಿಸಲು ಮತ್ತು ಚೀನಾದೊಂದಿಗಿನ ಅಂತರವನ್ನು ಕಡಿಮೆ ಮಾಡಲು ರಕ್ಷಣಾ ಖರೀದಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ.
ಮುಂದಿನ ಎರಡು ವಾರಗಳಲ್ಲಿ ಪ್ರಧಾನಿ ಮೋದಿಯವರ ಭದ್ರತೆ ಕುರಿತ ಸಂಪುಟ ಸಮಿತಿಯು ಭಾರತೀಯ ನೌಕಾಪಡೆಗಾಗಿ ಅಮೆರಿಕಾದ 24 ಎಂಹೆಚ್ -60 ಆರ್ಸೀಹೌಕ್ ಹೆಲಿಕಾಪ್ಟರ್ಗಳ ಖರೀದಿಯನ್ನು ಅನುಮೋದಿಸುವ ನಿರೀಕ್ಷೆಯಿದೆ ಎಂದು ರಕ್ಷಣಾ ಅಧಿಕಾರಿ ಮತ್ತು ಉದ್ಯಮದ ಮೂಲವೊಂದು ತಿಳಿಸಿದೆ.
“ಇದು ಸರ್ಕಾರದಿಂದ ಸರ್ಕಾರದ ಒಪ್ಪಂದವಾಗಿದೆ, ಒಪ್ಪಂದ ತೀರ ಸನಿಹಗೊಳ್ಳುತ್ತಿದೆ” ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಅಧ್ಯಕ್ಷ ಟ್ರಂಪ್ ಫೆಬ್ರವರಿ 24 ರಂದು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ, ಆದರೆ ದಿನಾಂಕ ಇನ್ನೂ ಔಪಚಾರಿಕವಾಗಿ ಘೋಷಣೆ ಆಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.